+91 8255-266211
info@shreeodiyoor.org

ತ್ಯಾಗ – ಸೇವೆಗಳೇ ಆತ್ಮೋನ್ನತಿಗೆ ಸೋಪಾನಗಳು – ಒಡಿಯೂರು ಶ್ರೀ

 “ಭೋಗದ ಬದುಕು ಬದುಕಲ್ಲ, ತ್ಯಾಗದ ಬದುಕೇ ನಿಜ ಬದುಕು. ತ್ಯಾಗ ಮತ್ತು ಸೇವೆಗಳೇ ಆತ್ಮೋನ್ನತಿಗೆ ಸೋಪಾನಗಳು. ಶ್ರೀಮದ್ರಾಮಾಯಣ, ಶ್ರೀಮನ್ಮಹಾಭಾರತ ಇವೆರಡು ಮಹಾಕಾವ್ಯಗಳು ಭಾರತೀಯ ಸಂಸ್ಕøತಿಯನ್ನು ಪ್ರತಿನಿಧಿಸುತ್ತದೆ. ಬದುಕನ್ನು ರೂಪಿಸುವ ಪಠ್ಯಗಳು ಈ ಕಾವ್ಯಗಳಾಗಿವೆ. ಇದೀಗ ಶ್ರೀ ರಾಮನವಮಿ ಹಾಗೂ ಹನುಮಜ್ಜಯಂತಿಯನ್ನು ಆಚರಿಸುವ ಪರ್ವಕಾಲ. ವಸಂತ ಋತು, ಚೈತ್ರ ಮಾಸದಲ್ಲಿ ಬರುವಂತಹ ಈ ದಿನಗಳು ಆರಾಧನಾ ಯೋಗ್ಯವಾಗಿರುವುದು. ರಾಮಾಯಣ, ಮನುಷ್ಯನ ಭೂತ, ವರ್ತಮಾನ, ಭವಿಷ್ಯತ್ತುಗಳನ್ನು ತಿಳಿಸಿಕೊಡುತ್ತದೆ. ಅಂದರೆ ಕಳೆದ, ನಡೆಯುತ್ತಿರುವ ಹಾಗೂ ಭವಿಷ್ಯತ್ತಿನ ವಿಚಾರಗಳು ಗೋಚರಕ್ಕೆ ಬರುತ್ತವೆ. ಉಳಿದುದು […]

Read More

ಮಹಾಶಿವರಾತ್ರಿಯ ಪ್ರಯುಕ್ತ ಶತರುದ್ರಾಭಿಷೇಕ ಜರಗಿತು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಉಪಸ್ಥಿತಿಯಲ್ಲಿ ಶತರುದ್ರಾಭಿಷೇಕ ಜರಗಿತು.

Read More

ಶ್ರೀ ಸಂಸ್ಥಾನದಲ್ಲಿ ಶ್ರೀಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆಯ ಧರ್ಮಸಭೆ

ಅಧ್ಯಾತ್ಮದಿಂದಲೇ ಶಾಂತಿ, ನೆಮ್ಮದಿ – ಒಡಿಯೂರು ಶ್ರೀ “ಬದುಕು ನಿರಂತರ ಹರಿಯುವ ನೀರಿನಂತೆ ಚಲನಶೀಲವಾಗಿರುತ್ತದೆ. ಸಂಚರಿಸುವ ರಥಕ್ಕೆ ಪಥವಿದ್ದಂತೆ, ದೇಹವೆಂಬ ರಥಕ್ಕೂ ಪಥವಿರಬೇಕು. ಅದು ಧರ್ಮದ ಪಥವಾಗಿರಬೇಕು. ಆ ಪಥದಲ್ಲಿ ಸಾಗಿದಾಗ ಬದುಕು ಹಸನಾಗುತ್ತದೆ. ಅಧ್ಯಾತ್ಮ ಮತ್ತು ವಿಜ್ಞಾನ ಜತೆಯಾಗಿ ಸಾಗಬೇಕು. ಅಧ್ಯಾತ್ಮ ಶಾಂತಿ ಮತ್ತು ನೆಮ್ಮದಿಯನ್ನು ಕೊಡುತ್ತದೆ. ಅಂತರಂಗದಲ್ಲಿ ಶಾಂತಿಯನ್ನು ಹುಡುಕಬೇಕು. ನಮ್ಮ ಅಂತರಂಗದಲ್ಲಿ ಸರ್ಜಿಕಲ್ ಸ್ಟ್ರೈಕ್ ಆಗಬೇಕಿದೆ. ಇಹದಿಂದ ಪರಕ್ಕೆ ಧರ್ಮದ ರಹದಾರಿಯಲ್ಲಿ ಸಾಗಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು […]

Read More

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶತರುದ್ರಾಭಿಷೇಕ

ಶ್ರೀ ಸಂಸ್ಥಾನದಲ್ಲಿ ತಾ.11-03-2021ನೇ ಶುಕ್ರವಾರ ರಾತ್ರಿ ಮಹಾಶಿವರಾತ್ರಿಯ ಪ್ರಯುಕ್ತ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಆರಾಧ್ಯ ದೇವರಿಗೆ ಶತರುದ್ರಾಭಿಷೇಕ ನಡೆಯಲಿರುವುದು.

