“ಅಧ್ಯಾತ್ಮಿಕತೆಯಿಂದ ನಮ್ಮ ಜೀವನದಲ್ಲಿ ನೆಮ್ಮದಿ, ಸಮತೋಲನ ಸಾಧ್ಯ”
ಪುಣೆ ಶ್ರೀ ಗುರುದೇವ ಸೇವಾ ಬಳಗ 21ನೇ ವಾರ್ಷಿಕೋತ್ಸವದಲ್ಲಿ – ಪೂಜ್ಯ ಶ್ರೀಗಳವರಿಂದ ಆಶೀರ್ವಚನ
ಪುಣೆ, ದ.01: “ಸಂಸ್ಕಾರವಿಲ್ಲದ ಶಿಕ್ಷಣ ಅಸಂಪೂರ್ಣ. ಮಕ್ಕಳು ಚಾರಿತ್ರö್ಯವಂತರಾಗಲು, ಗುಣವಂತರಾಗಲು, ಸಂಸ್ಕಾರವಂತರಾಗಲು ಮನೆಯಲ್ಲಿನ ನಮ್ಮ ಸಂಸ್ಕೃತಿ ಏನಿದೆಯೋ ಅದರ ಅರಿವನ್ನು ತಿಳಿಸಿಕೊಡುವ ಜೊತೆಯಲ್ಲಿ ಧರ್ಮದ ಜ್ಞಾನ, ಪ್ರಜ್ಞೆಯನ್ನು ಮೂಡಿಸಬೇಕು. ಗುರು ದತ್ತಾತ್ರೇಯರ ಅವತಾರ ಎಂದರೆ ಅದು ಜ್ಞಾನದ ಅವತಾರ. ಭಗವಂತನ ಪ್ರಾರ್ಥನೆ ದಿನನಿತ್ಯದ ನಿರಂತರ ಕರ‍್ಯವಾಗಬೇಕು. ನಿರಂತರ ಗುರುಸ್ಮರಣೆಯೊಂದಿಗೆ ಸೇವಾಕರ‍್ಯಗಳು ನಡೆಯಲಿ. ಜ್ಞಾನದಿಂದ ಆದರ್ಶ ಸಂಸ್ಕಾರಯುತವಾದ ಜೀವನ ಸಾಧ್ಯ. ಇಂದು ಸನಾತನ ಹಿಂದೂ ಧರ್ಮದ ರಕ್ಷಣೆ ಮತ್ತು ದೇಶದ ರಕ್ಷಣೆ ಆಗಬೇಕಾದ ಅನಿವರ‍್ಯತೆ ಇದೆ. ಜಾತೀಯತೆಯನ್ನು ಮರೆತು, ಧರ್ಮ ಪಾಲನೆ, ದೇಶ ಪ್ರೇಮ ಮೂಡಿಸುವ ಘನ ಕರ‍್ಯವಾಗಲಿ. ಅಧ್ಯಾತ್ಮಿಕತೆಯಿಂದ ನಮ್ಮ ಜೀವನದಲ್ಲಿ ನೆಮ್ಮದಿ, ಸಮತೋಲನ ಸಾಧ್ಯ. ಮೌಲ್ಯಯುತವಾದ ಉತ್ತಮ ವಿಚಾರಗಳು ನಮ್ಮಲ್ಲಿರಬೇಕು. ಜೀವನದಲ್ಲಿ ದಾರಿ ತಪ್ಪಿದರೆ ಮತ್ತು ಮಾತು ತಪ್ಪಿದರೆ ಕಷ್ಟ. ನಡೆ-ನುಡಿಯಲ್ಲಿ ಧರ್ಮದ ಮರ್ಮ ಅಡಗಿದೆ. ಆತ್ಮಾವಲೋಕನ ಮಾಡಿಕೊಂಡಾಗ ಯಾವುದೇ ಧರ್ಮದ ಚೌಕಟ್ಟಿನಲ್ಲಿ ತನ್ನ ಆತ್ಮೊದ್ಧಾರದ ಮೂಲ ಸಿಗಬಹುದು. ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಸೇವೆ ನಿರಂತರವಾಗಿದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಜಿಯವರು ಪುಣೆಯ ಬಾಣೇರ್‌ನಲ್ಲಿರುವ ಬಂಟರ ಭವನದ ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕೃತಿಕ ಕೇಂದ್ರದಲ್ಲಿ ಜರಗಿದ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಪುಣೆ ಘಟಕದ 21ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಭಗವದ್ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಸಾಧ್ವ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಉಪಸ್ಥಿತರಿದ್ದು “ಪ್ರಕೃತಿಯೊಂದಿಗೆ ಕೂಡಿಕೊಂಡ ಮನುಷ್ಯ ಜೀವನ ಮರದ ಎಲೆ, ರೆಂಬೆ, ಕಾಂಡ, ಬೇರುಗಳಂತೆ ಹೊಂದಾಣಿಕೆಯಲ್ಲಿ ಬೆಳೆದರೆ ಸುಂದರವಾಗುತ್ತದೆ. ಗುರು ಎಂದರೆ ಪರಮವಾದ ಆತ್ಮಜ್ಞಾನವನ್ನು ಕೊಡುವವರು. ಮನಸ್ಸು ಅನೇಕ ಚಿಂತೆಗಳಿಂದ ಕೂಡಿದುದು, ಸತ್ಯದ ಅರಿವು ಮೂಡಲು ಏಕಾಗ್ರತೆಯ ಮನಸ್ಸು ಬೇಕು. ಪೂಜ್ಯ ಶ್ರೀಗಳವರು ಸಮಾಜದಲ್ಲಿ ತಾನು ಬದುಕಿ ಸಮಾಜವನ್ನು ಬದುಕಬೇಕು ಎಂಬ ಚಿಂತನೆಯ ಮೂಲಕ ಸಮಾಜಮುಖಿ ಕಾರ್ಯವನ್ನು ಮಾಡುತ್ತಿದ್ದಾರೆ. ಸೇವೆ ಮಾಡುವಂತಹ ಅವಕಾಶ ಭಗವಂತ ಎಲ್ಲರಿಗೂ ಕರುಣಿಸಿದ್ದಾನೆ. ಗುರು ಅನುಗ್ರಹ ಮತ್ತು ಸಂಕಲ್ಪದಂತೆ ನಡೆದಾಗ ಸಮಾಜ ಸದೃಢವಾಗಬಹುದು. ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಕ್ಕಿದರೆ ಸತ್ಪ್ರಜೆಗಳಾಗಿ ಮುಂದೆ ಸಮಾಜದ ಶಕ್ತಿಗಳಾಗಿ ಬೆಳೆಯುತ್ತಾರೆ. ಇಲ್ಲಿ ಉತ್ತಮ ಧರ್ಮಪಾಲನೆ, ಸಂಸ್ಕೃತಿಯನ್ನು ತಿಳಿಸುವ ಸಂಸ್ಕಾರವನ್ನು ನೀಡುವ ಅರ್ಥಪೂರ್ಣ ಕಾರ್ಯಕ್ರಮ ನಡೆದಿದೆ” ಎಂದು ಆಶೀರ್ವಚನಗೈದರು.
