+91 8255-266211
info@shreeodiyoor.org

10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

“ದೇಶಪ್ರೇಮದೊಂದಿಗೆ ಧರ್ಮಪ್ರಜ್ಞೆ ಮೈಗೂಡಿಸಿಕೊಳ್ಳಿ” ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಎ.13: “ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು. ಪ್ರಜ್ಞಾವಂತ ಪ್ರಜೆಗಳÀ ನಿರ್ಮಾಣದಿಂದ ಸದೃಢ ರಾಷ್ಟ್ರ ಕಟ್ಟುವುದು ನಮ್ಮ ಮುಖ್ಯ ಧ್ಯೇಯ. ಜಗತ್ತು ಒಂದು ಪಾಠಶಾಲೆ. ಅದರಲ್ಲಿ ಗುಣಾತ್ಮಕತೆಯನ್ನು ಆಯ್ಕೆ ಮಾಡುವ ಮೂಲಕ ಬದುಕನ್ನು ರೂಪಿಸಬೇಕು. ದೇಶಪ್ರೇಮದೊಂದಿಗೆ ಧರ್ಮಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು. ಆದರ್ಶವ್ಯಕ್ತಿಗಳಾಗಿ ವಿಕಸನಗೊಳ್ಳಿರಿ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಶ್ರೀ ಗುರುದೇವ ಆಂಗ್ಲ ಮಾಧ್ಯಮ ಶಾಲೆಯ […]

Read More

ಒಡಿಯೂರು ಶ್ರೀ ಗುರುದೇವ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ವಾರ್ಷಿಕೋತ್ಸವ

“ಸಂಸ್ಕಾರಯುತ ಶಿಕ್ಷಣ ಭವಿಷ್ಯವನ್ನು ಬದಲಾಯಿಸುತ್ತದೆ” ಒಡಿಯೂರು ಶ್ರೀ ಗುರುದೇವ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಕನ್ಯಾನ: “ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಗಳ ಅನಾವರಣಕ್ಕೆ ವಾರ್ಷಿಕೋತ್ಸವ ಉತ್ತಮ ವೇದಿಕೆ. ಕೌಶಲ್ಯ ಭರಿತ ಶಿಕ್ಷಣದೊಂದಿಗೆ ಸ್ವಾವಲಂಬಿಯಾಗಿ ಬದುಕಬೇಕು. ಉತ್ತಮ ಗುಣಮಟ್ಟದ ಉದ್ಯೋಗ ಇದ್ದರೆ ಅವನ ಬದುಕು ಬದಲಾಗುತ್ತದೆ. ಅದರ ಜೊತೆಗೆ ದೇಶ ಕಟ್ಟುವ ಕಾಯಕವು ನಮ್ಮದಾಗಬೇಕು. ದೇಶ ಉಳಿದರೆ ನಾವು ಉಳಿಯುತ್ತೇವೆ. ಸಂಸ್ಕಾರಯುತ ಶಿಕ್ಷಣ ಭವಿಷ್ಯವನ್ನು ಬದಲಾಯಿಸುತ್ತದೆ. ಬದುಕನ್ನು ಕಲೆಯಾಗಿಸಿ ಜೀವನದಲ್ಲಿ ಯಶಸ್ವಿಯಾಗಿ” ಎಂದು ಹಾರೈಸಿದ […]