Read More

ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಕಾಸರಗೋಡು ಸಮಿತಿ ಸರಣಿ ಕಾರ್ಯಕ್ರಮಗಳಿಗೆ ಚಾಲನೆ

ಜ. 29: ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ 2021 – ಜ್ಞಾನವಾಹಿನಿ ಕಾರ್ಯಕ್ರಮದ ಕಾಸರಗೋಡು ವಲಯ ಸಮಿತಿ ಮತ್ತು ಸರಣಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವು ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದ ಸಭಾಮಂಟಪದಲ್ಲಿ ಜರಗಿತು.ಕಾರ್ಯಕ್ರಮಕ್ಕೆ ಪೂಜ್ಯ ಸ್ವಾಮೀಜಿಗಳವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಲಯ ಸಮಿತಿ ಮತ್ತು ಸರಣಿ ಕಾರ್ಯಕ್ರಮವನ್ನು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಚಾಲನೆ ನೀಡಿ ಆಶೀರ್ವಚನಗೈದರು. ಇದೇ […]

Read More

ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಮಂಗಳೂರು ನಗರ ಸಮಿತಿ ಪಂಚ ಕಾರ್ಯಕ್ರಮಗಳಿಗೆ ಚಾಲನೆ

ಮಂಗಳೂರು, ಜ. 16: “ಪರೋಪಕಾರದ ಗುಣವನ್ನು ರೂಢಿಸಿಕೊಂಡು ಸೇವಾಕಾರ್ಐದಲ್ಲಿ ತೊಡಗಿಸಿಕೊಂಡಾಗ ಬದುಕು ಸಾರ್ಥಕ್ಯವನ್ನು ಪಡೆಯುತ್ತದೆ. ತ್ಯಾಗ ಸೇವಯಲ್ಲಿ ಬದುಕಿನ ಶಾಶ್ವತ ಸುಖ ಅಡಗಿದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ನಗರದ ಪುರಭವನದಲ್ಲಿ ಜರಗಿದ ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ, ಮಂಗಳೂರು ನಗರ ಸಮಿತಿಯ ಪಂಚ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಆಶೀರ್ವಚನಗೈದರು. ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಶ್ರೀರಾಮ ತಾರಕ ಮಂತ್ರ ಹಾಗೂ ಹನುಮಾನ್ ಚಾಲೀಸಾ ಪಠಣ ನೆರವೇರಿಸಿದರು. ಶಾಸಕ ಶ್ರೀ ವೇದವ್ಯಾಸ ಕಾಮತ್ ಅಧ್ಯಕ್ಷತೆ […]

Read More

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ದತ್ತ ಜಯಂತ್ಯುತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹ ಸಂಪನ್ನ

“ಆದಿಗುರು ದತ್ತಾತ್ರೇಯರು ವಿಶ್ವ ಮಾನವ ಧರ್ಮವನ್ನು ಜಗತ್ತಿಗೆ ಪಸರಿಸಿದವರು. ದತ್ತ ತತ್ತ್ವದ ಚಿಂತನೆ ಪಾಲನೆಯಿಂದ ಸಮರಸದ ಜೀವನ ಸಾಧ್ಯ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜರಗಿದ ಶ್ರೀ ದತ್ತ ಜಯಂತ್ಯುತ್ಸವದ ಧರ್ಮಸಭೆಯಲ್ಲಿ ಸಂದೇಶ ನೀಡಿದರು. ಅವರು ಪ್ರೊ. ವಿ.ಬಿ. ಅರ್ತಿಕಜೆಯವರು ಕನ್ನಡಕ್ಕೆ ಅನುವಾದಿಸಿದ ‘ಶ್ರೀ ದತ್ತಾಂಜನೇಯ ಸಹಸ್ರನಾಮ’ ಪುಸ್ತಕವನ್ನು ಲೋಕಾರ್ಪಣೆಗೈದು “ಭಾರತೀಯ ಪದ್ಧತಿಯಂತೆ ಆಹಾರ ಅನುಸರಿಸುವವರಿಗೆ ಯಾವ ರೋಗಾಣುವೂ ಬಾಧಿಸದು. ಅಧ್ಯಾತ್ಮದ ಕೊನೆ ಆನಂದದಲ್ಲಿದ್ದು, ಸಾಧಕರಿಗೆ ಕ್ಷಮಾಗುಣ ದಾರಿದೀಪ […]