ಬಂಟರ ಸಂಘ, ಪುಣೆಯ ಅಧ್ಯಕ್ಷ ಶ್ರೀ ಸಂತೋಷ್ ಶೆಟ್ಟಿ ಇನ್ನಕುರ್ಕಿಲ್‌ಬೆಟ್ಟು ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅಥಿತಿಗಳಾಗಿ ರಾಷ್ಟಿçÃಯ ಸ್ವಯಂ ಸಂಘದ ಹಿರಿಯ ಕಾರ್ಯಕರ್ತ ಶ್ರೀ ಬಾಲಕೃಷ್ಣ ಬಂಡಾರಿ, ಪುಣೆ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಕುಶಲ್ ಹೆಗ್ಡೆ, ಪುಣೆ ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನ ಜೀರ್ಣೋದ್ದಾರ ಹಾಗೂ ಬ್ರಹ್ಮ ಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಶ್ರೀ ಸದಾನಂದ ಕೆ .ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮುಂಬೈ ಘಟಕದ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ, ನ್ಯಾಯವಾದಿ ಶ್ರೀ ಪ್ರಕಾಶ್ ಎಲ್. ಶೆಟ್ಟಿ ಕಡಂದಲೆಪರಾರಿ, ಪುಣೆ ಹಿರಿಯ ಉದ್ಯಮಿ ಶ್ರೀ ಕರುಣಾಕರ್ ಶೆಟ್ಟಿ, ಪುಣೆ ತುಳುಕೂಟದ ಮಹಿಳಾ ಕರ‍್ಯಾಧ್ಯಕ್ಷೆ ಶ್ರೀಮತಿ ಪ್ರಿಯಾ ಎಚ್. ದೇವಾಡಿಗ ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಒಡಿಯೂರು ಶ್ರೀ ವಜ್ರಮಾತ ಮಹಿಳಾವಿಕಾಸ ಕೇಂದ್ರದ ಪುಣೆ ಘಟಕದ ಅಧ್ಯಕ್ಷೆ ಶ್ರೀಮತಿ ಜಯಲಕ್ಷಿö್ಮà ಪಿ. ಶೆಟ್ಟಿ ಉಪಸ್ಥಿತರಿದ್ದರು.
ಬಳಗದ ಅಧ್ಯಕ್ಷರಾದ ಶ್ರೀ ಪ್ರಭಾಕರ ಶೆಟ್ಟಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಶ್ರೀ ರೋಹಿತ್ ಶೆಟ್ಟಿ ನಗ್ರಿಗುತ್ತು ಸ್ವಾಗತಿಸಿದರು. ಶ್ರೀಮತಿ ಅಕ್ಷತಾ ಸುಜಿತ್ ಶೆಟ್ಟಿ ಮತ್ತು ಶ್ರೀ ತಾರಾನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಪೂಜ್ಯ ಶ್ರೀಗಳವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ವೇದಿಕೆಗೆ ಸ್ವಾಗತಿಸಲಾಯಿತು. ಪುಣೆಯ ಹೋಟೆಲ್ ಉದ್ಯಮಿ ಶ್ರೀ ಕರುಣಾಕರ ಶೆಟ್ಟಿ ದಂಪತಿ ಶ್ರೀ ಗುರುಪಾದುಕಾರಾಧನೆಗೈದರು. ಭಾಗವಹಿಸಿದ್ದ ಎಲ್ಲ ಗುರುಬಂಧುಗಳಿಗೆ ಪ್ರಸಾದ ಮಂತ್ರಾಕ್ಷತೆಯಿತ್ತು ಪೂಜ್ಯ ಶ್ರೀಗಳವರು ಹರಸಿದರು.
ಸಾಂಸ್ಕೃತಿಕ ಕರ‍್ಯಕ್ರಮದಂಗವಾಗಿ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾವಿಕಾಸ ಕೇಂದ್ರದ ಸದಸ್ಯೆಯರಿಂದ ಭಜನೆ ಮತ್ತು ಪುಣೆಯ ಕಲಾವಿದರ ಕೂಡುವಿಕೆಯಲ್ಲಿ, ಶ್ರೀಮತಿ ಶ್ವೇತಾ ಎಚ್. ಮೂಡಬಿದ್ರಿ ನಿರ್ದೇಶನದಲ್ಲಿ ‘ತುಳುನಾಡ ಭಕ್ತಿವೈಭವ’ ವಿಶೇಷ ಕಾರ್ಯಕ್ರಮ ಜರಗಿತು.