+91 8255-266211
info@shreeodiyoor.org

ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ವಾರ್ಷಿಕ ಸಾಮಾನ್ಯ ಸಭೆ


 
“ಧರ್ಮಯುಕ್ತ ವ್ಯವಹಾರದಿಂದ ಸಮಾಜದ ಹಿತ ಕಾಪಾಡಲು ಸಾಧ್ಯ. ಶ್ರೀ ಸಂಸ್ಥಾನದಿಂದ ಆರಂಭಿಸಿದ ಸಹಕಾರಿಯಿಂದ ಹಲವಾರು ಉದ್ಯೋಗ ಸೃಷ್ಟಿಯಾಗಿದೆ. ಆ ಮೂಲಕ ಗ್ರಾಮವಿಕಾಸ ಯೋಜನೆಗೆ ಬಲ ಬಂದಿದೆ. ಸ್ವ-ಉದ್ಯೋಗ ಮಾಡುವವರಿಗೆ ಸಂಘವನ್ನು ಬಳಸಿಕೊಳ್ಳಬಹುದಾಗಿದೆ. ಆಧುನಿಕ ತಂತ್ರಜ್ಞಾನವನ್ನು ಒದಗಿಸಲಾಗಿದ್ದು ಜನೋಪಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸಹಕಾರ ತತ್ತ್ವ ಬದುಕಿನ ಸತ್ವ, ಸತ್ಯವೂ ಆಗಿದೆ. ಬದುಕಿನ ಅನಾವರಣಕ್ಕೆ ಸಹಕಾರ ತತ್ತ್ವ ಅನುಕೂಲವಾಗಲಿದೆ. ಜಿಲ್ಲೆಯ ಆಟೋ ಚಾಲಕರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಹಕಾರಿಯು ಕೈಗೊಂಡ ನಿರ್ಣಯ ಸಹಕಾರಿಯಾಗಿದೆ. ಸೌಹಾರ್ದ ಸಹಕಾರಿ ಸಂಘ ಸಮಾಜದ ಹಿತಕ್ಕಾಗಿ ನಿರ್ಮಿಸಲಾಗಿದ್ದು, ಆಡಳಿತ ಮತ್ತು ಸಿಬ್ಬಂದಿ ವರ್ಗದವರ ನಿಸ್ವಾರ್ಥ ಸೇವೆಯಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಜರಗಿದ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ 2018-19ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಆಶೀರ್ವಚನಗೈದರು.

ಸಹಕಾರಿಯ ಗೌರವ ಮಾರ್ಗದರ್ಶಕರಾಗಿರುವ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿ “ಶ್ರೀ ಗುರುಗಳ ಕೃಪೆ, ಆಶೀರ್ವಾದ, ಮಾರ್ಗದರ್ಶನದಿಂದ ಹಾಗೂ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವ ನಿರ್ದೇಶಕ ಮಂಡಳಿ, ಸಿಬ್ಬಂದಿ ವರ್ಗದವರ ಶ್ರಮದಿಂದ ಯಶಸ್ಸು ಸಾಧ್ಯವಾಗಿದೆ” ಎಂದರು.

ಅಧ್ಯಕ್ಷತೆ ವಹಿಸಿದ್ದ ಸಹಕಾರಿಯ ಅಧ್ಯಕ್ಷ ಲ| ಎ. ಸುರೇಶ್ ರೈ ಮಾತನಾಡಿ ವರ್ಷಾಂತ್ಯಕ್ಕೆ 140.79ಕೋಟಿ ರೂ. ಠೇವಣಿ ಸಂಗ್ರಹಿಸಿ, 116.56 ಕೋಟಿ ರೂ. ಸಾಲ ನೀಡಲಾಗಿದೆ. ಸಂಘವು 257.27ಕೋಟಿ ರೂ. ವ್ಯವಹಾರ ನಡೆಸಿ 1.85ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 15 ಶಾಖೆಗಳ ಮೂಲಕ ಕಾರ್ಯನಿರ್ವಹಿಸುವ ಸಹಕಾರಿ ಮುಂದಿನ ದಿನದಲ್ಲಿ ಶಾಖೆಗಳ ಸಂಖ್ಯೆಯನ್ನು ಒಟ್ಟು 24ಕ್ಕೇರಿಸುವ ಆಶಯವಿದೆ. ಸಹಕಾರಿಯಲ್ಲಿ 75ಮಂದಿ ಹಾಗೂ ಸ್ವ-ಸಹಾಯ ಸಂಘದಲ್ಲಿ 145ಮಂದಿ ಸೇರಿ ಒಟ್ಟು 220ಮಂದಿಗೆ ಉದ್ಯೋಗ ನೀಡಲಾಗಿದೆ. ಪೂಜ್ಯ ಶ್ರೀಗಳವರ ಷಷ್ಟ್ಯಬ್ದ ಸಮಾರಂಭಕ್ಕೂ ಮುನ್ನ ಜಿಲ್ಲೆಯಲ್ಲಿರುವ 1 ಲಕ್ಷ ಆಟೋ ಚಾಲಕರಿಗೆ ವಿಮೆ ಸೌಲಭ್ಯ ಕಲ್ಪಿಸುವ ಯೋಜನೆಯನ್ನು ಸಹಕಾರಿ ಹಾಕಿಕೊಂಡಿದೆ” ಎಂದರು.

