ಒಡಿಯೂರು ಶ್ರೀ ಅಭಿನಂದನೆ

ಭಾರತ ಸರಕಾರವು ತೆಗೆದುಕೊಂಡ ದಿಟ್ಟ ಹೆಜ್ಜೆ ಬಲಪೂರ್ಣವಾದುದು. ವಿಶ್ವವೇ ಮೆಚ್ಚಿಕೊಳ್ಳುವಂತದ್ದು. ಉಗ್ರರ ಸದೆಬಡಿದು ಶಾಂತಿನೆಲೆಗೊಳಿಸುವ ಪರಿಕ್ರಮಕ್ಕೆ ಅಭಿನಂದನೆಗಳು. ಈಗಾಗಲೇ ಪೆಹಲ್‌ಗಾಮ್‌ನಲ್ಲಿ ಅಮಾಯಕರನ್ನು ಬಲಿ ತೆಗೆದುಕೊಂಡ ಉಗ್ರರ ಅಟ್ಟಹಾಸಕ್ಕೆ ಇತಿ ಹಾಡಲು ಆಪರೇಷನ್ ಸಿಂಧೂರದ ಮೂಲಕ ಉತ್ತರಿಸಿದ್ದು ಪ್ರಶಂಸನೀಯ. ದೇಶ, ಕಾಲ, ಸ್ಥಿತಿಯನ್ನು ಅರಿತು ಸ್ಪಂದಿಸಿದ ಪ್ರಧಾನಮಂತ್ರಿಗಳು, ರಕ್ಷಣಾ ಸಚಿವರು ಹಾಗೂ ದೇಶದ ಮೂರು ಸೇನೆಗಳ ಪ್ರಾಮಾಣಿಕ ಪ್ರಯತ್ನಕ್ಕೆ ಧನ್ಯವಾದಗಳು. ದೇಶ ಉಳಿದರೆ ಧರ್ಮ ಎಂಬAತೆ ನಡೆಸುವ ಪರಿಶ್ರಮಕ್ಕೆ ದೇಶದ ಸೇನಾನಿಗಳಿಗೆ ಬಲತುಂಬುವAತೆ ಆರಾಧ್ಯ ದೇವರಲ್ಲಿ ಪ್ರತ್ಯೇಕ ಪ್ರಾರ್ಥನೆಯನ್ನು ಮಾಡುತ್ತೇವೆ. ಭಾರತ್ ಮಾತಾ ಕೀ ಜೈ.
ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್