ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ದತ್ತ ಜಯಂತ್ಯುತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹ ಸಂಪನ್ನ
Date : Monday, 04-01-2021
“ಆದಿಗುರು ದತ್ತಾತ್ರೇಯರು ವಿಶ್ವ ಮಾನವ ಧರ್ಮವನ್ನು ಜಗತ್ತಿಗೆ ಪಸರಿಸಿದವರು. ದತ್ತ ತತ್ತ್ವದ ಚಿಂತನೆ ಪಾಲನೆಯಿಂದ ಸಮರಸದ ಜೀವನ ಸಾಧ್ಯ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜರಗಿದ ಶ್ರೀ ದತ್ತ ಜಯಂತ್ಯುತ್ಸವದ ಧರ್ಮಸಭೆಯಲ್ಲಿ ಸಂದೇಶ ನೀಡಿದರು. ಅವರು ಪ್ರೊ. ವಿ.ಬಿ. ಅರ್ತಿಕಜೆಯವರು ಕನ್ನಡಕ್ಕೆ ಅನುವಾದಿಸಿದ ‘ಶ್ರೀ ದತ್ತಾಂಜನೇಯ ಸಹಸ್ರನಾಮ’ ಪುಸ್ತಕವನ್ನು ಲೋಕಾರ್ಪಣೆಗೈದು “ಭಾರತೀಯ ಪದ್ಧತಿಯಂತೆ ಆಹಾರ ಅನುಸರಿಸುವವರಿಗೆ ಯಾವ ರೋಗಾಣುವೂ ಬಾಧಿಸದು. ಅಧ್ಯಾತ್ಮದ ಕೊನೆ ಆನಂದದಲ್ಲಿದ್ದು, ಸಾಧಕರಿಗೆ ಕ್ಷಮಾಗುಣ ದಾರಿದೀಪ […]