ನೆರೆ ಪರಿಹಾರ ನಿಧಿಗೆ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯಿಂದ 5ಲಕ್ಷ ರೂ. ಹಾಗೂ ಶ್ರೀ ಸಂಸ್ಥಾನದಿಂದ 5ಲಕ್ಷ ರೂ. ಸಹಿತ ಒಟ್ಟು 10ಲಕ್ಷ ರೂ ನೀಡುವುದಾಗಿ ಘೋಷಿಸಲಾಯಿತು. ಇದೇ ಸಂದರ್ಭ ನೆರೆ ಪರಿಹಾರ ನಿಧಿಗೆ ಸಹಕಾರಿಯ ಎಲ್ಲಾ ಸಿಬ್ಬಂದಿಗಳು ಒಂದು ದಿನದ ವೇತನವನ್ನು ನೀಡಿದರು.

ಮಂಗಳೂರಿನ ಶ್ರೀ ಸುಂದರ ಶೆಟ್ಟಿ, ಶ್ರೀ ಗುರುಪ್ರಸಾದ್ ಬಂಗೇರ, ಶ್ರೀ ವಿಜಯ ಕಿಲ್ಲೆ, ಶ್ರೀ ವಿಶ್ವನಾಥ ಶೆಟ್ಟಿ, ಶ್ರೀ ಯಶವಂತ ವಿಟ್ಲ ಮತ್ತಿತರರು ಸಲಹೆ-ಸೂಚನೆ ನೀಡಿದರು.

ನಿರ್ದೇಶಕರುಗಳಾದ ಶ್ರೀ ವೇಣುಗೋಪಾಲ ಮಾರ್ಲ, ಶ್ರೀ ಪದ್ಮನಾಭ ಶೆಟ್ಟಿ ಪುತ್ತೂರು, ಶ್ರೀ ದೇವಪ್ಪ ನೋಂಡ ಪುತ್ತೂರು, ಶ್ರೀ ತಾರಾನಾಥ ಶೆಟ್ಟಿ ಒಡಿಯೂರು, ಶ್ರೀ ಲೋಕನಾಥ ಜಿ. ಶೆಟ್ಟಿ ತಾಳಿಪ್ಪಾಡಿಗುತ್ತು, ಶ್ರೀ ಗಣೇಶ್ ರೈ ಗಮಿ, ಶ್ರೀಮತಿ ಸರಿತಾ ಅಶೋಕ್‍ಕುಮಾರ್, ಶ್ರೀಮತಿ ಶಾರದಾಮಣಿ ಎಸ್. ರೈ ಸುಳ್ಯ, ಶ್ರೀ ಮೋನಪ್ಪ ಪೂಜಾರಿ ಕಾವು, ಶ್ರೀ ಸೋಮಪ್ಪ ನಾಯ್ಕ, ಕಡಬ ಉಪಸ್ಥಿತರಿದ್ದರು.

ಇದೇ ಸಂದರ್ಭ ಲೆಕ್ಕಪರಿಶೋಧಕರಾಗಿ ಶ್ರೀ ರಾಮ್‍ಮೋಹನ್ ರೈ ಅವರನ್ನು ಆಯ್ಕೆ ಮಾಡಲಾಯಿತು. ನಿರ್ದೇಶಕ ಶ್ರೀ ಗಣಪತಿ ಭಟ್ ಸೇರಾಜೆ ಸ್ವಾಗತಿಸಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಉಗ್ಗಪ್ಪ ಶೆಟ್ಟಿ ಕೊಂಬಿಲ ವರದಿ ಮಂಡಿಸಿದರು. ನಿರ್ದೇಶಕ ಶ್ರೀ ಪಿ. ಲಿಂಗಪ್ಪ ಗೌಡ ವಂದಿಸಿದರು. ಪವಿತ್ರಾ, ಶ್ವೇತಾ ಆಶಯಗೀತೆ ಹಾಡಿದರು. ಶ್ರೀ ದಯಾನಂದ ಶೆಟ್ಟಿ ಬಾಕ್ರಬೈಲ್ ಕಾರ್ಯಕ್ರಮ ನಿರೂಪಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top