Read More

“ಶಿಬಿರಗಳಿಂದ ಜೀವನ ಮೌಲ್ಯಗಳು ವರ್ಧಿಸುವುದು” – ಒಡಿಯೂರು ಶ್ರೀ

“ಅರಳುವ ಪ್ರತಿಭೆಗಳಿಗೆ ಶಿಬಿರಗಳು ವೇದಿಕೆಯಾಗಲಿ. ಕೌಶಲ್ಯದಿಂದ ಜೀವನ ರೂಪುಗೊಂಡಾಗ ಬದುಕೊಂದು ಕಲೆಯಾಗುವುದು. ಆಗಲೇ ಬದುಕಿಗೆ ಬೆಲೆ ಬರುವುದು. ಅರ್ಥಾತ್ ಜೀವನ ಮೌಲ್ಯಗಳು ವರ್ಧಿಸುವುದು. ಶಿಬಿರಾರ್ಥಿಗಳು ಪರಿಮಳ ತುಂಬಿದ ಬಂಗಾರದ ಹೂವಿನಂತೆ ಅರಳಬೇಕು. ನಮ್ಮಲ್ಲಿ ಸತ್‍ಸಂಕಲ್ಪವಿದ್ದರೆ ಬದುಕೂ ಬಂಗಾರವಾಗುವುದು. ಈ ಮೂಲಕ ಭವ್ಯ ರಾಷ್ಟ್ರ ನಿರ್ಮಾಣದ ಸಂಕಲ್ಪವು ಸಾಕಾರಗೊಳ್ಳುವುದು.” ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಆಶ್ರಯದಲ್ಲಿ ಜರಗಿದ ಶರದೃತು ಸಂಸ್ಕಾರ […]

Read More

“ಶಿಬಿರಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕ” – ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶರದೃತು ಸಂಸ್ಕಾರ ಶಿಬಿರ 2021 ಉದ್ಘಾಟಿಸಿ ಒಡಿಯೂರು ಶ್ರೀ ಆಶೀರ್ವಚನ

ಅ.11: “ಮಕ್ಕಳೆಲ್ಲರೂ ಸಾಮಾನ್ಯರಲ್ಲ, ಅಸಾಮಾನ್ಯರು. ಭವ್ಯ ಭಾರತ ನಿರ್ಮಾಣದ ರೂವಾರಿಗಳು. ದೇಶ ಪ್ರೇಮ ಹೇಗೆ ಬೆಳೆಸಿಕೊಳ್ಳಬೇಕು? ಬದುಕನ್ನು ರೂಪಿಸಲು ಬೇಕಾದಂತಹ ವಿಚಾರಗಳು ತಿಳಿಯಬೇಕಾದರೆ ಸಂಸ್ಕಾರ ಶಿಕ್ಷಣ ಅಗತ್ಯ. ಆ ಮೂಲಕ ಆದರ್ಶ ರಾಷ್ಟ್ರ ನಿರ್ಮಾಣವಾಗಬಹುದು. ಸಂಸ್ಕøತಿಯ ಅಂತರ್ಯವೇ ಸಂಸ್ಕಾರ. ಮಾತು ಎಂದರೆ ವ್ಯಕ್ತಿತ್ವದ ಕೈಗನ್ನಡಿ. ವ್ಯಕ್ತಿತ್ವ ವಿಕಸನವೇ ಶಿಬಿರದ ಮುಖ್ಯ ಉದ್ದೇಶ. ಮಾತು ಮನಸ್ಸು ಹತ್ತಿರವಾಗಿರುವಂತದ್ದು. ಮನಸ್ಸಿನ ಭಾವನೆ ಮುಖದಲ್ಲಿ ಅನಾವರಣಗೊಳ್ಳುವುದು. ಹೃದಯದ ಮಾತಿನಿಂದ ಸಂತೋಷವಿದೆ. ಮುಗ್ಧ ಮನಸ್ಸಿಗೆ ಭಗವಂತನೂ ಮೆಚ್ಚಿಕೊಳ್ಳುತ್ತಾನೆ. ಅಂತಹ ಮನಸ್ಸನ್ನು ಮಕ್ಕಳಲ್ಲಿ ಕಾಣಬಹುದು. […]

Read More

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ – ಎಸ್.ಎಸ್.ಎಲ್.ಸಿ. ಆಂಗ್ಲ ಮಾಧ್ಯಮ ಶಾಲೆ 100% ಫಲಿತಾಂಶ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಒಡಿಯೂರು ಶ್ರೀ ಗುರುದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆ 100% ಫಲಿತಾಂಶ ದಾಖಲಿಸಿದ್ದು, ದೀಪಶ್ರೀ – 619 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಮೈತ್ರಿ ಕೆ. – 605, ಶ್ರೇಯಸ್ – 603, ಹರ್ಷಿತಾ ಡಿ’ಸೋಜ – 601, ಪ್ರಥಮ್ ಶೆಟ್ಟಿ – 598, ಶೃಜನ್ ಸಿ.- 593, ರಜತ್ – 585, ಸ್ಮಿತಾ ಕೆ. – 584, ದಿವ್ಯಲಕ್ಷ್ಮೀ – 578, ಅನಿಶ್ – 575, ನಿಕೇಶ್ ಬಿ – […]

