“ಅಂತರಂಗದ ಪ್ರವೇಶಕ್ಕೆ ಪ್ರೇಮತತ್ವವೇ ರಹದಾರಿ”

ಗ್ರಾಮೋತ್ಸವದ ಅಂಗವಾಗಿ ಆಯೋಜಿಸಿದ್ದ ಒಳಾಂಗಣ ಸ್ಪರ್ಧೆಗಳನ್ನು ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
“ಧರ್ಮ ಸಂರಕ್ಷಣೆಯ ಹೋರಾಟದಿಂದ ಜಯ ನಿಶ್ಚಿತ. ವ್ಯಕ್ತಿ ವಿಕಾಸದಿಂದ ಸಮಾಜ ವಿಕಾಸ ಸಾಧ್ಯ. ಜೀವನದ ಕಷ್ಟಗಳನ್ನು ಸೋಪಾನವಾಗಿಸಬೇಕು. ಅಂತರಂಗದ ಪ್ರವೇಶಕ್ಕೆ ಪ್ರೇಮತತ್ವವೇ ರಹದಾರಿ. ನಮ್ಮ ಅಂತರಂಗವನ್ನು ಸ್ವಚ್ಛವಾಗಿರಿಸುವ ಕೆಲಸ ಆಗಬೇಕು” ಎಂದು ಪೂಜ್ಯ ಸ್ವಾಮೀಜಿಯವರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಗ್ರಾಮೋತ್ಸವದ ಅಂಗವಾಗಿ ಆಯೋಜಿಸಿದ್ದ ಒಳಾಂಗಣ ಸ್ಪರ್ಧೆಗಳನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಶ್ರೀ ಲೋಕನಾಥ ಜಿ.ಶೆಟ್ಟಿ ತಾಳಿಪ್ಪಾಡಿಗುತ್ತು, ಕಾರ್ಯಾಧ್ಯಕ್ಷ ಶ್ರಿ ಕೃಷ್ಣ ಶೆಟ್ಟಿ ತಾರೆಮಾರ್, ಉಪಾಧ್ಯಕ್ಷ ಶ್ರೀ ಭವಾನಿಶಂಕರ ಶೆಟ್ಟಿ ಪುತ್ತೂರು, ಶ್ರೀ ಸೇರಾಜೆ ಗಣಪತಿ ಭಟ್, ಸಂಘಟನಾ ಕಾರ್ಯದರ್ಶಿ ಶ್ರೀ ಶಶಿಧರ ಶೆಟ್ಟಿ ಜಮ್ಮದಮನೆ, ಕ್ರೀಡಾ ಸಮಿತಿ ಸಂಚಾಲಕ ಶ್ರೀ ರಮೇಶ್ ಶೆಟ್ಟಿ ಅನೆಯಾಲಗುತ್ತು, ಕಾರ್ಯದರ್ಶಿ ಶ್ರೀಮತಿ ತಾರಾಸುಂದರ ರೈ, ಉಪಾಧ್ಯಕ್ಷೆ ಶ್ರೀಮತಿ ಹರಿಣಾಕ್ಷಿ ಜೆ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ, ಒಡಿಯೂರು ಶ್ರೀಗುರುದೇವ ವಿದ್ಯಾಪೀಠದ ಮುಖ್ಯ ಶಿಕ್ಷಕಿ ರೇಣುಕಾ ಎಸ್.ರೈ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ಶ್ರೀಮತಿ ಅನಿತಾ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಕು| ಗಂಗಾ ವಂದಿಸಿದರು.