+91 8255-266211
info@shreeodiyoor.org

ಶ್ರೀ ಸಂಸ್ಥಾನದಲ್ಲಿ ಶ್ರೀಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆಯ ಧರ್ಮಸಭೆ

ಅಧ್ಯಾತ್ಮದಿಂದಲೇ ಶಾಂತಿ, ನೆಮ್ಮದಿ – ಒಡಿಯೂರು ಶ್ರೀ

“ಬದುಕು ನಿರಂತರ ಹರಿಯುವ ನೀರಿನಂತೆ ಚಲನಶೀಲವಾಗಿರುತ್ತದೆ. ಸಂಚರಿಸುವ ರಥಕ್ಕೆ ಪಥವಿದ್ದಂತೆ, ದೇಹವೆಂಬ ರಥಕ್ಕೂ ಪಥವಿರಬೇಕು. ಅದು ಧರ್ಮದ ಪಥವಾಗಿರಬೇಕು. ಆ ಪಥದಲ್ಲಿ ಸಾಗಿದಾಗ ಬದುಕು ಹಸನಾಗುತ್ತದೆ. ಅಧ್ಯಾತ್ಮ ಮತ್ತು ವಿಜ್ಞಾನ ಜತೆಯಾಗಿ ಸಾಗಬೇಕು. ಅಧ್ಯಾತ್ಮ ಶಾಂತಿ ಮತ್ತು ನೆಮ್ಮದಿಯನ್ನು ಕೊಡುತ್ತದೆ. ಅಂತರಂಗದಲ್ಲಿ ಶಾಂತಿಯನ್ನು ಹುಡುಕಬೇಕು. ನಮ್ಮ ಅಂತರಂಗದಲ್ಲಿ ಸರ್ಜಿಕಲ್ ಸ್ಟ್ರೈಕ್ ಆಗಬೇಕಿದೆ. ಇಹದಿಂದ ಪರಕ್ಕೆ ಧರ್ಮದ ರಹದಾರಿಯಲ್ಲಿ ಸಾಗಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆಯ ಧರ್ಮಸಭೆಯನ್ನು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಈ ಸುಸಂದರ್ಭ ಪೂಜ್ಯ ಶ್ರೀಗಳವರು ‘ದತ್ತ ಪ್ರಕಾಶ’ ದ್ವೈಮಾಸಿಕ ಪತ್ರಿಕೆಯ ವಿಂಶತಿ ವಿಶೇಷಾಂಕವನ್ನು ಬಿಡುಗಡೆಗೊಳಿಸಿದರು. ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು.

ಶ್ರೀ ಸೂರ್ಯನಾರಾಯಣ ದೇವಸ್ಥಾನ, ಮರೋಳಿ ಇದರ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀ ಕೆ.ಪಿ. ಶೆಟ್ಟಿ ಮೊಡಂಕಾಪುಗುತ್ತು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಮಾರಂಭದ ವೇದಿಕೆಯಲ್ಲಿ ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಶ್ರೀ ಕೆ. ಪದ್ಮನಾಭ ಕೊಟ್ಟಾರಿ, ಮಂಗಳೂರು ನಗರ ಸಮಿತಿಯ ಕಾರ್ಯಧ್ಯಕ್ಷ ಶ್ರೀ ಜಿತೇಂದ್ರ ಕೊಟ್ಟಾರಿ, ಮುಂಬೈನ ಉದ್ಯಮಿಗಳಾದ ಶ್ರೀ ಭಗವಾನ್ ಆಳ್ವ, ಶ್ರೀ ವಾಮಯ್ಯ ಬಿ. ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಶ್ರೀ ಎ.ಸಿ. ಭಂಡಾರಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶ್ರೀ ಎ. ಸುರೇಶ್ ರೈ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಎ. ಅಶೋಕ್‍ಕುಮಾರ್, ಮುಂಬೈ ಘಟಕದ ಅಧ್ಯಕ್ಷ ನ್ಯಾಯವಾದಿ ಶ್ರೀ ಕೃಷ್ಣ ಎಲ್. ಶೆಟ್ಟಿ, ತಿರುವನಂತಪುರ ಘಟಕದ ಶ್ರೀ ಅಜಿತ್‍ಕುಮಾರ್ ಪಂದಳಮ್, ಮಂಜೇಶ್ವರ ವಲಯದ ಅಧ್ಯಕ್ಷ ಶ್ರೀ ಶಶಿಧರ ಶೆಟ್ಟಿ ಜಮ್ಮದಮನೆ, ಮಂಗಳೂರು ವಲಯದ ಅಧ್ಯಕ್ಷ ಶ್ರೀ ಜಯಂತ ಜೆ. ಕೋಟ್ಯಾನ್, ಪುತ್ತೂರು ಘಟಕದ ಅಧ್ಯಕ್ಷ ಶ್ರೀ ನಿತ್ಯಾನಂದ ಶೆಟ್ಟಿ ಮನವಳಿಕೆ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ.ಶೆಟ್ಟಿ, ಮುಂಬೈ ಘಟಕದ ಅಧ್ಯಕ್ಷೆ ಶ್ರೀಮತಿ ರೇವತಿ ವಿ.ಶೆಟ್ಟಿ, ಪುತ್ತೂರು ಘಟಕದ ಅಧ್ಯಕ್ಷೆ ಶ್ರೀಮತಿ ನಯನಾ ರೈ ಉಪಸ್ಥಿತರಿದ್ದರು.

ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ನವನೀತ ಶೆಟ್ಟಿ ಕದ್ರಿಯವರು ಷಷ್ಠ್ಯಬ್ದ ಸಂಭ್ರಮದ ಬಗ್ಗೆ ಮಾಹಿತಿಯನ್ನು ಸಭೆಯ ಮುಂದಿರಿಸಿದರು. ಶ್ರೀ ಒಡಿಯೂರು ರಥೋತ್ಸವದ ಸ್ವಾಗತ ಸಮಿತಿಯ ಸಂಚಾಲಕ ಶ್ರೀ ಪಿ. ಲಿಂಗಪ್ಪ ಗೌಡ ಸ್ವಾಗತಿಸಿ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ ವಂದಿಸಿದರು. ಒಡಿಯೂರುದ ತುಳುಕೂಟದ ಅಧ್ಯಕ್ಷ ಶ್ರೀ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ಧರ್ಮಸಭೆಯ ಮೊದಲು ಶ್ರೀ ಕದ್ರಿ ನವನೀತ ಶೆಟ್ಟಿಯವರ ಸಂಯೋಜನೆಯಲ್ಲಿ ‘ಶ್ರೀ ಸತ್ಯನಾರಾಯಣ ವ್ರತ ಮಹಾತ್ಮ್ಯೆ’ ಎಂಬ ಯಕ್ಷಗಾನ ತಾಳಮದ್ದಳೆ ಜರಗಿತು.

ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ರಥೋತ್ಸವದ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿದವು.

ಚೆಂಡೆಮೇಳೆ, ತಾಲೀಮು ಪ್ರದರ್ಶನ, ಕೀಳುಗೊಂಬೆ ಕುಣಿತ, ಕುಣಿತ ಭಜನೆ ಹಾಗೂ ಸಿಡಿಮದ್ದಿನ ಪ್ರದರ್ಶನಗಳೊಂದಿಗೆ ವೈಭವೋಪೇತ ರಥೋತ್ಸವವು ಸಂಪನ್ನಗೊಂಡಿತು.

ಕಮ್ಮಾಜೆಯಲ್ಲಿ ಅಮ್ಮ ಗ್ರೂಪ್ಸ್‍ನ ವತಿಯಿಂದ ‘ಗಾನ 2021’ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಮಿತ್ತನಡ್ಕದಲ್ಲಿ ಹಿಂದೂ ಸೇವಾ ಸಮಿತಿಯ ಆಶ್ರಯದಲ್ಲಿ ಕವನ್ ಮೆಲೋಡಿಸ್ ಅವರಿಂದ ಟಿ.ಕೆ. ಭಟ್ ಬಳಗದ ಭಕ್ತಿಸಂಗೀತ, ಕನ್ಯಾನ ಸದ್ಗುರು ಶ್ರೀ ನಿತ್ಯಾನಂದ ಮಂದಿರದ ಬಳಿ ಶ್ರೀ ಶ್ರೀಧರ ಶೆಟ್ಟಿ ಗುಬ್ಯಮೇಗಿನಗುತ್ತು ಇವರ ಪ್ರಾಯೋಜಕತ್ವದಲ್ಲಿ ಪಾವಂಜೆ ಮೇಳದವರಿಂದ ‘ಶ್ರೀ ದೇವಿ ಮಹಾತ್ಮ್ಯೆ’ ಯಕ್ಷಗಾನ ಬಯಲಾಟ ಜರಗಿತು.

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top