+91 8255-266211
info@shreeodiyoor.org

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಶಾಲಾ ಮಂತ್ರಿಮಂಡಲ ರಚನೆ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ 2019-2020 ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲ ಆಯ್ಕೆ ಪ್ರಕ್ರಿಯೆಯು ಜರಗಿತು. ಮುಖ್ಯಮಂತ್ರಿಯಾಗಿ 10ನೇ ತರಗತಿ ವಿದ್ಯಾರ್ಥಿ ಸಂದೇಶ್ ಶೆಟ್ಟಿ ಮತ್ತು ಉಪಮುಖ್ಯಮಂತ್ರಿಯಾಗಿ ಅನನ್ಯಲಕ್ಷ್ಮೀ ಆಯ್ಕೆಯಾದರು. ಸಭಾಪತಿಯಾಗಿ 10ನೇ ತರಗತಿ ವಿದ್ಯಾರ್ಥಿ ಅನೀಶ್, ವಿರೋಧ ಪಕ್ಷದ ನಾಯಕರುಗಳಾಗಿ 10ನೇ ತರಗತಿಯ ಶ್ರವಣ್, 9ನೇ ತರಗತಿಯ ಸನ್ನಿಧಿ ಶೆಟ್ಟಿ ಆಯ್ಕೆಗೊಂಡರು.

ಶಿಕ್ಷಣ ಮಂತ್ರಿಯಾಗಿ 10ನೇ ತರಗಯ  ಜಿತೇಶ್ ಶೆಟ್ಟಿ, ಉಪಶಿಕ್ಷಣ ಮಂತ್ರಿಯಾಗಿ 10ನೇ ತರಗತಿ ವಿದ್ಯಾರ್ಥಿ ಅಕ್ಷಿತಾ, ಸಾಂಸ್ಕೃತಿಕ ಮಂತ್ರಿಯಾಗಿ 9ನೇ  ತರಗತಿ ವಿದ್ಯಾರ್ಥಿ ಅಚಿಂತ್ಯಾಗೌರಿ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಅಶ್ವಿತ್‍ಶೆಟ್ಟಿ 9ನೇ ತರಗತಿ ವಿದ್ಯಾರ್ಥಿ, ಕ್ರೀಡಾಮಂತ್ರಿಯಾಗಿ 10ನೇ ತರಗತಿ ವಿದ್ಯಾರ್ಥಿ ಭರತ್, ಉಪಕ್ರೀಡಾ ಮಂತ್ರಿಯಾಗಿ 10ನೇ ತರಗತಿವಿದ್ಯಾರ್ಥಿ ಅಸ್ಕರ್, ಆರೋಗ್ಯ ಮಂತ್ರಿಯಾಗಿ 9ನೇ ತರಗತಿ ವಿದ್ಯಾರ್ಥಿ ರಜತ್, ಉಪಆರೋಗ್ಯ ಮಂತ್ರಿಯಾಗಿ 9ನೇ ತರಗತಿ ವಿದ್ಯಾರ್ಥಿ ಸ್ಮಿತಾ, ಆಹಾರ ಮಂತ್ರಿಯಾಗಿ 10ನೇ ತರಗತಿ ವಿದ್ಯಾರ್ಥಿ ಯಶಿಶ್, ಉಪಆಹಾರ ಮಂತ್ರಿಯಾಗಿ 9ನೇ ತರಗತಿ ವಿದ್ಯಾರ್ಥಿ ಮುರಳಿ ಪ್ರಸಾದ್ ಆಳ್ವಾ, ಸ್ವಚ್ಛತಾ ಮಂತ್ರಿಯಾಗಿ 10ನೇ ತರಗತಿ ವಿದ್ಯಾರ್ಥಿ ಸಾಧನ್ ಶೆಟ್ಟಿ, ಉಪಸ್ವಚ್ಛತಾ ಮಂತ್ರಿಯಾಗಿ 10ನೇ ತರಗತಿ ವಿದ್ಯಾರ್ಥಿ ಮೀನಾಕ್ಷಿ, ನೀರಾವರಿ ಮಂತ್ರಿ 10ನೇ ತರಗತಿ ವಿದ್ಯಾರ್ಥಿ ಸಿದ್ಧಾರ್ಥ್, ಉಪ ನೀರಾವರಿ ಮಂತ್ರಿಯಾಗಿ 9ನೇ  ತರಗತಿ ವಿದ್ಯಾರ್ಥಿ ಜೀವನ್, ಗೃಹಮಂತ್ರಿಯಾಗಿ 10ನೇ ತರಗತಿ ವಿದ್ಯಾರ್ಥಿ ತಿಶುಕುಮಾರ್, ಉಪ ಗೃಹಮಂತ್ರಿಯಾಗಿ ರಚನ್ 9ನೇ ತರಗತಿ , ಕೃಷಿಮಂತ್ರಿಯಾಗಿ 9ನೇ ತರಗತಿ ವಿದ್ಯಾರ್ಥಿ ಧನುಷ್ ಕುಮಾರ್, ಉಪ ಕೃಷಿಮಂತ್ರಿಯಾಗಿ 9ನೇ ತರಗತಿ ವಿದ್ಯಾರ್ಥಿ ಶರಣ್, ರಕ್ಷಣಾಮಂತ್ರಿಯಾಗಿ 9ನೇ ತರಗತಿ ವಿದ್ಯಾರ್ಥಿ ಪ್ರಥಮ್ ಆಯ್ಕೆಯಾದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top