+91 8255-266211
info@shreeodiyoor.org

2016- ಗ್ರಾಮೋತ್ಸವ ಯೋಜನೆಯ ವಾರ್ಷಿಕೋತ್ಸವ

ಪರಮಪೂಜ್ಯ ಶ್ರೀ ಗುರುಗಳ ಹಾಗೂ ಸಾಧ್ವಿ ಶ್ರೀ ಮಾತಾನಂದಮಯೀ ಯವರ ಮಾರ್ಗದರ್ಶನದಲ್ಲಿ ಪ್ರಸ್ತುತ ದ.ಕ, ಉಡುಪಿ, ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ವರೆಗೆ ಒಟ್ಟು 2394 ವಿಕಾಸವಾಹಿನಿ ಸ್ವ-ಸಹಾಯ ಸಂಘಗಳು ರಚನೆಗೊಂಡಿದ್ದು, 13870 ಮಹಿಳಾ ಸದಸ್ಯರು ಹಾಗೂ 4863 ಪುರುಷ ಸದಸ್ಯರು ಒಟ್ಟು 18733 ಸದಸ್ಯರನ್ನೊಳಗೊಂಡು 83 ಘಟಸಮಿತಿಗಳು ರಚನೆಗೊಂಡಿವೆ. ಮಂಡಲ ಸಮಿತಿಗಳು ನಿಸ್ವಾರ್ಥ ಮನೋಭಾವನೆಯಿಂದ ಕಾರ್ಯನಿರ್ವಹಿಸುತ್ತಿದೆ. 10 ಗ್ರಾಮಸಮಿತಿಗಳು ಗ್ರಾಮಾಭ್ಯುದಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ.. ಈ ವರೆಗೆ ಒಟ್ಟು ಉಳಿತಾಯ ರೂ. 5,83,59,296.50 ಆಗಿರುತ್ತದೆ. ಸದಸ್ಯರ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಒಟ್ಟು ಈ ವರೆಗೆ ರೂ. 9,94,26,551.00 ಮುಂಗಡವನ್ನು ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯಿಂದ ಪಡೆದು ಸರಿಯಾದ ರೀತಿಯಲ್ಲಿ ಮರುಪಾವತಿಯನ್ನು ನಡೆಸುತ್ತಾ ವ್ಯವಹರಿಸುತ್ತಿದ್ದಾರೆ.

ಈ ವರೆಗೆ ಒಟ್ಟು 15 ಉಚಿತ ಹೊಲಿಗೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿದ್ದು 671 ಜನರು ತರಬೇತಿಯನ್ನು ಪಡೆದುಕೊಂಡಿರುತ್ತಾರೆ. ಇದುವರೆಗೆ ಉಚಿತವಾಗಿ 66 ಹೊಲಿಗೆ ಯಂತ್ರವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ಸೇವಾಗ್ರಾಮಗಳಲ್ಲಿ ಕ್ರಮಾನುಸಾರವಾಗಿ ನಿರಂತರ ಹೊಲಿಗೆ ತರಬೇತಿ ಶಿಬಿರಗಳು ನಡೆಯುತ್ತಲಿದೆ.

ಸ್ವಚ್ಚತೆಯ ಅರಿವು ಮೂಡಬೇಕು ಎಂಬ ಉದ್ದೇಶದಿಂದ ನಿರಂತರ 15 ವರ್ಷಗಳಿಂದ ಗ್ರಾಮೋತ್ಸವ ಸಂದರ್ಭ ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆಯ ಗ್ರಾಮ ಸ್ವಚ್ಚತಾ ಕಾರ್ಯಕ್ರಮ ಹಾಗೂ ಪರಿಸರ ಸಂರಕ್ಷಣಾ ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸುವುದರ ಜೊತೆಗೆ ದೇಶಾಭಿಮಾನ ಬೆಳೆಸುವ ಕಾರ್ಯ ನಿರಂತರವಾಗಿ ಕೈಗೊಳ್ಳಲಾಗಿದೆ. ಈ ವರ್ಷ ಜಿಲ್ಲೆಯಾದ್ಯಂತ 52 ಸ್ವಚ್ಚತಾ ಕಾರ್ಯಕ್ರಮ ಆಯೋಜಿಸಿದ್ದು 2239 ಜನ ಈ ಆಂದೋಲನದಲ್ಲಿ ಭಾಗವಹಿಸಿದ್ದಾರೆ.

