+91 8255-266211
info@shreeodiyoor.org

“ಜ್ಞಾನದ ಹಸಿವು ನಿರಂತರ ಆಗಬೇಕು” – ಒಡಿಯೂರು ಶ್ರೀ

 

ಹೂವಿನಹಡಗಲಿ: “ಎಲ್ಲಾ ಸಂಪತ್ತಿಗಿಂತ ಮಿಗಿಲಾದ ವಿಶೇಷ ಸಂಪತ್ತು ಆತ್ಮಜ್ಞಾನದ ಸಂಪತ್ತು. ಜ್ಞಾನದ ಹಸಿವು ನಮಗೆ ನಿರಂತರ ಆಗಬೇಕು. ಅದಕ್ಕೆ ಆಹಾರವೇ ಆತ್ಮಜ್ಞಾನ. ಅದನ್ನು ಸಂಪಾದನೆ ಮಾಡಲು ಮುಂದುವರಿದರೆ ಎಲ್ಲವೂ ಗೌಣವಾಗುತ್ತದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಆಶೀರ್ವಚನಗೈದರು.

ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಹೂವಿನಹಡಗಲಿ (ಮಲ್ಲಿಗೆನಾಡು) ಘಟಕದ ನಾಲ್ಕನೇ ವಾರ್ಷಿಕೋತ್ಸವ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಹೂವಿನಹಡಗಲಿ ಘಟಕದ ಪ್ರಥಮ ವಾರ್ಷಿಕ ಹಬ್ಬದ ಧರ್ಮಸಭೆಯಲ್ಲಿ ಸಂದೇಶ ನೀಡಿದ ಪೂಜ್ಯ ಶ್ರೀಗಳವರು “ಮನುಷ್ಯ- ಮನುಷ್ಯನಲ್ಲಿರುವ ಪ್ರೀತಿಯ ಬೆಸುಗೆ ಇದೀಗ ಕ್ಷೀಣವಾಗಿದೆ. ಪ್ರೀತಿಯ ಬೆಸುಗೆಯೇ ಜೀವನ ಮೌಲ್ಯ. ಮಲ್ಲಿಗೆನಾಡಿನಲ್ಲಿ ಶ್ರೀ ಸಂಸ್ಥಾನದ ಎರಡು ಕಣ್ಣುಗಳಾಗಿ ಸೇವಾ ಬಳಗ ಮತ್ತು ಮಹಿಳಾವಿಕಾಸ ಕೇಂದ್ರ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡು ಸಾರ್ಥಕ ಬದುಕು ನಡೆಸುತ್ತಿರುವುದು ಸಂತಸ ತಂದಿದೆ. ಮಲ್ಲಿಗೆನಾಡಿನಲ್ಲಿ ಸೇವೆ ಎನ್ನುವ ಪುಷ್ಪವನ್ನು ಅರಳಿಸಿದ ಕೀರ್ತಿ ಶ್ರೀ ನೀಲಕಂಠಪ್ಪ ದಂಪತಿ ಅವರಿಗೆ ಸಲ್ಲಬೇಕು” ಎಂದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶೀರ್ವಚನಗೈದು “ಎಲ್ಲರ ಹೃದಯ ಗೆಲ್ಲುವ ಹೃದವಂತಿಕೆ ಮೂಲಕ ಹೂವಿನಹಡಗಲಿಯ ಜನರಿಂದಾಗಿ ಬಂಗಾರದ ಹೂವಿಗೆ ಪರಿಮಳ ಬಂದತಾಗಿದೆ. ಧಾರ್ಮಿಕತೆಯಲ್ಲಿ ತೊಡಗಿಸಿಕೊಂಡು ಸೇವಾ ಮನೋಭಾವ ಬೆಳೆಸಿಕೊಂಡಿರುವ ಮಲ್ಲಿಗೆನಾಡಿನ ಜನರು ಅಭಿನಂದನಾರ್ಹರು” ಎಂದರು.

ಸಭೆಯಲ್ಲಿ ಹೂವಿನಹಡಗಲಿ ಶ್ರೀ ಗವಿಸಿದ್ಧೇಶ್ವರ ಶಾಖಾಮಠದ ಡಾ. ಹಿರಿಶಾಂತವೀರ ಮಹಾಸ್ವಾಮಿಗಳು, ಹೂವಿನಹಡಗಲಿ ಹೀರೆಮಲ್ಲನಕೇರಿ ಮಠದ ಶ್ರೀ ಮ.ನಿ.ಪ್ರ. ಚೆನ್ನಬಸವ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ರಾಣಿಬೆನ್ನೂರು ಕ್ಷೇತ್ರದ ಶಾಸಕ ಶ್ರೀ ಅರುಣಕುಮಾರ ಎಂ. ಪೂಜಾರ್, ಹೂವಿನಹಡಗಲಿಯ ಸಮಾಜಸೇವಕ ಶ್ರೀ ಓದೂಗಂಗಪ್ಪ, ಶ್ರೀ ಕೃಷ್ಣರಾಜೇಂದ್ರ ಗಿರಿದಾಮ, ಕೆಮ್ಮಣ್ಣುಗುಂಡಿ ತರೀಕೆರೆಯ ವಿಶೇಷಾಧಿಕಾರಿ ಡಾ. ಯೋಗಾನಂದ ಭಾಂಡ್ಯ, ಹೂವಿನಹಡಗಲಿ ರಂಗಭಾರತಿ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಸುಮಾ ಎಂ.ಪಿ. ಪ್ರಕಾಶ್, ನಿವೃತ್ತ ಡಿ.ವೈ.ಎಸ್.ಪಿ. ಹುಬ್ಬಳ್ಳಿ ಆರ್.ಎಸ್. ಪಾಟೀಲ್, ಜಕಣಾಚಾರಿ ಪ್ರಶಸ್ತಿ ವಿಜೇತ ಶಿಲ್ಪಿ ಶ್ರೀ ಹಂಸಾನಂದಚಾರ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಹೂವಿನಹಡಗಲಿ ಘಟಕದ ಅಧ್ಯಕ್ಷೆ ಶ್ರೀಮತಿ ವೀಣಾ, ಕಾರ್ಯದರ್ಶಿ ಶ್ರೀಮತಿ ಸುಮಂಗಳಾ ಉಪಸ್ಥಿತರಿದ್ದರು.

ಶ್ರೀ ರಾಶನ್ ಗೌಡ ಸ್ವಾಗತಿಸಿದರು. ಶ್ರೀ ಯಶವಂತ ವಿಟ್ಲ ಶ್ರೀ ಸಂಸ್ಥಾನದ ಬಗ್ಗೆ ಮಾಹಿತಿ ನೀಡಿದರು. ಶ್ರೀ ಪುನೀತ್‍ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಹೂವಿನಹಡಗಲಿ ಘಟಕದ ಅಧ್ಯಕ್ಷ ಶ್ರೀ ನೀಲಕಂಠಪ್ಪ ಎಂ.ಜಿ. ಅವರು ವಂದಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top