“ಆರಾಧನೆಯ ಮೂಲಕ ಜೀವನದಲ್ಲಿ ನೆಮ್ಮದಿ ಮತ್ತುಸಂತೃಪ್ತಿ ಕಾಣಲು ಸಾಧ್ಯ”

ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಜರಗಿದ
ಶ್ರೀ ಒಡಿಯೂರು ರಥೋತ್ಸವ-ಬ್ರಹ್ಮಕಲಶೋತ್ಸವದ ಧರ್ಮಸಭೆಯಲ್ಲಿ
ಪೂಜ್ಯ ಶ್ರೀಗಳವರಿಂದ ಧರ್ಮ ಸಂದೇಶ
“ಅಧ್ಯಾತ್ಮಿಕ ಬೆಳಕಿನಿಂದ ಮಾತ್ರ ರಾಷ್ಟ್ರ ಬೆಳಗಲು ಸಾಧ್ಯ. ಮನೆಯಿಂದಲೇ ಧರ್ಮ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಲಿ. ಜೀವನ ರಥ ಎಳೆಯುವುದು ಸುಲಭವಲ್ಲ. ಅದಕ್ಕೆ ದೈವೀಕೃಪೆ ಬೇಕು. ಆರಾಧನೆಯ ಮೂಲಕ ಜೀವನದಲ್ಲಿ ನೆಮ್ಮದಿ ಮತ್ತು ಸಂತೃಪ್ತಿ ಕಾಣಲು ಸಾಧ್ಯ. ಶರೀರವು ಒಂದು ರಥವಿದ್ದಂತೆ. ಜೀವನ ರಥದ ಪಥ ಧರ್ಮ. ಧರ್ಮದ ಪಥದಲ್ಲಿ ನಡೆದರೆ ಯಶಸ್ಸು ಖಂಡಿತ. ಧರ್ಮಾನುಷ್ಠಾನವಾದರೆ ಬದುಕು ಹಸನಾಗಲು ಸಾಧ್ಯ” ಎಂದು ಪರಮಪೂಜ್ಯ ಸ್ವಾಮೀಜಿಯವರು ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಜರಗಿದ ಶ್ರೀ ಒಡಿಯೂರು ರಥೋತ್ಸವ-ಬ್ರಹ್ಮಕಲಶೋತ್ಸವದ ಧರ್ಮಸಭೆಯಲ್ಲಿ ಧರ್ಮ ಸಂದೇಶ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶೀರ್ವಚನ ನೀಡಿ “ಆರಾಧನೆಯ ಮೂಲಕ ದೇವ ಋಣ, ಸೇವೆ ಮಾಡಿ ಋಷಿ ಋಣ, ಮಾತಾಪಿತರ ಸೇವೆಯ ಮೂಲಕ ಪಿತೃ ಋಣ ಸಂದಾಯ ಮಾಡಿ ಋಣತ್ರಯಗಳನ್ನು ಪೂರೈಸಿದಾಗ ಜೀವನ ಸಾರ್ಥಕವಾಗುವುದು. ನಾವೆಲ್ಲರೂ ಪುಣ್ಯವಂತರು. ಪೂಜ್ಯ ಶ್ರೀಗಳ ಸಂಕಲ್ಪ ಶಕ್ತಿ ಇಂದಿಲ್ಲಿ ಸಾಕಾರವಾಗಿದೆ. ಉತ್ಸವಗಳು ಅಂತರ0ಗದ ವಿಕಸನಕ್ಕೆ ಪೂರಕ ಶಕ್ತಿ. ಸತ್ಸಂಗ, ಉತ್ಸವಗಳು ಜೀವನದ ಸಾರ್ಥಕತೆಗೆ ರಹದಾರಿ” ಎಂದರು.


ಶ್ರೀಧಾಮ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ “ಸಮಾಜಕ್ಕೆ ಶಕ್ತಿ ನೀಡುವ ಆದರ್ಶ ಬ್ರಹ್ಮಕಲಶ ಇದಾಗಿದೆ. ಸನಾತನವಾದ ಆಚಾರ ವಿಚಾರಗಳಿಗೆ ಬೆಳಕು ಚೆಲ್ಲಿದ ಕ್ಷೇತ್ರ ಒಡಿಯೂರು. ಸಮಾಜದ ಏಳಿಗೆಗೆ ಪೂಜ್ಯ ಶ್ರೀಗಳ ಪಾತ್ರ ಮಹತ್ವದ್ದು. ಸಮರ್ಪಣಾ ಭಾವದ ಸೇವೆ ನಮ್ಮದಾಗಬೇಕು. ಗುಣಕ್ಕೆ ಮತ್ಸರವಿಲ್ಲ. ಪೂಜ್ಯ ಶ್ರೀಗಳ ಪ್ರೀತಿ ಅಪಾರ. ವಿಶ್ವಕ್ಕೆ ಕಾಣುವ ಕಾಯಕ ಶ್ರೀಕ್ಷೇತ್ರದಲ್ಲಿ ಆಗಿದೆ” ಎಂದರು.
