“ಅಧ್ಯಾತ್ಮ ವಿದ್ಯೆಯಿಂದ ಬದುಕಿನ ಮೂಲ ಉದ್ದೇಶಗಳನ್ನು ಈಡೇರಿಸಲು ಸಹಕಾರಿ”
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ, ಶ್ರೀ ಗುರುದೇವ ಬಾಲವಿಕಾಸ ಕೇಂದ್ರದ ವಿದ್ಯಾರ್ಥಿಗಳ ವಸಂತ ಶಿಬಿರ ಉದ್ಘಾಟಿಸಿ
ಪೂಜ್ಯ ಶ್ರೀಗಳವರಿಂದ ಆಶೀರ್ವಚನ
ಎ.೦೨: “ವ್ಯಕ್ತಿ ವಿಕಾಸವಾಗದೆ ರಾಷ್ಟç ವಿಕಾಸ ಸಾಧ್ಯವಿಲ್ಲ. ಜೀವನದ ಪ್ರತಿಕ್ಷಣವೂ ಶಿಕ್ಷಣವಾಗಬೇಕು. ಬಾಲವಿಕಾಸ ಕೇಂದ್ರದ ಮೂಲಕ ಜ್ಞಾನದ ವಿಕಾಸವಾಗಬೇಕು ಅಂತರAಗದ ವಿಕಾಸವಿಲ್ಲದೆ ಯಾವುದು ಸಾಧ್ಯವಿಲ್ಲ. ಬದುಕಿನಲ್ಲಿ ಕ್ರಿಯಾಶೀಲತೆ ಮುಖ್ಯವಾದುದು. ಕೌಶಲ್ಯತೆಯು ಬಾಲ್ಯದಿಂದಲೇ ಪ್ರಾರಂಭವಾಗುತ್ತದೆ. ಅಂತರAಗದಲ್ಲಿರುವ ಕಳೆಯನ್ನು ಕಿತ್ತು ಆತ್ಮಜ್ಯೋತಿಯನ್ನು ಬೆಳಗಬೇಕು. ಮಕ್ಕಳಿಗೆ ಬೇಕಾದ ಆಟ-ಕೂಟದ ಜೊತೆಗೆ ಶಿಕ್ಷಣವನ್ನು ಒದಗಿಸಲಾಗುತ್ತದೆ. ಬಾಲ ವಿಕಾಸದ ಶಿಕ್ಷಕಿಯರು ತಾಯಿಯ ಸ್ಥಾನದಲ್ಲಿದ್ದು ಮಕ್ಕಳ ಉನ್ನತಿಗೆ ಶ್ರಮಿಸಬೇಕು. ಇದರ ಜೊತೆಗೆ ಪೋಷಕರು ಸೇರಿಕೊಂಡರೆ ಇನ್ನಷ್ಟು ವಿಕಾಸವಾಗುತ್ತದೆ. ಬದುಕಿನ ಮೂಲ ಉದ್ದೇಶಗಳನ್ನು ಈಡೇರಿಸಲು ಸಹಕಾರಿಯಾಗುವುದು. ಆಧ್ಯಾತ್ಮ ವಿದ್ಯೆಯಿಂದ ಮನುಷ್ಯನಲ್ಲಿರುವ ಎಲ್ಲಾ ದ್ವೇಷಗಳು ಮಾಯವಾಗಿ ಪ್ರೀತಿ ಮೂಡುತ್ತದೆ. ಧರ್ಮ ಪ್ರಜ್ಞೆಯೊಂದಿಗೆ ರಾಷ್ಟç ನಿರ್ಮಾಣದ ಕಾರ್ಯವಾಗಬೇಕು. ಇದನ್ನು ಬಾಲವಿಕಾಸದ ಮೂಲಕ ಮಾಡಬಹುದು. ಚಂಚಲ ಮನಸ್ಸಿನ ಮಕ್ಕಳನ್ನು ಒಂದುಗೂಡಿಸಿ ಅವರಲ್ಲಿ ಜ್ಞಾನ ವಿಕಾಸವನ್ನು ಮಾಡುವಂತಹ ಶಿಕ್ಷಕಿಯವರಿಗೆ ಅಭಿನಂದನೆಗಳು. ನಾವು ಬದುಕುತ್ತಾ ಸಮಾಜವನ್ನು ಬದುಕಲು ಬಿಡೋಣ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಜರಗಿದ ಶ್ರೀ ಗುರುದೇವ ಬಾಲವಿಕಾಸ ಕೇಂದ್ರದ ವಿದ್ಯಾರ್ಥಿಗಳ ಹಾಗೂ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿಗಳ ವಸಂತ ಶಿಬಿರವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಆಶೀರ್ವಚನಗೈದರು.
