+91 8255-266211
info@shreeodiyoor.org

ಶ್ರೀ ಗಣಪತಿ ಅಥರ್ವಶೀರ್ಷ ಹವನ


 

“ವಿಘ್ನನಿವಾರಕ ಗಣಪತಿ ಜಲತತ್ತ್ವದ ಅಧಿಪತಿ. ಭಕ್ತಿ-ಶ್ರದ್ಧೆಯಿಂದ ಸಲ್ಲಿಸಿದ ಪೂಜೆ; ಅರ್ಪಿಸಿದ ಸುವಸ್ತುಗಳನ್ನು ಗಣಪತಿಯು ಸ್ವೀಕರಿಸುತ್ತಾನೆ. ಮೃಗತ್ವದಿಂದ ಮನುಷ್ಯತ್ವ; ಮನುಷ್ಯತ್ವದಿಂದ ದೇವತ್ವವನ್ನು ಹೊಂದಬೇಕೆನ್ನುವುದೇ ಗಣಪತಿಯ ಸಂದೇಶವಾಗಿದೆ. ಪಂಚಭೂತಗಳಲ್ಲಿ ದೇವರನ್ನು ಕಂಡು ಪೂಜಿಸುವುದು ನಮ್ಮ ಸಂಸ್ಕøತಿ. ಈ ನಿಟ್ಟಿನಲ್ಲಿ ಮಣ್ಣಿನಿಂದ ನಿರ್ಮಿತ ಗಣಪತಿಯನ್ನು ಪಂಚಭೂತಗಳಲ್ಲಿ ಒಂದಾದ ಜಲದಲ್ಲಿ ವಿಸರ್ಜಿಸುವ ಪದ್ಧತಿ ರೂಢಿಯಲ್ಲಿದೆ.

ಅಂತಃಚಕ್ಷಸ್ಸುವಿನಿಂದ ಎಲ್ಲವನ್ನು ಅರಿತಾಗ ಬದುಕು ಹಸನಾಗುತ್ತದೆ ” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ಜರಗಿದ ಶ್ರೀ ಗಣಪತಿ ಅಥರ್ವಶೀರ್ಷ ಹವನದ ಸಂದರ್ಭ ಆಶೀರ್ವಚನ ನೀಡಿದರು.

ಈ ಸುಸಂದರ್ಭ ಸಾಧ್ವಿ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ವೇ|ಮೂ ಚಂದ್ರಶೇಖರ ಉಪಾಧ್ಯಾಯರ ನೇತೃತ್ವದಲ್ಲಿ ಶ್ರೀ ಗಣಪತಿ ಅಥರ್ವಶೀರ್ಷ ಹವನ ಸಂಪನ್ನಗೊಂಡಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top