+91 8255-266211
info@shreeodiyoor.org

“ಬದುಕಿನ ರಥಕ್ಕೆ ಸಂಸ್ಕಾರದ ರಸವಿರಬೇಕು” -ಒಡಿಯೂರು ಶ್ರೀ

 

ಮೀಯಪದವು, ಮಾ.28: “ಬದುಕು ಎಂಬ ರಥದಲ್ಲಿ ಜೀವ ದೇವರಿರುವರು, ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟಾಗ ಮಾನವೀಯ ಮೌಲ್ಯಗಳನ್ನು ಪೋಷಿಸಲು ಸಾಧ್ಯ ನಮ್ಮ ರಥವನ್ನು ನಾವು ಎಳೆಯಬೇಕಾದರೆ ಸಂಸ್ಕಾರದ ರಸವನ್ನು ಸೇವಿಸಬೇಕು. ಭಜನೆ ಧಾರ್ಮಿಕತೆಯ ಬುನಾದಿ, ಹನುಮಾನ್ ಚಾಲೀಸ ಬದುಕಿಗೆ ಆಸರೆ, ಸೇವಾ ಮನೋಭಾವನೆಯನ್ನು ಬೆಳಗಿಸಲು ಸಾಧ್ಯ. ಮನಮನೆಗಳು ಮಕ್ಕಳ ಧಾರ್ಮಿಕತೆಗಳನ್ನು ಉಳಿಸುವ ಬೆಳೆಸುವ ಸಂಸ್ಕಾರ ಕೇಂದ್ರವಾಗಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಷಷ್ಟ್ಯಬ್ದ ಸಂಭ್ರಮ ಮೀಂಜ ಸಮಿತಿ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ ಜ್ಞಾನವಾಹಿನಿ ಮೀಂಜ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಮಂಜೇಶ್ವರ ಸಮಿತಿಯ ಗೌರವ ಮಾರ್ಗದರ್ಶಕರಾದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಸಂಸ್ಕಾರ ಬದುಕಿಗೆ ಭದ್ರತೆಯನ್ನು ಕರುಣಿಸುವುದು, ಬದುಕಿನಲ್ಲಿ ನೆಮ್ಮದಿ, ಶಾಂತಿ ಇರಬೇಕಾದರೆ ಹನುಮಾನ್ ಚಾಲೀಸಾ ಪಠಣೆ ಮಾಡಬೇಕು. ರಾಮ ಸ್ಮರಣೆ ಮಾಡುವವರಿಗೆ ಸೋಲಿಲ್ಲ ಎಂದು ಆಶೀರ್ವಚನ ನೀಡಿದರು. ಸಾಧ್ವಿ ಶ್ರೀ ಮಾತಾನಂದಮಯೀಯವರು ಹನುಮಾನ್ ಚಾಲೀಸಾ ಪಠಿಸಿದರು.
ಷಷ್ಠ್ಯಬ್ದ ಸಂಭ್ರಮ ಮಂಜೇಶ್ವರ ವಲಯ ಸಮಿತಿಯ ಗೌರವಾಧ್ಯಕ್ಷ ಡಾ| ಶ್ರೀಧರ ಭಟ್ ಉಪ್ಪಳ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ದಾಸಣ್ಣ ಆಳ್ವ ಕುಳೂರು ಬೀಡು, ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀ ನವನೀತ ಶೆಟ್ಟಿ ಕದ್ರಿ, ಮಂಜೇಶ್ವರ ವಲಯ ಅಧ್ಯಕ್ಷ ಶ್ರೀ ಶಶಿಧರ ಶೆಟ್ಟಿ ಜಮ್ಮದ ಮನೆ, ಮೀಂಜ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಶೆಟ್ಟಿ, ಅಂಬಾರು ಸದಾಶಿವ ದೇವಸ್ಥಾನ ಆಡಳಿತ ಮೊಕ್ತೇಸರರು ಶ್ರೀ ಕೃಷ್ಣಪ್ಪ ಪೂಜಾರಿ ದೇರಂಬಳ, ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸೇವಾ ಟ್ರಸ್ಟ್ ಶ್ರೀಮತಿ ಪ್ರೇಮಾ ಕೆ ಭಟ್, ಶ್ರೀ ಶ್ರೀಧರ ಶೆಟ್ಟಿ ಮುಟ್ಟಮ್, ಶ್ರೀ ಮೋಹನ್ ಹೆಗ್ಡೆ ಬೆಜ್ಜ, ಶ್ರೀ ಮಲಾರ್ ಜಯರಾಮ್ ರೈ, ಸೆರಾಜೆ ಶ್ರೀ ಗಣಪತಿ ಭಟ್ ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಮಂಗಳೂರು ನಗರ ಸಮಿತಿ ಸಂಚಾಲಕ ಶ್ರೀ ನಾಗರಾಜ ಆಚಾರ್ಯ, ಮಂಜೇಶ್ವರ ವಲಯ ಕಾರ್ಯಾಧ್ಯಕ್ಷ ಶ್ರೀ ಪಿ.ಆರ್. ಶೆಟ್ಟಿ ಪೊಯ್ಯೆಲು, ಮೀಂಜ ಸಮಿತಿಯ ಗೌರವಾಧ್ಯಕ್ಷ ಶ್ರೀ ಬಾಲಕೃಷ್ಣ ಭಂಡಾರಿ ಉಪಸ್ಥಿತರಿದ್ದರು.
ಮೀಂಜ ಪಂಚಾಯತಿಯ ವಿವಿಧ ಸ್ತರಗಳಲ್ಲಿ ಸಾಧನೆಗೈದ 60 ಸೇವಾಕರ್ತರನ್ನು ಗೌರವಿಸಲಾಯಿತು ಮತ್ತು ಸಾಂಕೇತಿಕವಾಗಿ ಗಿಡ ವಿತರಣೆ ಮಾಡಲಾಯಿತು.
ಮೀಂಜ ಸಮಿತಿಯ ಆಧ್ಯಕ್ಷ ಡಾ| ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶ್ರೀ ರಾಮಕೃಷ್ಣ ಸಂತಡ್ಕ ವಂದಿಸಿದರು. ಶ್ರೀ ರಾಜರಾಮ್ ರಾವ್ ಚಿಗುರುಪಾದೆ, ಶ್ರೀ ಅರವಿಂದಾಕ್ಷ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮೊದಲು ಮಹಾಲಿಂಗೇಶ್ವರ ಕುಣಿತ ಭಜನಾ ಮಂಡಳಿ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಭಜನಾ ಮಂದಿರ ಬಾಳ್ಯೂರು, ಶ್ರೀ ಅಯ್ಯಪ್ಪ ಭಜನಾ ಮಂದಿರ ಮೀಯಪದವು, ಶ್ರೀ ಮಹಾಗಣಪತಿ ಭಜನಾ ಸಂಘ ಮದಂಗಲ್ಲು, ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂಡಳಿ ಕಡಂಬಾರು ಇದರ ಮಕ್ಕಳ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ಜರಗಿತು. ಕಾರ್ಯಕ್ರಮದ ಅಂಗವಾಗಿ ನಿಶ್ಮಿತ ಕೃಷ್ಣ ಮತ್ತು ಬಳಗದವರಿಂದ ಶಿವತಾಂಡವ ಹಾಗು ಗಂಗಾ ಭಗೀರಥ ನೃತ್ಯ ರೂಪಕ ಜರಗಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top