ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಶಿಕ್ಷಕರ ದಿನಾಚರಣೆ

“ಸಮಾಜ ಪರಿವರ್ತನೆಯಲ್ಲಿ ಶಿಕ್ಷಕರ ಪಾತ್ರ ಘಣನೀಯವಾದುದು”
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಶಿಕ್ಷಕರ ದಿನಾಚರಣೆ

ಪೂಜ್ಯ ಶ್ರೀಗಳವರಿಂದ ಆಶೀರ್ವಚನ
“ಕಲಿಯುವ ಮನಸ್ಸಿದ್ದರೆ ಎಲ್ಲರಿಂದಲೂ ಕಲಿಯಬಹುದು. ಶಿಕ್ಷಣ ಎನ್ನುವುದು ನಿಂತ ನೀರಲ್ಲ. ನಿರಂತರ ನಡೆಯುವ ಪ್ರಕ್ರಿಯೆ. ಧೀ ಶಕ್ತಿ ಜಾಗೃತಗೊಳ್ಳಬೇಕಾದರೆ, ಎಲ್ಲರಲ್ಲೂ ಅಡಗಿರುವ ಪ್ರತಿಭೆಗಳನ್ನು ಅರಳಿಸಲು ಶಿಕ್ಷಣದ ಅಗತ್ಯತೆ ಇದೆ. ಆದರ್ಶ ಸಮಾಜ ನಿರ್ಮಾಣವಾಗಬೇಕಾದರೆ ಆದರ್ಶ ಶಿಕ್ಷಕರಿರಬೇಕು. ಸಮಾಜದಲ್ಲಿ ಪರಿವರ್ತನೆಯನ್ನು ತರುವಲ್ಲಿ ಶಿಕ್ಷಕರ ಪಾತ್ರ ಬಹಳಷ್ಟಿದೆ. ಆರೋಗ್ಯ ಮತ್ತು ಶಿಕ್ಷಣ ಅದು ಸೇವೆಯಾಗಿರಬೇಕು. ಇದಕ್ಕೆಲ್ಲ ಪೂರಕವೆಂಬ0ತೆ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ನಮಗೆಲ್ಲ ಆದರ್ಶವಾಗಿದ್ದಾರೆ. ಜ್ಞಾನದಿಂದ ಸಮೃದ್ಧರಾಗಿರಬೇಕೆನ್ನುವುದೇ ಜಗದ್ಗುರು ಶಂಕರಾಚಾರ್ಯರು, ಸ್ವಾಮಿ ವಿವೇಕಾನಂದರ0ತಹ ಸಂತರ ಧ್ಯೇಯವಾಗಿದೆ. ಮಕ್ಕಳು ಎಲ್ಲಾ ಶಿಕ್ಷಕರಿಗೆ ಗೌರವಕೊಡುವವರಾಗಬೇಕು. ಪ್ರೀತಿ ಇದ್ದಲ್ಲಿ ವಿಶ್ವಾಸ ಖಂಡಿತವಾಗಿಯೂ ಇರುತ್ತದೆ.” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವತಿಯಿಂದ ಜರಗಿದ ಶಿಕ್ಷಕರ ದಿನಾಚರಣೆಯನ್ನು ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಆಶೀರ್ವಚನ ನೀಡಿದರು.
ಸಾಧ್ವಿ ಶ್ರೀ ಮಾತನಂದಮಯೀಯವರು ದಿವ್ಯ ಉಪಸ್ಥಿತಿಯನ್ನು ಕರುಣಿಸಿದ್ದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್ ಪ್ರಸ್ತಾವನೆಗೈದು ಶಿಕ್ಷಕರ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಶಾಲಾ ಮುಖ್ಯ ಶಿಕ್ಷಕಿ ರೇಣುಕಾ ಎಸ್. ರೈ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಎಲ್ಲಾ ಶಿಕ್ಷಕ-ಶಿಕ್ಷಕಿಯವರಿಗೆ ಸಮವಸ್ತç ಹಾಗೂ ಶಿಕ್ಷಕ ವೃಂದದವರಿಗೆ ಏರ್ಪಡಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ಪೂಜ್ಯ ಶ್ರೀಗಳವರು ವಿತರಿಸಿದರು. ವಿದ್ಯಾರ್ಥಿಗಳೆಲ್ಲರಿಗೂ ಸಿಹಿತಿಂಡಿ ಹಂಚಲಾಯಿತು.
ಶಾಲಾ ವಿದ್ಯಾರ್ಥಿಗಳಾದ ಕು. ನಿಶಾ ಸ್ವಾಗತಿಸಿ, ರಕ್ಷಿತ್ ವಂದಿಸಿದರು. ಕು. ಅಂಜಲಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಹನುಮಾನ್ ಚಾಲೀಸಾ ಪಠಣಗೈದು ನಾಮಸಂಕೀರ್ತನೆ ಮಾಡಿದರು.