ಪಯ್ಯಡೆ ಇಂಟರ್‌ನ್ಯಾಷನಲ್ ಹೋಟೆಲ್ಸ್ ಪ್ರೈ. ಲಿ.,ಮುಂಬೈ ಇದರ ನಿರ್ದೇಶಕ ಡಾ. ಪಿ.ವಿ. ಶೆಟ್ಟಿ ಮಾತನಾಡಿ “ಪೂಜ್ಯ ಶ್ರೀಗಳ ಆಶೀರ್ವಾದದಿಂದ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಸಮಾಜದ ಏಳಿಗೆಗೆ ಪೂಜ್ಯ ಶ್ರೀಗಳ ಪಾತ್ರ ಮಹತ್ವದ್ದು. ಕ್ಷೇತ್ರದ ಅಭಿವೃದ್ಧಿಯಲ್ಲಿ ನಾವುಗಳು ಭಾಗಿಗಳಾಗುತ್ತೇವೆ” ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀ ಮೋನಪ್ಪ ಭಂಡಾರಿ ಇವರು ಮಾತನಾಡಿ “ಗುರುಗಳ ಮಾತಿನಂತೆ ನಡೆದರೆ ಧರ್ಮದ ಉಳಿವು ಸಾಧ್ಯ. ಹಿಂದೂ ಧರ್ಮ ಅಜೇಯವಾದುದು. ನಮ್ಮ ಧರ್ಮದ ಶಕ್ತಿ ಅಪಾರವಾದುದು. ನಮ್ಮ ಮಕ್ಕಳಿಗೆ ಧರ್ಮದ ಬಗೆಗಿನ ಅರಿವು ಮೂಡಿಸುವ ಕೆಲಸವಾಗಬೇಕು. ಧರ್ಮಕ್ಕೆ ಪೂರಕ ಕೆಲಸ ನಮ್ಮಿಂದಾಗಬೇಕು” ಎಂದರು.
ದAತ ವೈದ್ಯರು, ಸಾಹಿತಿ ಡಾ. ಮುರಲೀಮೋಹನ್ ಚೂಂತಾರು ಇವರು ಮಾತನಾಡಿ “ವೈದ್ಯರು ಸಮಾಜಮುಖಿಯಾಗಿ ಕೆಲಸ ಮಾಡಿದಲ್ಲಿ ಸಮಾಜದ ಆರೋಗ್ಯ ಹೆಚ್ಚುತ್ತದೆ. ಕಷ್ಟದಲ್ಲಿರುವ ಜನರಿಗೆ ಸಾಂತ್ವನ ಹೇಳುವ ಕೆಲಸ ಪೂಜ್ಯ ಶ್ರೀಗಳಿಂದ ಆಗುತ್ತಿದೆ. ರೋಗವಿಲ್ಲದವ ಆರೋಗ್ಯವಂತ. ಜೀವನೋತ್ಸಾಹವೇ ಆರೋಗ್ಯ. ಆರೋಗ್ಯ ಪೂರ್ಣ ಸಮಾಜ ಕಟ್ಟುವ ಕೆಲಸ ಪೂಜ್ಯ ಶ್ರೀಗಳವರಿಂದ ಆಗುತ್ತಿದೆ” ಎಂದರು.
ಶಂಕರ್ ಇಲೆಕ್ಟಿçಕಲ್ಸ್ ಸರ್ವಿಸಸ್‌ನ ಆಡಳಿತ ನಿರ್ದೇಶಕ ಶ್ರೀ ರಾಜೇಶ್ ಶೆಟ್ಟಿ ಇವರು ಮಾತನಾಡಿ “ಈ ಕ್ಷೇತ್ರದ ಮಹಿಮೆ ಅಪಾರ. ನಾವು ಮಾಡುವ ಕೆಲಸದಲ್ಲಿ ಧರ್ಮವಿರಬೇಕು. ಫಲಾಪೇಕ್ಷೆ ಇಲ್ಲದೆ ಮಾಡುವ ಪ್ರಯತ್ನದಲ್ಲಿ ಯಶಸ್ಸು ಹೆಚ್ಚು. ಹಿರಿಯರು ಹಾಕಿ ಕೊಟ್ಟ ದಾರಿಯಲ್ಲಿ ಮುಂದುವರಿಯಬೇಕು. ನಾವೆಲ್ಲರೂ ಧರ್ಮ ರಕ್ಷಣಿಯಲ್ಲಿ ತೊಡಗಬೇಕು. ಕ್ಷೇತ್ರದ ಪ್ರತಿಯೊಂದೂ ಬೆಳವಣಿಗೆಯಲ್ಲಿ ನಾವೂ ಪಾಲುದಾರರಾಗುತ್ತೇವೆ” ಎಂದರು.


