“ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಊರಿನಲ್ಲಿ ವಿದ್ಯಾಲಯ, ದೇವಾಲಯದ ಅಗತ್ಯವಿದೆ. ”

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಗೋಳಿತೊಟ್ಟು ವಲಯದ ವಾರ್ಷಿಕೋತ್ಸವದಲ್ಲಿ ಪೂಜ್ಯ ಶ್ರೀಗಳವರಿಂದ ಅಶೀರ್ವಚನ
ಎ.೧೬: “೪ಜಿ-೫ಜಿಯ ಇಂದಿನ ಆಧುನಿಕ ಯುಗದಲ್ಲಿ ಮಾತಾಜಿ, ಪಿತಾಜಿ, ಗುರೂಜಿ ಎಂಬ ತ್ರಿಜಿಗಳನ್ನು ಮರೆಯಬಾರದು. ನಿಸ್ವಾರ್ಥ ಸೇವೆ ಮತ್ತು ರಾಷ್ಟç ಸೇವೆ ಮಕ್ಕಳಿಂದ ಆರಂಭವಾಗಬೇಕು. ಈ ಬಗ್ಗೆ ಜಾಗೃತಗೊಳಿಸುವುದು ನಮ್ಮ ಕರ್ತವ್ಯವಾಗಿದೆ. ಅಹಂಕಾರವನ್ನು ತ್ಯಜಿಸುವುದೇ ಮಹಾತ್ಯಾಗ. ಅಹಂಕಾರ, ಮಮಕಾರ ಮರೆತರೆ ಭಗವಂತನ ಅನುಗ್ರಹ ಪ್ರಾಪ್ತಿಯಾಗಲಿದೆ. ವಿದ್ಯಾಲಯ ಮತ್ತು ದೇವಾಲಯ ಎರಡು ಕಣ್ಣುಗಳಿದ್ದಂತೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಊರಿನಲ್ಲಿ ವಿದ್ಯಾಲಯ, ದೇವಾಲಯದ ಅಗತ್ಯವಿದೆ. ಭಜನೆಯಲ್ಲಿ ಸಂಸ್ಕೃತಿ ಅಡಕವಾಗಿದೆ. ಸಂಸ್ಕಾರದ ಪಾಠವಿದೆ. ವ್ಯಕ್ತಿ ವಿಕಾಸದಿಂದಲೇ ಗ್ರಾಮವಿಕಾಸ ಎಂಬ ಧ್ಯೇಯವನ್ನಿರಿಸಿಕೊಂಡು ಗ್ರಾಮವಿಕಾಸ ಯೋಜನೆಯನ್ನು ಆರಂಭಿಸಲಾಗಿದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಗೋಳಿತೊಟ್ಟು ಸರಕಾರಿ ಉನ್ನತ ಹಿ.ಪ್ರಾ. ಶಾಲೆಯಲ್ಲಿ ಜರಗಿದ ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್(ರಿ.), ಒಡಿಯೂರು ಗುರುದೇವದತ್ತ ಸಂಸ್ಥಾನಮ್ ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಗೋಳಿತೊಟ್ಟು ವಲಯದ ಗೋಳಿತೊಟ್ಟು, ನೆಲ್ಯಾಡಿ ಹಾಗೂ ಪಟ್ಟೂರು ಘಟಸಮಿತಿಯ ವಾರ್ಷಿಕೋತ್ಸವ-ಸಾಮೂಹಿಕ ಶ್ರೀ ಸತ್ಯದತ್ತವ್ರತಪೂಜೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಹಾರಕ ರತ್ನ ಲ| ಎ. ಸುರೇಶ್ ರೈ ಅವರು ಮಾತನಾಡಿ “ನಮ್ಮ ಸಹಕಾರಿಯು ೨೦೧೧ರಲ್ಲಿ ಆರಂಭಗೊAಡು ೨೩ ಶಾಖೆಗಳು ಕಾರ್ಯಾಚರಿಸುತ್ತಿವೆ. ೮ ಜಿಲ್ಲೆಗಳನ್ನೊಳಗೊಂಡ ಮೈಸೂರು ವಲಯದಲ್ಲಿ ಸಂಘವು ಪ್ರಥಮ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲೂ ಶಾಖೆಯನ್ನು ತೆರೆಯಲಾಗುವುದು” ಎಂದರು.
ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀ ಗೋಪಾಲ ಗೌಡ ಅವರು ಮಾತನಾಡಿ ಪೂಜ್ಯ ಶ್ರೀಗಳವರ ಪಾದಸ್ಪರ್ಶದಿಂದ ಶಾಲೆಗೆ ಮತ್ತಷ್ಟು ಉತ್ತೇಜನ ಸಿಕ್ಕಿದೆ. ಒಡಿಯೂರು ಯೋಜನೆಯ ಸಂಘದ ಸದಸ್ಯರು ಶಾಲಾ ವಠಾರದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯಕ್ರಮ ಮಾಡುತ್ತಿದ್ದಾರೆ. ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಮಾತೇಶ್ ಭಂಡಾರಿ ಪ್ರಸ್ತಾವನೆಗೈದು “ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಸುಮಾರು ೮೦೦೦ ಸಂಘಗಳಿದ್ದು ೬೦೦೦೦ಕ್ಕೂ ಮಿಕ್ಕಿದ ಸದಸ್ಯರನ್ನು ಒಳಗೊಂಡಿದೆ. ೩೦೦ ಕಾರ್ಯಕರ್ತರು ಸೇವೆ ಸಲ್ಲಿಸುತ್ತಿದ್ದು ಅವರ ಜೊತೆ ಘಟಸಮಿತಿಯ ಪದಾಧಿಕಾರಿಗಳು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಯೋಜನೆಯ ಮೂಲಕ ಸದಸ್ಯರಿಗೆ ಆರ್ಥಿಕ ಸಹಕಾರ, ವಿಮಾ ಯೋಜನೆಯ ಸೌಲಭ್ಯ, ಸರಳ ದಾಖಲೆಗಳ ಮೂಲಕ ಸಾಲ ವಿತರಣೆ ಮಾಡಲಾಗುತ್ತಿದೆ. ಗೋಳಿತೊಟ್ಟು ವಲಯ ಶೇ.೧೦೦ ಸಾಲ ವಸೂಲಾತಿ ಮೂಲಕ ಮಾದರಿ ವಲಯವಾಗಿದೆ. ಪೂಜ್ಯ ಶ್ರೀಗಳವರ ಸಂಕಲ್ಪದAತೆ ಗ್ರಾಮವಿಕಾಸ ಯೋಜನೆ ಹಾಗೂ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಜೊತೆಯಾಗಿ ಸಮಾಜದ ಹಾಗೂ ಹಿಂದುಳಿದ ಜನರ ಏಳಿಗೆಗೆ ಶ್ರಮಿಸುತ್ತಿದೆ” ಎಂದರು.
ಗೋಳಿತೊಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸವಿತಾ ಪುಲಾರ, ಯೋಜನೆಯ ಪಟ್ಟೂರು ಘಟಸಮಿತಿ ಅಧ್ಯಕ್ಷ ಶ್ರೀ ದಿನೇಶ್ ಶೆಟ್ಟಿ, ಗೋಳಿತೊಟ್ಟು ಘಟಸಮಿತಿ ಅಧ್ಯಕ್ಷ ಶ್ರೀ ರವಿಚಂದ್ರ ಉಪಸ್ಥಿತರಿದ್ದರು.
ಈ ಸುಸಂದರ್ಭ ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ಸತ್ಯದತ್ತವ್ರತ ಪೂಜೆ ನಡೆಯಿತು.
ಕಾರ್ಯಕ್ರಮದಲ್ಲಿ ನಾಟಿ ವೈದ್ಯೆಯರಾದ ಶ್ರೀಮತಿ ಡೀಕಮ್ಮ ಅಲೆಕ್ಕಿ, ಶ್ರೀಮತಿ ಧರ್ಣಮ್ಮ ಪೊಸಳಿಗೆ ನೆಲ್ಯಾಡಿ, ಶ್ರೀದೇವಿ ಇಲೆಕ್ಟಿçಕಲ್ಸ್ ಮತ್ತು ಹಾರ್ಡ್ವೇರ್‌ನ ಶ್ರೀ ವಸಂತ ರಾವ್, ನಿವೃತ್ತ ಸೈನಿಕ ಶ್ರೀ ಕರುಣಾಕರ ಶೆಟ್ಟಿ ಅಂಬುಡೇಲು ಇವರನ್ನು ಸನ್ಮಾನಿಸಲಾಯಿತು.
ನೆಲ್ಯಾಡಿ ಘಟ ಸಮಿತಿ ಅಧ್ಯಕ್ಷ ಗಂಗಾಧರ ಶೆಟ್ಟಿ ಸ್ವಾಗತಿಸಿ, ಪಟ್ಟೂರು ಘಟಸಮಿತಿ ಸದಸ್ಯ ಶ್ರೀ ಅಣ್ಣು ಬಾಳೆಹಿತ್ಲು ವಂದಿಸಿದರು. ಉಪ್ಪಿನಂಗಡಿ ವಲಯಾಧ್ಯಕ್ಷ ಶ್ರೀ ದಿನೇಶ ಗಾಣಂತಿ ಮತ್ತು ಸಂಯೋಜಕಿ ಶ್ರೀಮತಿ ಜಯಂತಿ ಕಾರ್ಯಕ್ರಮ ನಿರೂಪಿಸಿದರು. ಕೊಣಾಲು ತಿರ್ಲೆ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯವರಿAದ ಕುಣಿತ ಭಜನೆ ನಡೆಯಿತು. ಬಳಿಕ ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು