“ಯುವಸಮೂಹ ಕೃಷಿ ಸಂಸ್ಕೃತಿಗೆ ಮನಮಾಡಬೇಕು”
ಶ್ರೀ ಸಂಸ್ಥಾನದ ಸಾಗುವಳಿ ಭೂಮಿಯಲ್ಲಿ ‘ಕೆಸರ್‍ದ ಕಂಡೊಡೊಂಜಿ ದಿನ’
ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
ಜು. 3: “ಮಣ್ಣು ಸಂಸ್ಕೃತಿಯ ಒಂದು ಭಾಗ. ಪ್ರಕೃತಿಯ ಆರಾಧನೆ, ಸಂರಕ್ಷಣೆ ಎಲ್ಲರಿಂದಲೂ ಆಗಬೇಕು. ಧರ್ಮ ಸಂರಕ್ಷಣೆಯ ವಿಚಾರದಲ್ಲಿ ಪ್ರತಿಯೊಬ್ಬರ ಪಾತ್ರ ಮುಖ್ಯವಾಗಿದೆ. ಯುವ ಸಮೂಹ ಇಂತಹ ಚಟುವಟಿಕೆಗಳಿಗೆ ಮನಮಾಡಿ ತೊಡಗಿಸಿಕೊಳ್ಳುವಂತಾಗಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಜನ್ಮದಿನೋತ್ಸವ-ಗ್ರಾಮೋತ್ಸವ 2022ರ ಪ್ರಯುಕ್ತ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿಯು ಬನಾರಿ ಶ್ರೀ ಸಂಸ್ಥಾನದ ಸಾಗುವಳಿ ಭೂಮಿಯಲ್ಲಿ ಆಯೋಜಿಸಿದ್ದ ‘ಕೆಸರ್‍ದ ಕಂಡೊಡೊಂಜಿ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಾದ್ವಿ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ಶ್ರೀ ಕೆ. ಪದ್ಮನಾಭ ಕೊಟ್ಟಾರಿ, ಕಾರ್ಯಾಧ್ಯಕ್ಷ ಶ್ರೀ ಲೋಕನಾಥ ಜಿ. ಶೆಟ್ಟಿ, ಕೋಶಾಧಿಕಾರಿಗಳಾದ ಶ್ರೀ ಎ. ಸುರೇಶ್ ರೈ, ಶ್ರೀ ಎ. ಅಶೋಕ್‍ಕುಮಾರ್, ಉಪಾಧ್ಯಕ್ಷ ಶ್ರೀ ಪಿ. ಲಿಂಗಪ್ಪ ಗೌಡ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಶ್ರೀ ಕಿರಣ್ ಉರ್ವ, ಯೋಜನೆಯ ಕನ್ಯಾನ ಗ್ರಾಮ ಸಮಿತಿಯ ಅಧ್ಯಕ್ಷ ಶ್ರೀ ಕೆ.ಪಿ. ರಘುರಾಮ ಶೆಟ್ಟಿ, ಕರೋಪಾಡಿ ಗ್ರಾಮ ಸಮಿತಿಯ ಅಧ್ಯಕ್ಷ ಶ್ರೀ ರಘುನಾಥ ಶೆಟ್ಟಿ ಪಟ್ಲ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ, ಮೂಖ್ಯೋಪಾಧ್ಯಾಯಿನಿ ಶ್ರೀ ರೇಣುಕಾ ಎಸ್. ರೈ, ನ್ಯಾಯವಾದಿ ಶ್ರೀ ಹರಿಣಾಕ್ಷಿ ಜೆ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಯಶವಂತ ವಿಟ್ಲ ಸ್ವಾಗತಿಸಿದರು. ಕ್ರೀಡಾ ಸಮಿತಿಯ ಸಂಚಾಲಕ ಶ್ರೀ ಮಾತೇಶ್ ಭಂಡಾರಿ ವಂದಿಸಿ, ಶ್ರೀ ವಿಜೇತ್ ರೈ ಅಂಕತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.