ಬರೋಡ ಶಶಿ ಕ್ಯಾಟರಿಂಗ್ ಸರ್ವಿಸಸ್‌ನ ಆಡಳಿತ ನಿರ್ದೇಶಕ, ರಥೋತ್ಸವ ಸಮಿತಿಯ ಅಧ್ಯಕ್ಷ ಶ್ರೀ ಶಶಿಧರ ಬಿ.ಶೆಟ್ಟಿ ಇವರು ಮಾತನಾಡಿ “ಧರ್ಮರಕ್ಷಣೆ ಮಾಡಿದಲ್ಲಿ ದೇವರು ಒಲಿಯಲು ಸಾಧ್ಯ. ನಾವು ಜೀವನದಲ್ಲಿ ಮಾಡಿದ ಪುಣ್ಯದ ಫಲ ನಮಗೆ ಲಭಿಸಲು ಸಾಧ್ಯ. ದೈವ ದೇವರ ಕೆಲಸದಲ್ಲಿ ನಮ್ಮನ್ನು ನಾವು ತೊಡಿಗಿಸಿಕೊಳ್ಳುವ ಮನಸ್ಸು ನಮ್ಮದಾಗಬೇಕು. ಒಡಿಯೂರು ಕ್ಷೇತ್ರದ ಬ್ರಹ್ಮಕಲಶ ಇತರರಿಗೆ ಮಾದರಿ. ಸಮಾಜಮುಖಿ ಕೆಲಸ ಕ್ಷೇತ್ರದಿಂದ ಆಗುತ್ತಿರುವುದು ಸಂತಸದ ವಿಚಾರ” ಎಂದರು.
ಮುಖ್ಯ ಅತಿಥಿಗಳಾದ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಶ್ರೀ ಪಟ್ಲ ಸತೀಶ್ ಶೆಟ್ಟಿ, ವಿದ್ಯಾಪ್ರಭೋದಿನಿ ಪ್ರೌಢಶಾಲೆ ಮತ್ತು ಜ್ಯೂನಿಯರ್ ಕಾಲೇಜು, ಎರ್ಮಾಳ್ ಬಡ, ಉಡುಪಿ ಇದರ ಅಧ್ಯಕ್ಷರು, ನವಿಮುಂಬೈ ಮಹಾನಗರ ಪಾಲಿಕೆ ಸದಸ್ಯ ಶ್ರೀ ಸುರೇಶ್ ಜಿ.ಶೆಟ್ಟಿ, ಅಂತರಾಷ್ಟಿçÃಯ ತುಳುವ ಮಹಾಸಭೆ, ಮುಂಬೈನ ಪ್ರಧಾನ ಸಂಚಾಲಕ ಶ್ರೀ ಮೋರ್ಲ ರತ್ನಾಕರ ಶೆಟ್ಟಿ, ಹೈಟೆಕ್ ಇಲೆಕ್ಟಿçಫಿಕೇಶನ್ ಇಂಜಿನಿಯರಿAಗ್‌ನ ಆಡಳಿತ ನಿರ್ದೇಶಕ ಶ್ರೀ ರವಿನಾಥ್ ವಿ.ಶೆಟ್ಟಿ ಅಂಕಲೇಶ್ವರ, ಕೇರಳ ಸರಕಾರ ಕೊಲ್ಲಂನ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀ ಅಜಿತ್‌ಕುಮಾರ್ ಪಂದಳಮ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ೧೩೫ ಅರ್ಹ ಫಲಾನುಭವಿಗಳಿಗೆ ರೂ.೧೨.೭೭,೦೦೦.೦೦ ಮೊತ್ತದ ಸಹಾಯಧನ ಚೆಕ್ ವಿತರಣೆ ಮಾಡಲಾಯಿತು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್.ರೈ ಆಶಯ ಗೀತೆ ಹಾಡಿದರು. ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮುಂಬೈ ಘಟಕದ ಪ್ರಧಾನ ಕಾರ್ಯದರ್ಶಿ ಪೇಟೆಮನೆ ಶ್ರೀ ಪ್ರಕಾಶ್ ಕೆ.ಶೆಟ್ಟಿ ಸ್ವಾಗತಿಸಿದರು. ರಥೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸದರು. ಸಂಘಟನಾ ಕಾರ್ಯದರ್ಶಿ ಶ್ರೀ ಮಾತೇಶ್ ಭಂಡಾರಿ ವಂದಿಸಿದರು.