ಕೆ.ಎಸ್.ಹೆಗ್ಡೆ, ಎ.ಜೆ, ಕೆ.ಎಮ್.ಸಿ, ವೆನ್‍ಲಾಕ್ ಮಂಗಳೂರು ಆಸ್ಪತ್ರೆಯ ಸಹಕಾರದೊಂದಿಗೆ ಒಟ್ಟು 77 ಚಿಕಿತ್ಸಾ ಶಬಿರಗಳನ್ನು ನಡೆಸಿ 17776 ಜನರಿಗೆ ಸಹಕಾರಿಯಾಗಿದೆ. ಹಾಗೂ 4 ರಕ್ತದಾನ ಶಿಬಿರವನ್ನು ಹಮ್ಮಿಕಂಡಿದ್ದು 270 ಮಂದಿ ರಕ್ತದಾನ ಮಾಡಿರುತ್ತಾರೆ. ಆರೋಗ್ಯದ ಬಗ್ಗೆ ಕಾಳಜಿ ಮೂಡುವಂತೆ ಆರೋಗ್ಯ ಮಾಹಿತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಂಡೋಸಲ್ಫಾನ್ ಪೀಡಿತರಿಗೆ ವಿಕಲಾಂಗರಿಗೆ ಸಾಂತ್ವನ ನೀಡಲಾಗಿದೆ. ವರದಿ ವರ್ಷದಲ್ಲಿ ಸುಮಾರು 22 ಲಕ್ಷ ರೂ ಸಹಾಯಹಸ್ತ ನೀಡುವುದರೊಂದಿಗೆ ಯೋಜನೆ ಕಳೆದ 5 ವರ್ಷಗಳಲ್ಲಿ ಸುಮಾರು ರೂ.2.50 ಕೋಟಿ ಮೊತ್ತವನ್ನು ಸೇವಾಕಾರ್ಯಗಳಿಗೆ ವಿನಿಯೋಗಿಸಲಾಗಿದೆ.ಯೋಜನೆಯ ವ್ಯಾಪ್ತಿಯ ಬಂಧುಗಳಿಗೆ ಆಟೋಟ ಸ್ಪರ್ಧೆ ಹಾಗೂ ಬಹುಮಾನ ವಿತರಣೆ, ಕೃಷಿ ಬದುಕು ನಿರ್ಮಿಸುವ ನಿಟ್ಟಿನಲ್ಲಿ ಕೆಸರುಗದ್ದೆ ಕ್ರೀಡಾಕೂಟಗಳ ಆಯೋಜನೆ, ಸೇವಾ ಗ್ರಾಮಗಳಲ್ಲಿ ಅಪೇಕ್ಷಿತ ಶಾಲೆಗಳಿಗೆ ಶಿಕ್ಷಕರನ್ನು ಒದಗಿಸಲಾಗಿದೆ. ಸೇವಾ ಗ್ರಾಮಗಳಲ್ಲಿ ವನಮಹೋತ್ಸವ, ಮಾಹಿತಿ ಶಿಬಿರಗಳು, ಆರೋಗ್ಯ ತಪಾಸಣಾ ಶಿಬಿರಗಳು, ಧಾರ್ಮಿಕ ಕಾರ್ಯಕ್ರಮಗಳು, ಸ್ವ ಉದ್ಯೋಗ ತರಬೇತಿ ಶಿಬಿರಗಳು ಪ್ರಾಣಾಯಾಮ, ಧ್ಯಾನ, ಭಜನೆ ತರಬೇತಿ ಕಾರ್ಯಕ್ರಮ, ಬಾಲವಿಕಾಸ ಸಮಾವೇಶ, ಪ್ರವಾಸಗಳ ಆಯೋಜನೆ ಮಾಡಲಾಗುತ್ತಿದೆ. ಆರ್ಥಿಕತೆಯನ್ನು ಗಮನಿಸಿ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಸೇವಾ ಗ್ರಾಮಗಳಲ್ಲಿ 1667 ಶೌಚಾಲಯಕ್ಕೆ ಸಹಾಯಹಸ್ತ ನೀಡಲಾಗಿದೆ.

ಗ್ರಾಮ ಪಂಚಾಯತ್ ಹಾಗೂ ಲಯನ್ಸ್ ಕ್ಲಬ್ ಸಂಸ್ಥೆಗಳ ಸಹಕಾರದೊಂದಿಗೆ ಹಲವು ಶೌಚಾಲಯ ಒದಗಿಸಿ ಕೊಡಲಾಗಿದೆ. ನವನಿಕೇತನ ಯೋಜನೆಯಡಿ ಈ ವರೆಗೆ ತೀರ ಬಡತನದಲ್ಲಿರುವ 15 ಕುಟುಂಬಗಳಿಗೆ ಮನೆ ನಿರ್ಮಿಸಿ ಹಸ್ತಾಂತರ ಮಾಡಲಾಗಿದೆ.

ಪೂಜ್ಯ ಶ್ರೀಗಳವರ ಸಮಾಜದಿಂದ ಸಮಾಜಕ್ಕೆ ಎಂಬ ಆಶಯದಂತೆ ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸಂಸ್ಕಾರದಿಂದಜೋಡಿಸಿ ಸೇವಾ ಮನೋಭಾವನೆಯೊಂದಿಗೆ ಸಂಘಟನೆಯಲ್ಲಿ ತೊಡಗಿಸುವ ಮೂಲಕ ಸಮೃದ್ಧಿಯನ್ನು ಕಾಣುತ್ತದೆ.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top