Read More

“ದೇಶದ ಸಂಸ್ಕೃತಿಯನ್ನು ಯುವಪೀಳಿಗೆಗೆ ಹಸ್ತಾಂತರಿಸುವ ಕಾರ್ಯವಾಗಲಿ” ಸ್ವಾತಂತ್ರ್ಯ ದಿನಾಚರಣೆ – ಧ್ವಜಾರೋಹಣಗೈದು – ಒಡಿಯೂರು ಶ್ರೀ ಸಂದೇಶ

“ಭಾರತ ಎನ್ನುವ ಹೆಸರಿನಲ್ಲಿಯೇ ಅದರ ಸಂಸ್ಕøತಿ ಅಡಗಿದೆ. ನಾವೆಲ್ಲ ಅಮೃತಪುತ್ರರು. ನಮಗೆಲ್ಲ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುವ ಯೋಗ ಸಿಕ್ಕಿದೆ. ಈ ಸಂದರ್ಭ ದೇಶಕ್ಕಾಗಿ ಬಲಿದಾನಗೈದ ಸೈನಿಕರನ್ನು ಸ್ಮರಿಸುವುದೂ ನಮ್ಮ ಕರ್ತವ್ಯ. ಭಾರತ ದೇಶದ ಮೌಲ್ಯಗಳನ್ನು ಉಳಿಸಲು ದೇಶದ ಸಂಸ್ಕøತಿಯನ್ನು ಯುವಪೀಳಿಗೆಗೆ ಹಸ್ತಾಂತರಿಸುವ ಕಾರ್ಯವಾಗಬೇಕು. ಯುವಕರಲ್ಲಿ ರಾಷ್ಟ್ರಪ್ರೇಮದ ಬೀಜ ಬಿತ್ತಬೇಕು. ದುಶ್ಚಟಮುಕ್ತ ಸಮಾಜವಾಗಬೇಕಾದರೆ ಯುವಕರು ಜಾಗೃತರಾಗಬೇಕು. ವ್ಯಕ್ತಿ ವ್ಯಕ್ತಿತ್ವಪೂರ್ಣವಾಗಿದ್ದಾಗ ಆದರ್ಶ ರಾಷ್ಟ್ರ ನಿರ್ಮಾಣ ಸಾಧ್ಯ. ರಾಮ ಎಂದರೆ ರಾಷ್ಟ್ರ. ರಾಷ್ಟ್ರ ಎಂದರೆ ರಾಮ. ರಾಮ ಪ್ರೇಮದ ಜೊತೆಗೆ […]

Read More

ಗಣರಾಜ್ಯೋತ್ಸವ ಆಚರಣೆ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ 72ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಕಾರ್ಯನಿರ್ವಾಹಕರಾದ ಪದ್ಮನಾಭ ಒಡಿಯೂರು ಅವರು ಧ್ವಜಾರೋಹಣ ನೆರವೇರಿಸಿದರು. ಶಾಲಾ ಮುಖ್ಯೋಪಾಧ್ಯಾಯ ಜಯಪ್ರಕಾಶ ಶೆಟ್ಟಿ ಎ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೇಣುಕಾ ಎಸ್ ರೈ, ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಉದಯಕುಮಾರ್ ರೈ ಕಾರ್ಯಕ್ರಮ ನಿರ್ವಹಿಸಿದರು.

Read More

“ಸ್ವಾತಂತ್ರ್ಯವೆಂದರೆ ಸ್ವೇಚ್ಛೆಯಲ್ಲ , ಸ್ವೇಚ್ಛೆ ಸ್ವಾತಂತ್ರ್ಯವೂ ಅಲ್ಲ”-ಒಡಿಯೂರುಶ್ರೀ

ಸ್ವಾತಂತ್ರ್ಯ ವೆಂದರೆ ಸ್ವೇಚ್ಛೆಯಲ್ಲ , ಸ್ವೇಚ್ಛೆ ಸ್ವಾತಂತ್ರ್ಯ ವೂ ಅಲ್ಲ, ಸುವ್ಯವಸ್ಥಿತ ವಾದ ಆಡಳಿತಕ್ಕೆ ಪ್ರಜ್ಞಾವಂತ ಪ್ರಜೆಗಳಿಂದ ಸಾಧ್ಯ. ದೇಶದ ಉನ್ನತಿಯು ದೇಶದ ಕೌಶಲ್ಯಯುತ ಜನರಿಂದ ಅವಲಂಬಿಸಿದೆ,ದೇಶದ ಬಲಿಷ್ಠ ತೆಗೆ ಬೇಕಾದ ರೂಪುರೇಷೆ ಗಳ ತಯಾರಿ ಹಾಗೂ ದೇಶದ ಸಂರಕ್ಷಣೆ ಪ್ರತಿಯೊಬ್ಬರ ಪ್ರಜೆಯ ಕರ್ತವ್ಯ. ಬದುಕು ಶಿಕ್ಷಣದ ಅಗತ್ಯಕ್ಕಾಗಿ ಒಂದರಿಂದ ಐದನೆಯ ತರಗತಿಯವರೆಗೆ ಮಾತೃ ಶಿಕ್ಷಣ ಅಗತ್ಯವೆಂದು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ 74 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರು […]

Read More

“ಪ್ರಜ್ಞಾವಂತ ಪ್ರಜೆಗಳಿಂದಲೇ ಆದರ್ಶ ರಾಷ್ಟ್ರ” –ಒಡಿಯೂರು ಶ್ರೀ

“ದಾಸ್ಯದಿಂದ ಮುಕ್ತವಾಗಿರುವುದೇ ಸ್ವಾತಂತ್ರ್ಯ. ಸ್ವಾತಂತ್ರ್ಯ ಸ್ವೇಚ್ಛೆಯಾಗಬಾರದು. ಸುವ್ಯವಸ್ಥಿತವಾದ ಆಡಳಿತ ನೋಡಬೇಕಾದರೆ ಪ್ರಜ್ಞಾವಂತ ಪ್ರಜೆಗಳಿರಬೇಕು. ಆಗಲೇ ಆದರ್ಶ ರಾಷ್ಟ್ರವಾಗುವುದು. ಧರ್ಮದಂಡದ ಮೂಲಕ ಆಡಳಿತ ನಡೆಸಿದಾಗ ಅಹಂಕಾರವಿರುವುದಿಲ್ಲ. ರಾಜ ದಂಡ, ಧರ್ಮದಂಡ ಎರಡೂ ಅವಶ್ಯಕ. ಧರ್ಮವನ್ನು ಮರೆತ ರಾಜನಿಗೂ ಉಳಿಗಾಲವಿಲ್ಲ. ದೇಶದ ಬಲಿಷ್ಠತೆಗೆ, ಸಂರಕ್ಷಣೆಗೆ ನಾವೆಲ್ಲರೂ ಬದ್ಧರಾಗಿರಬೇಕು. ಭಾರತದ ದೇಶದ ಅಡಿಪಾಯವೇ ಅಧ್ಯಾತ್ಮಿಕತೆ. ಇದರಿಂದಾಗಿ ಭಾರತಕ್ಕೆ ಯಾವುದೇ ಅಪಾಯವಿಲ್ಲ. ಇದಕ್ಕೆ ಪೂರಕವಾಗಿ ಮಕ್ಕಳಲ್ಲಿ ಧಾರ್ಮಿಕತೆಯೊಂದಿಗೆ ರಾಷ್ಟ್ರೀಯತೆಯನ್ನು ಬೆಳೆಸಬೇಕು. ಬದುಕು ಶಿಕ್ಷಣವನ್ನು ಕೊಡಿಸಬೇಕು. ಸತ್ಸಂಕಲ್ಪದ ಭವಿಷ್ಯದ ರಾಷ್ಟ್ರ ನಿರ್ಮಾಣಕ್ಕೆ ಕಂಕಣಬದ್ಧರಾಗಿರುವ ಪ್ರಧಾನಿ […]

Read More

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top