+91 8255-266211
info@shreeodiyoor.org

“ಧರ್ಮಶ್ರದ್ಧೆ ಇದ್ದರೆ ಸಮಾಜಮುಖಿ ಕಾರ್ಯ ನಡೆಸಲು ಸಾಧ್ಯ” ಒಡಿಯೂರು ಶ್ರೀ ಆಶೀರ್ವಚನ

ಉಳ್ಳಾಲ, ಮಾ.28: “ಧರ್ಮಶ್ರದ್ಧೆ ಇದ್ದರೆ ಮಾತ್ರ ಸಮಾಜಮುಖಿ ಕಾರ್ಯ ನಡೆಸಲು ಸಾಧ್ಯ. ನಾವು ಮಾನವರಾಗಿ ಧಾರ್ಮಿಕ ಮಾನವೀಯ ಮೌಲ್ಯದೊಂದಿಗೆ ಬದುಕುವುದರೊಂದಿಗೆ ಸಮಾಜಕ್ಕೂ ನಮ್ಮಿಂದಾದ ಕೊಡುಗೆ ನೀಡುವಂತಾಗಬೇಕು. ಸಮಾಜ ಮತ್ತು ಸಂತರ ನಡುವೆ ಅನ್ಯೋನ್ಯ ಸಂಬಂಧವಿದೆ. 24 ಗ್ರಾಮಗಳಲ್ಲಿ ದಶಮುಖಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನಸಂಪತ್ತು ಇಲ್ಲಿ ಮೇಳೈಸಿದ್ದು ಇದು ಒಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಇದರೊಂದಿಗೆ ಸನಾತನ ಸಂಸ್ಕøತಿಯನ್ನು ಬಿಂಬಿಸುವ ಕಾರ್ಯ ಆಗಲಿ” ಎಂದು ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಮಿತಿ ಉಳ್ಳಾಲ ವಲಯ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿ ಕೋಣಾಜೆ ಇದರ ಜಂಟಿ ಆಶ್ರಯದಲ್ಲಿ ಅಸೈಗೋಳಿ ಬಂಟರ ಭವನದಲ್ಲಿ ನಡೆದ ಸಮಾಜಮುಖಿ ಮಾದರಿ ಕಾರ್ಯಕ್ರಮಗಳ ಆರಂಭೋತ್ಸವದ ಕಾರ್ಯಕ್ರಮಕ್ಕೆ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಚಾಲನೆ ನೀಡಿ ಆಶೀರ್ವಚನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಅವರು ಮಾತನಾಡಿ “ಮಂಗಳೂರು ವಿ.ವಿ. ಈಗಾಗಲೇ 10 ಗ್ರಾಮ ದತ್ತು ಕಾರ್ಯಕ್ರಮದೊಂದಿಗೆ 10 ಸರಕಾರಿ ಶಾಲೆಗಳ ದತ್ತು ತೆಗೆದುಕೊಂಡು ಕಾರ್ಯ ಆರಂಭಿಸಿದೆ. ಇದೀಗ ಒಡಿಯೂರು ಶ್ರೀಗಳ ಈ ಕಾರ್ಯಕ್ರಮದೊಂದಿಗೆ ಇನ್ನಷ್ಟು ಗ್ರಾಮೀಣ ಪ್ರದೇಶದ ಕಟ್ಟಕಡೆಯ ವ್ಯಕ್ತಿಗೂ ಈ ಸಮಾಜಮುಖಿ ಕಾರ್ಯ ಮುಟ್ಟಿಸುವ ಕಾರ್ಯ ಆಗಲಿದೆ” ಎಂದರು.
ಮುಖ್ಯ ಅತಿಥಿ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ| ಸತೀಶ್ ಭಂಡಾರಿ ಮಾತನಾಡಿ “ಸುಸಂಸ್ಕøತ ಸಮಾಜ ನಿರ್ಮಾಣ ಮಾಡುವಲ್ಲಿ ಒಡಿಯೂರು ಸಂಸ್ಥಾನ ಕೃಷಿ ಸಂಸ್ಕøತಿಗೆ ಮಹತ್ವದ ಆದ್ಯತೆ ನೀಡುತ್ತಿರುವುದು ಪ್ರಶಂಶನೀಯ” ಎಂದರು.
ಮಂಗಳೂರು ವಿ.ವಿ. ಪ್ರಭಾರ ಕುಲಪತಿ ಪ್ರೊ. ಪಿ. ಎಲ್. ಧರ್ಮ, ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ ಕೇಂದ್ರ ಸಮಿತಿ ಕೋಶಾಧಿಕಾರಿ ಶ್ರೀ ಸುರೇಶ್ ರೈ, ಉಳ್ಳಾಲ ಸಮಿತಿ ಕಾರ್ಯಾಧ್ಯಕ್ಷ ಶ್ರೀ ಚಂದ್ರಹಾಸ ಅಡ್ಯಂತಾಯ ಉಪಸ್ಥಿತರಿದ್ದರು.
ಉಳ್ಳಾಲ ಸಮಿತಿ ಅಧ್ಯಕ್ಷ ಶ್ರೀ ಪ್ರಸಾದ ರೈ ಕಲ್ಲಿಮಾರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಕೆ. ರವೀಂದ್ರ ರೈ ಕಲ್ಲಿಮಾರು ಅವರು ಪ್ರಸ್ತಾವನೆಗೈದರು, ಶ್ರೀ ಸುಕೇಶ್ ಚೌಟ ಕಾರ್ಯಕ್ರಮ ನಿರ್ವಹಿಸಿದರು, ಕೋಶಾಧಿಕಾರಿ ಶ್ರೀ ರವಿಶಂಕರ್ ಸೋಮೇಶ್ವÀರ ವಂದಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top