+91 8255-266211
info@shreeodiyoor.org

ಬನ್ನೂರು: ಕರ್ಮಲದಲ್ಲಿ ಮಹಿಳೆ ಮತ್ತು ಕಾನೂನು ಮಾಹಿತಿ ಕಾರ್ಯಾಗಾರ

ಪುತ್ತೂರು ಮಾ.21: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ ಸಮಿತಿ ತಾಲೂಕು ಸಮಿತಿ ಮತ್ತು ಶ್ರೀದೇವಿ ಮಹಿಳಾ ಮತ್ತು ಯುವಕ ಮಂಡಲ ಕರ್ಮಲ ಬನ್ನೂರು ಇವುಗಳ ಆಶ್ರಯದಲ್ಲಿ ‘ಮಹಿಳೆ ಮತ್ತು ಕಾನೂನು’ ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮವು ಮಾ.21ರಂದು ಬನ್ನೂರು ಕರ್ಮಲ ಮಹಮ್ಮಾಯಿ ಮಾರಿಯಮ್ಮ ದೇವರ ಸನ್ನಿಧಿ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ, ಎ.ಸಿ.ಜೆ.ಎಂ.ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಶ್ರೀ ಮಂಜುನಾಥರವರು ಮಾತನಾಡಿ, “ಹೆಣ್ಣು ಅಬಲೆಯಲ್ಲ, ಅವಳು ಅಬಲೆಯಾಗಿ ಜನ್ಮ ನೀಡಿಲ್ಲ, ಸಬಲೆಯಾಗಿ ಜನ್ಮ ನೀಡಿದ್ದಾಳೆ. ಹೆಣ್ಣಿನಿಂದಾಗಿ ಜಗತ್ತು ಬಲಿಷ್ಠವಾಗಿದೆ. ಪುರುಷ ಪ್ರಧಾನವಾದ ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ. ಮಹಿಳಾ ದೌರ್ಜನ್ಯ ತಡೆಯಲು ಹಲವು ಕಾನೂನುಗಳಿದ್ದು ಅವುಗಳನ್ನು ತಿಳಿದುಕೊಂಡು ತಮ್ಮ ಪರಿಸರದಲ್ಲಿ ಪ್ರಚಾರ ಮಾಡುವ ಮೂಲಕ ಮಹಿಳಾ ದೌರ್ಜನ್ಯವನ್ನು ತಡೆಯುವಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು” ಎಂದು ಹೇಳಿದರು.
ಪ್ರಧಾನ ವ್ಯವಹಾರಿಕ ನ್ಯಾಯಾಧೀಶ, ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಶ್ರೀ ಪ್ರಕಾಶ್ ಪಿ.ಎಂ ಮಾತನಾಡಿ, “ಭಾರತೀಯ ಸಂಸ್ಕøತಿಯಲ್ಲಿ ಮಹಿಳೆಗೆ ವಿಶಿಷ್ಠವಾದ ಸ್ಥಾನವಿದೆ. ಮಹಿಳಾ ದೌರ್ಜನ್ಯಗಳು ಹೆಚ್ಚುತ್ತಿದೆ. ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ದೌರ್ಜನ್ಯ ನಡೆಯುತ್ತಿದ್ದು ಅವುಗಳನ್ನು ಬಳಸುವಾಗ ಮುಂಜಾಗ್ರತಾವಹಿಸುವಂತೆÀ” ಅವರು ತಿಳಿಸಿದರು.
ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ ಸಮಿತಿ ಗೌರವ ಸಲಹೆಗಾರರಾದ ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, “ಮಹಿಳಾ ದೌರ್ಜನ್ಯ ತಡೆಯಲು ಕಾನೂನುಗಳನ್ನು ಎಲ್ಲಾ ಸಂದರ್ಭಗಳಲ್ಲಿ ಬಳಕೆ ಮಾಡುವುದು ಸರಿಯಲ್ಲ. ಇದರಿಂದ ಭಾರತೀಯ ಸಂಸ್ಕøತಿಯ ನಾಶವಾಗಲಿದೆ. ಕೌಟುಂಬಿಕ ಬಾಂಧವÀ್ಯತೆಗೆ ಧಕ್ಕೆಯಾಗಲಿದೆ. ಕಾನೂನನ್ನು ದುರುಪಯೋಗಪಡಿಸದೆ ಒಬ್ಬರನ್ನೊಬ್ಬರು ಅರಿತು ಬಾಳಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರವೇ ಕಾನೂನಿನ ಮೊರೆ ಹೋಗಬೇಕು” ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಶ್ರೀಮತಿ ಕಸ್ತೂರಿ ಬೊಳುವಾರು ಮಾತನಾಡಿ, ಮಹಿಳೆ ಮತ್ತು ಕಾನೂನು ಎಂಬ ವಿಷಯದಲ್ಲಿ ಮಾಹಿತಿ ನೀಡಿದರು.
ನಗರ ಸಭಾ ಸದಸ್ಯೆ ಶ್ರೀಮತಿ ಪ್ರೇಮಲತಾ ನಂದಿಲ, ಕಾರ್ಯಕ್ರಮದ ಸಂಯೋಜಕಿ ನ್ಯಾಯವಾದಿ ಶ್ರೀಮತಿ ರಾಜೇಶ್ವರಿ, ಶ್ರೀದೇವಿ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಶಾರದಾ ಕೆ.ಎಲ್., ಶ್ರೀಮತಿ ರೋಹಿಣಿ ರಾಘವ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಷಷ್ಠ್ಯಬ್ದ ಸಂಭ್ರಮ ಸಮಿತಿ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಶ್ರೀಮತಿ ಹರಿಣಾಕ್ಷಿ ಜೆ ಶೆಟ್ಟಿ ಪ್ರಸ್ತಾವನೆಗೈದರು. ಶ್ರೀದೇವಿ ಯುವತಿ ಮಂಡಲ ಶ್ರೀಮತಿ ಸುಲೋಚನ ಸ್ವಾಗತಿಸಿದರು. ಶ್ರೀಮತಿ ಸೌಮ್ಯ ಕೆ. ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಕವಿತ ವಂದಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top