+91 8255-266211
info@shreeodiyoor.org

ಬೆಂಗಳೂರು ಘಟಕದ ವತಿಯಿಂದ ಜರಗಿದ ಗುರುವಂದನಾ ಕಾರ್ಯಕ್ರಮ

ಭಾರತೀಯ ಸಂಸ್ಕೃತಿಯಲ್ಲಿ ಮಾತೃ-ಪಿತೃ, ಆಚಾರ್ಯ, ಅತಿಥಿಗಳನ್ನು ದೇವರಂತೆಯೇ ನೋಡುವುದು ನಿಯಮವೇ ಸರಿ. ಹೆತ್ತ ತಂದೆ-ತಾಯಿಗಳ ಚಿತ್ತವನ್ನು ನೋಯದಂತೆ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯವಾಗುತ್ತದೆ. ಇಂದಿನ ಒತ್ತಡದ ಯುಗದಲ್ಲಿ ಸಂಪಾದನೆಯ ದಾರಿಯಲ್ಲಿ ಸಾಗುತ್ತಿರುವಾಗ ಮಕ್ಕಳ ಮೇಲೆ ಪ್ರೀತಿಯ ಅಂತರಗಳು ಹೆಚ್ಚಾಗಿ ತಂದೆ-ತಾಯಿಗಳನ್ನು ಮರೆಯುವಂತಹ ಪ್ರಸಂಗವು ನಿರ್ಮಾಣವಾಗುತ್ತದೆ. ಹಿರಿಯರಿಗೆ ಮನೆಯಲ್ಲಿ ಜಾಗವಿಲ್ಲದಂತಾಗುತ್ತದೆ. ಈ ವಿಪರ್ಯಾಸಗಳಾಗದಂತೆ ನೋಡಿಕೊಳ್ಳಬೇಕಾದರೆ ನಮ್ಮಲ್ಲೂ ಮತ್ತು ಮಕ್ಕಳಲ್ಲೂ ಸಂಸ್ಕಾರದ ಬೀಜವನ್ನು ಬಿತ್ತಬೇಕಾಗಿದೆ. ಆಗ ಸಂಸ್ಕೃತಿ ಬೆಳೆದು ಬರುವುದಕ್ಕೆ ಸಾಧ್ಯತೆ ಇದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಬೆಂಗಳೂರು ನಗರದ ವಿಜಯಾ ಲೇಔಟ್‍ನಲ್ಲಿರುವ ಸುಂದರರಾಮ್ ಶೆಟ್ಟಿ ಸಭಾಂಗಣದಲ್ಲಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಬೆಂಗಳೂರು ಘಟಕದ ವತಿಯಿಂದ ಜರಗಿದ ಗುರುವಂದನಾ ಕಾರ್ಯಕ್ರಮದಲ್ಲಿ ಗುರುವಂದನೆಯನ್ನು ಸ್ವೀಕರಿಸಿ ಸಂದೇಶ ನೀಡಿದರು.

“ಶ್ರದ್ಧಾ ಮನೋಭಾವನೆ ಇದ್ದಾಗ ಮಾತ್ರ ಯಾವುದೇ ಕಾರ್ಯ ಯಶಸ್ವಿಯಾಗುತ್ತದೆ. ಸದ್ಗುಣಗಳಿಂದ ದುರ್ಗುಣಗಳು ದೂರವಾಗುತ್ತದೆ” ಎಂದು ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶೀರ್ವಚನಗೈದರು.ಈ ಸುಸಂದರ್ಭ ಮಂತ್ರಪಠಣೆಯಲ್ಲಿ ವಿಶೇಷ ಸಾಧನೆಗೈದ ಶ್ರೀಮತಿ ವಿಶಾಲಾಕ್ಷಿ ಹೆಗ್ಡೆ ಮತ್ತು ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀಮತಿ ಅಮೃತಾ ಶೆಟ್ಟಿಯವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಶ್ರೀ ಉಪೇಂದ್ರ ಶೆಟ್ಟಿ, ಪುಣೆಯ ಖುಷಿ ಬಯೋಟೆಕ್ ಸಂಸ್ಥೆಯ ಆಡಳಿತ ನಿರ್ದೇಶಕ ಶ್ರೀ ಉಷಾಕುಮಾರ್ ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಪುಣೆಯ ಪ್ರಧಾನ ಕಾರ್ಯದರ್ಶಿ ಶ್ರೀ ರೋಹಿತ್ ಡಿ. ಶೆಟ್ಟಿ ನಗ್ರಿಗುತ್ತು, ಎಂ.ಎಸ್.ಆರ್.ಎಸ್. ನಗರ ಸಭಾಂಗಣದ ಟ್ರಸ್ಟಿ ಶ್ರೀ ರಮಾಕಾಂತ ಶೆಟ್ಟಿ, ವಿಜಯ ಎನ್‍ಕ್ಲೇವ್ ಅಪಾರ್ಟ್‍ಮೆಂಟ್ ಮಾಲೀಕರ ಅಸೋಸಿಯೇಶನ್‍ನ ಅಧ್ಯಕ್ಷ ಶ್ರೀ ವಿರೂಪಾಕ್ಷ ಶೆಟ್ಟಿ, ವಿಜಯ ಬ್ಯಾಂಕ್ ನೌಕರರ ವಸತಿ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ದಿವಾಕರ ಶೆಟ್ಟಿ, ಕರ್ನಲ್ ಎ.ಜೆ. ಭಂಡಾರಿ, ಬೆಂಗಳೂರಿನ ಉದ್ಯಮಿ ಶ್ರೀ ಎಂ. ಬಾಲಚಂದ್ರ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಎ. ಅಶೋಕ್‍ಕುಮಾರ್, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸೇವಾ ಸಮಿತಿಯ ಶ್ರೀ ಜಯಕರ ಶೆಟ್ಟಿ, ಬೆಂಗಳೂರು ಘಟಕದ ಬಳಗದ ಅಧ್ಯಕ್ಷ ಶ್ರೀ ಭವಾನಿಶಂಕರ ಶೆಟ್ಟಿ ಹಾಗೂ ಶ್ರೀ ಪಟ್ಲಗುತ್ತು ಮಹಾಬಲ ಶೆಟ್ಟಿ ಉಪಸ್ಥಿತರಿದ್ದರು.

ಬೆಂಗಳೂರು ಘಟಕದ ಸಂಚಾಲಕ ಶ್ರೀ ಪಿ. ಲಕ್ಷ್ಮಣ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ವೀರೇಂದ್ರ ಶೆಟ್ಟಿ ವಂದನಾರ್ಪಣೆಗೈದರು. ಶ್ರೀ ಅಮೃತ್ ನಾೈಕ್ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕøತಿ ಕಾರ್ಯಕ್ರಮದ ಅಂಗವಾಗಿ ಶ್ರೀ ಪಟ್ಲ ಸತೀಶ್ ಶೆಟ್ಟಿಯವರ ಭಾಗವತಿಕೆಯಲ್ಲಿ ‘ಕಂಸ ವಿವಾಹ’ ಯಕ್ಷಗಾನ ಪ್ರದರ್ಶನಗೊಂಡಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top