ಬ್ರಹ್ಮಕಲಶಾಭಿಷೇಕ-ಶ್ರೀ ಸತ್ಯನಾರಾಯಣ ಪೂಜೆ-ವೈಭವದ ರಥಯಾತ್ರೆ
ಪ್ರಾತಃಕಾಲ ಶ್ರೀ ದತ್ತಾಂಜನೇಯ ದೇವರಿಗೆ ಬ್ರಹ್ಮಕಲಶಾಭಿಷೇಕ ನೆರವೇರಿತು. ಬೆಳಗ್ಗಿನ ಮಹಾಪೂಜೆಯ ಬಳಿಕ ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ನಾಗತಂಬಿಲ ನಡೆಯಿತು.
ಬೆಳಿಗ್ಗೆ ಗಂಟೆ ೯ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭಗೊ0ಡು ಬಳಿಕ ಪೂಜೆಯ ಮಹಾಮಂಗಳಾರತಿ ಜರಗಿತು. ಅಪರಾಹ್ಣ ಘಂಟೆ ೨.೦೦ರಿಂದ ಶ್ರೀ ಆಗಮ ಪೆರ್ಲ ಮತ್ತು ಬಳಗದವರಿಂದ ‘ಶಾಸ್ತ್ರೀಯ ಸಂಗೀತ’ ಏರ್ಪಟ್ಟಿತು.
ರಾತ್ರಿ ಶ್ರೀ ದತ್ತಾಂಜನೇಯ ದೇವರ ವೈಭವೋಪೇತ ರಥಯಾತ್ರೆ – ಶ್ರೀ ಸಂಸ್ಥಾನದಿ0ದ ಗ್ರಾಮ ದೈವಸ್ಥಾನ (ಮಿತ್ತನಡ್ಕ) ಭೇಟಿ, ಕನ್ಯಾನ ಪೇಟೆ ಸವಾರಿ, ನಂತರ ಸದ್ಗುರು ಶ್ರೀ ನಿತ್ಯಾನಂದ ಮಂದಿರದಲ್ಲಿ ವಿಶೇಷ ಪೂಜೆಯ ಬಳಿಕ ಶ್ರೀ ಸಂಸ್ಥಾನಕ್ಕೆ ರಥವು ಹಿಂತಿರುಗಿತು.
ವಿಶೇಷ ಆಕರ್ಷಣೆ: ವಿವಿಧ ಭಜನ ಮಂಡಳಿಗಳಿ0ದ ಕುಣಿತ ಭಜನೆ, ವಾದ್ಯ, ಚೆಂಡೆಮೇಳ, ಸಿಡಿಮದ್ದು ಪ್ರದರ್ಶನ, ಕೀಲುಗೊಂಬೆ ಕುಣಿತ, ತಾಲೀಮು ಪ್ರದರ್ಶನ, ವಿವಿಧ ಆಕರ್ಷಣೀಯ ಟ್ಯಾಬ್ಲೋಗಳು ವಿಶೇಷ ಆಕರ್ಷಣೆಯಾಗಿತ್ತು.
ಸಂಜೆ ಘಂಟೆ ೬.೦೦ರಿಂದ: ಕನ್ಯಾನ ಸದ್ಗುರು ನಿತ್ಯಾನಂದ ಸ್ವಾಮಿ ಮಂದಿರದ ಬಳಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ, ಪಾವಂಜೆ ಮೇಳದವರಿಂದ ಶ್ರೀ ಶ್ರೀಧರ ಕೆ.ಶೆಟ್ಟಿ ಗುಬ್ಯ ಮೇಗಿನಗುತ್ತು ಪ್ರಾಯೋಜಕತ್ವದಲ್ಲಿ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ರಾತ್ರಿ ಮಿತ್ತನಡ್ಕ ಶ್ರೀ ಮಲರಾಯಿ ದೈವಸ್ಥಾನದ ಬಳಿ ಸಾಂಸ್ಕೃತಿಕ ವೈವಿಧ್ಯ, ಕಮ್ಮಾಜೆಯಲ್ಲಿ ಅಮ್ಮಾ ಗ್ರೂಪ್ಸ್ನ ವತಿಯಿಂದ ‘ಆಂಟಿ ಅಂಕಲ್’ ತುಳು ಹಾಸ್ಯಮಯ ನಾಟಕ ನಡೆಯಿತು.