ಸಾದ್ವಿ ಶ್ರೀ ಮಾತಾನಂದಮಯೀಯವರು ತಮ್ಮ ಆಶೀರ್ವಚನದಲ್ಲಿ “ಸುಸಂಸ್ಕಾರ ವ್ಯಕ್ತಿಗಳಿಂದ ಸುದೃಢ ಸಮಾಜ ನಿರ್ಮಾಣ ಸಾಧ್ಯ. ಶಾಲೆಯಲ್ಲಿ ಸಿಲೆಬಸ್ ಮುಗಿಸುವ ಆತುರತೆಯಲ್ಲಿ ಮೌಲ್ಯ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇಂತಹ ಬಾಲವಿಕಾಸ ತರಗತಿಗಳು ಇದಕ್ಕೆ ಪೂರಕವಾಗುತ್ತದೆ. ಹತ್ತಿಗೆ ಸಂಸ್ಕಾರ ನೀಡಿದಾಗ ಬಟ್ಟೆ ತಯಾರಾಗುತ್ತದೆ. ಹಾಲಿಗೆ ಸಂಸ್ಕಾರ ನೀಡಿದಾಗ ತುಪ್ಪ ತಯಾರಾಗುತ್ತದೆ. ಆಗ ಅದರ ಮೌಲ್ಯ ಹೆಚ್ಚಾಗುತ್ತದೆ. ಹಾಗೆಯೇ ಮನುಷ್ಯನಿಗೂ ಬಾಲ್ಯದಿಂದಲೇ ಸಂಸ್ಕಾರ ಸಿಕ್ಕಿದಾಗ ಅವರ ಜೀವನ ಮೌಲ್ಯಯುತವಾಗುತ್ತದೆ” ಎಂದರು.
ಶಾಲಾ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿನಿಯರು ಪ್ರಾರ್ಥನಾಗೀತೆ ಹಾಡಿದರು.
ಶಾಲಾ ಸಹ ಶಿಕ್ಷಕ ಶ್ರೀ ಶೇಖರ್ ಶೆಟ್ಟಿ ಬಾಯಾರು ಇವರು ಶಿಬಿರ ಗೀತೆಯನ್ನು ಮಕ್ಕಳಿಗೆ ಕಲಿಸಿಕೊಟ್ಟರು ಮತ್ತು ಮಕ್ಕಳೆಲ್ಲರಿಂದ ಅವರ ಮಾರ್ಗದರ್ಶನದಂತೆ ಸುಶ್ರಾವ್ಯವಾಗಿ ಶಿಬಿರಗೀತೆಯನ್ನು ಹಾಡಿಸಿದರು.
ಬಾಲವಿಕಾಸದ ಪ್ರಾರ್ಥನೆಯನ್ನು ಸಾಮೂಹಿಕವಾಗಿ ಹಾಡಲಾಯಿತು. ನಂತರ ಬಾಲವಿಕಾಸದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಶಿಕ್ಷಕಿ ಕುಮಾರಿ ಗಂಗಾ ಇವರು ನಿರೂಪಣೆ ಮಾಡಿದರು.