Read More

ಬೆಳಕಿನೆಡೆಗೆ…

ದೀಪದ ಆರಾಧನೆ ದೀಪೋತ್ಸವ. ಬದುಕೇ ದೀಪೋತ್ಸವ ಆಗಬೇಕು. ಅಂತರ್‍ಜ್ಯೋತಿ ಬೆಳಗಿದರೆ ನಮ್ಮಲ್ಲಿ ಹುದುಗಿರುವ ಅಸುರ ಶಕ್ತಿಯೆಂಬ ಅಂಧÀಕಾರ ನೀಗಿ ಜ್ಞಾನದ ಬೆಳಕು ಮೂಡಿ ಬರಲು ಸಾಧ್ಯ. ಬೆಳಕಿಲ್ಲದೆ ಕತ್ತಲಿಲ್ಲ, ಕತ್ತಲಿಲ್ಲದೆ ಬೆಳಕಿಲ್ಲ. ಬೆಳಕಿನ ದೀಪ ಬೆಳಗಿಸಲು ಕತ್ತಲು ಬೇಕು. ಅಂಧಕಾರವನ್ನು ಓಡಿಸಲು ಬೆಳಕು ಬೇಕು. ಆ ಬೆಳಕು ಎಂಬ ಶಕ್ತಿ ಪ್ರತಿಯೋರ್ವನ ದೇಹದ ಒಳಗೂ ಇದೆ ಹೊರಗೂ ಇದೆ. ನಮ್ಮಲ್ಲಿರುವ ಬೆಳಕು ಎಂಬ ತೇಜಸ್ಸನ್ನು ಮತ್ತಷ್ಟು ಪ್ರಕಾಶಿಸುವಂತೆ ಮಾಡುವುದೇ ನಮ್ಮ ಕರ್ತವ್ಯ. ಅಂತರಂಗದ ಬೆಳಕಿನೊಂದಿಗೆ ಬಹಿರಂಗದ ತೇಜಸ್ಸಿನ […]

Read More

ಸಮಾಜದ ಸ್ವಾಸ್ಥ್ಯಕ್ಕೆ ಆರಾಧನೆಗಳು ಪೂರಕ – ಒಡಿಯೂರು ಶ್ರೀ

“ಸಮುದ್ರ ಮಥನ ಸಮಯದಲ್ಲಿ ಅವತರಿಸಿದ ಶ್ರೀ ಧನ್ವಂತರೀ ದೇವರ ಆರಾಧನೆಯಿಂದ ಸರ್ವರೋಗ ನಿವಾರಣೆಯಾಗುತ್ತದೆ. ಆರೋಗ್ಯಪೂರ್ಣ ಬದುಕಿಗೆ ಭಗವದಾರಾಧನೆಯ ಅಗತ್ಯವಿದೆ. ನೈತಿಕ ಸ್ವಾಸ್ಥ್ಯ, ಸಮಾಜದ ಸ್ವಾಸ್ಥ್ಯಕ್ಕೆ ಆರಾಧನೆಗಳು ಪೂರಕ. ಶ್ರೀ ಧನ್ವಂತರೀ ದೇವರ ಆರಾಧನೆಯ ಮೂಲಕ ಕೊರೋನಾ ಮಹಾಮಾರಿಯಿಂದ ಜಗತ್ತೇ ಮುಕ್ತಿಹೊಂದಲಿ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂದೇಶ ನೀಡಿದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಧನ್ವಂತರೀ ಜಯಂತಿಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಜರಗಿದ ಶ್ರೀ ಧನ್ವಂತರೀ ಹವನದ ಪೂರ್ಣಾಹುತಿಯ ಸಂದರ್ಭ ಆಶೀರ್ವಚನಗೈದ ಪೂಜ್ಯ ಶ್ರೀಗಳವರು […]

Read More

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ಲಲಿತಾ ಪಂಚಮಿ ಮಹೋತ್ಸವ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಅಕ್ಟೋಬರ 20ರಂದು ಮಂಗಳವಾರ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ಲಲಿತಾ ಪಂಚಮಿ ಮಹೋತ್ಸವ – ಶ್ರೀ ಚಂಡಿಕಾ ಯಾಗವು ನಡೆಯಲಿರುವುದು. ಬೆಳಿಗ್ಗೆ ಮಂಗಳಾರತಿಯ ಬಳಿಕ ಶ್ರೀ ನಾಗದೇವರಿಗೆ ನಾಗತಂಬಿಲ. ಗಂಟೆ 9.30ಕ್ಕೆ ಶ್ರೀ ಚಂಡಿಕಾ ಯಾಗವು ಆರಂಭಗೊಂಡು ಮಧ್ಯಾಹ್ನ ಗಂಟೆ 12.00ಕ್ಕೆ ಯಾಗದ ಪೂರ್ಣಾಹುತಿ, ಮಹಾಮಂಗಳಾರತಿ, ಆರಾಧ್ಯದೇವರಿಗೆ ಮಹಾಪೂಜೆ. ಅಪರಾಹ್ಣ ಗಂಟೆ 2.30ರಿಂದ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಶ್ರೀ ಡಿ. […]

Read More

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top