+91 8255-266211
info@shreeodiyoor.org

“ಶ್ರದ್ಧೆಯೇ ಯಶಸ್ಸಿನ ಕೀಲಿಕೈ” ಒಡಿಯೂರು ಶ್ರೀ

ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಹಾಗೂ ಗ್ರಾಮೋತ್ಸವದ ಅಂಗವಾಗಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಆಯೋಜಿಸಿದ ಬಂಟ್ವಾಳ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಜಗತ್ತನ್ನು ಬೆಳಗುವವ ಸೂರ್ಯ, ಮನಸ್ಸಿಗೆ ಉಲ್ಲಾಸ ತರುವವನು ಚಂದ್ರ, ಮನುಷ್ಯನ ಒಳಗಿರುವ ಆತ್ಮ ಜ್ಯೋತಿಯಿಂದ ಎಲ್ಲವನ್ನು ನೋಡಲು ಸಾಧ್ಯವಾಗುತ್ತದೆ ಹೀಗೆ ಮಾನವನು ಅಂತರಂಗದಲ್ಲಿರುವ ಬೆಳಕನ್ನು ಉಳಿಸಿ ಬೆಳೆಸಿಕೊಳ್ಳಬೇಕು, ‘ಯಶಸ್ಸಿಗೊಂದು ಕೀಲಿ ಕೈ ಬೇಕು” ಅದುವೇ ಶ್ರದ್ಧೆ. ಭಾರತವೇ ಒಂದು ಜ್ಯೋತಿ, ಅದು ವಿಶ್ವಕ್ಕೆ ಬೆಳಕನ್ನು ಕೊಟ್ಟಿದೆ. ಅದು ಆಧ್ಯಾತ್ಮದ ಅವಿನಾಶಿ ಬೆಳಕನ್ನು ನೀಡಿದೆ. ಎಂದು ಆರ್ಶೀವಚನವಿತ್ತರು.

ಸಭೆಯಲ್ಲಿ ಶಾಲಾ ಸಂಚಾಲಕರಾದ ಸೇರಾಜೆ ಗಣಪತಿ ಭಟ್, ಕ್ಷೇತ್ರದ ಕಾರ್ಯನಿರ್ವಾಹಕರಾದ ಶ್ರೀ ಪದ್ಮನಾಭ ಒಡಿಯೂರು, ಶಾಲಾ ಮುಖ್ಯೋಪಾಧ್ಯಾಯರಾದ ಜಯಪ್ರಕಾಶ ಶೆಟ್ಟಿ ಎ ಉಪಸ್ಥಿತರಿದ್ದರು.

‘ನಾನು ಮತ್ತು ಭಾರತ’ ಎಂಬ ವಿಷಯವನ್ನು ಪ್ರಬಂಧ ವಿಷಯವಾಗಿ ಆಯ್ಕೆಮಾಡಲಾಯಿತು. ಬಂಟ್ವಾಳ ತಾಲೂಕಿನಿಂದ ಆಗಮಿಸಿದ ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮವನ್ನು ವಿದ್ಯಾಪೀಠದ ವಿದ್ಯಾರ್ಥಿನಿ ಕು. ದೀಪಶ್ರೀ ನಿರೂಪಿಸಿ, ಕು. ಅಚಿಂತ್ಯಾಗೌರಿ ಸ್ವಾಗತಿಸಿ, ಮಾಸ್ಟರ್ ರಜತ್ ಧನ್ಯವಾದವಿತ್ತರು. ಶಿಕ್ಷಕ-ಶಿಕ್ಷಕಿಯರು ಸಹಕರಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top