+91 8255-266211
info@shreeodiyoor.org

ಆಟಿದ ಆಯನೊ ಉದ್ಘಾಟನೆ


 
“ಶ್ರದ್ಧೆ, ನಂಬಿಕೆಯನ್ನು ಮರೆತಾಗ ಅನಾಹುತವಾಗುತ್ತದೆ. ತುಳು ಸಂಸ್ಕøತಿಯ ಉಳಿವಿಗೆ ಆಟಿದ ಆಯನೊ ಪೂರಕ. ಯುವಸಮುದಾಯಕ್ಕೆ ಆಟಿಯ ತಿನಿಸು, ಆಹಾರ ನಿಯಮ, ಜೀವನ ಪದ್ಧತಿಯ ಬಗ್ಗೆ ತಿಳಿಸುವ ಕಾರ್ಯವಾಗಬೇಕಿದೆ. ತುಳು ಸಂಸ್ಕøತಿಯಲ್ಲಿ ಸಿಗುವ ವಿಚಾರಗಳು ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ತುಳುವ ಸಂಸ್ಕøತಿ ದರ್ಶನ ಮಾಡಿಸುವ ತುಳು ಗ್ರಾಮವನ್ನು ಕಟ್ಟಬೇಕೆಂಬ ಚಿಂತನೆ ಇದೆ. ತುಳುವರಲ್ಲಿ ಇರುವ ಆಸಕ್ತಿಯಿಂದ ತುಳು ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ. ಆಟಿ ತಿಂಗಳ ಕಾರ್ಯಕ್ರಮಗಳು ಸಂಭ್ರಮವಾಗದೆ, ನೈಜತೆ ಉಳಿಸುವ ಕಾರ್ಯ ಆಗಲಿ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಆಯೋಜಿಸಿದ್ದ ಆಟಿದ ಆಯನೊ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನಗೈದರು.

ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಉಪಸ್ಥಿತರಿದ್ದರು. ಒಡಿಯೂರ್ದ ತುಳುಕೂಟದ ಮಾಜಿ ಅಧ್ಯಕ್ಷ ಶ್ರೀ ಮಲಾರು ಜಯರಾಮ ರೈ ಅವರು ಆಟಿ ಆಚರಣೆಯ ಬಗ್ಗೆ ಮಾತನಾಡಿದರು. ಮುಂಬೈನ ಉದ್ಯಮಿ ಧಾರ್ಮಿಕ ಮುಂದಾಳು ಶ್ರೀ ಸುಬ್ಬಯ್ಯ ಶೆಟ್ಟಿ ವಾಮಂಜೂರು, ಮುಂಬೈ ಉದ್ಯಮಿ ಶ್ರೀ ವಾಮಯ್ಯ ಬಿ. ಶೆಟ್ಟಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ, ಮುಂಬೈ ಘಟಕದ ಅಧ್ಯಕ್ಷೆ ಶ್ರೀಮತಿ ರೇವತಿ ವಿ. ಶೆಟ್ಟಿ, ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಸಮಿತಿಯ ಅಧ್ಯಕ್ಷ ಶ್ರೀ ಲೋಕನಾಥ ಜಿ. ಶೆಟ್ಟಿ ತಾಳಿಪ್ಪಾಡಿಗುತ್ತು, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಎ. ಅಶೋಕ ಕುಮಾರ್ ಬಿಜೈ, ಮಂಗಳೂರಿನ ಉದ್ಯಮಿ ಶ್ರೀ ಭರತ್‍ಭೂಷಣ್, ಒಡಿಯೂರು ಶ್ರೀ ವಿವಿಧೊದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕ ಶ್ರೀ ಪಿ. ಲಿಂಗಪ್ಪ ಗೌಡ, ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಪೆರುವಾಯಿ ಇದರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀ ನಾರಾಯಣ ರೈ ಅಡ್ವಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತುಳುನಾಡಿನ ಕೃಷಿ ಮತ್ತು ಮನೆ ಬಳಕೆಯಲ್ಲಿ ಬಳಸುವ ವಸ್ತುಗಳ ಪ್ರದರ್ಶನ ನಡೆಯಿತು. ಸುಮಾರು 60 ತುಳುನಾಡಿನ ತಿನಿಸುಗಳನ್ನು ಸ್ಪರ್ಧೆಯಲ್ಲಿ ಇಡಲಾಗಿತ್ತು.

ತಿಂಡಿ-ತಿನಸುಗಳ ಸ್ಪರ್ಧೆಯಲ್ಲಿ ಶ್ರೀಮತಿ ಸುಗುಣ ಗೋಪಾಲಕೃಷ್ಣ ಇವರು ಪ್ರಥಮ ಸ್ಥಾನ, ಶ್ರೀಮತಿ ವನಮಾಲಾ ಬಾಲಕೃಷ್ಣ ಮೇಲಂಟ ಹಾಗೂ ಶ್ರೀಮತಿ ವಸಂತಿ ಶೆಟ್ಟಿ ಕೋಡಿಕ್ಕಲ್ ದ್ವಿತೀಯ ಬಹುಮಾನ ಪಡೆದರು.

ಶ್ರೀಮತಿ ರೇಣುಕಾ ಎಸ್.ರೈಯವರು ಆಶಯಗೀತೆ ಹಾಡಿದರು. ಶ್ರೀ ಯಶವಂತ ವಿಟ್ಲ ಸ್ವಾಗತಿಸಿ, ಶ್ರೀ ಸುಬ್ರಹ್ಮಣ್ಯ ಒಡಿಯೂರು ವಂದಿಸಿದರು. ಶ್ರೀ ಸದಾಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top