+91 8255-266211
info@shreeodiyoor.org

‘ಆಧ್ಯಾತ್ಮದ ಉದ್ದೇಶ ಸಮಾಜದ ಉನ್ನತಿ’ – ಒಡಿಯೂರು ಶ್ರೀ

 

ಪುತ್ತೂರು, ಮಾ.19: “ವಿಜ್ಞಾನದ ಹುಡುಕಾಟದಲ್ಲಿ ಸಿಗುವ ಫಲಿತಾಂಶಗಳೇ ಆಧ್ಯಾತ್ಮ. ವಿಜ್ಞಾನದಲ್ಲಿ ಆವಿಷ್ಕಾರವಿದ್ದರೆ ಆಧ್ಯಾತ್ಮದಲ್ಲಿ ಆವಿಷ್ಕಾರವೆಂದಿಲ್ಲ. ಆಧ್ಯಾತ್ಮ ಅದುವೇ ಕೊನೆ. ವಿಜ್ಞಾನ ಮತ್ತು ಆಧ್ಯಾತ್ಮ ಎಂಬ ಸಂಗತಿಗಳ ದೃಷ್ಟಿಕೋನಗಳೆರಡು ಒಂದೇ ಆಗಿದ್ದು ಇವೆರಡರ ಒಟ್ಟು ಉದ್ದೇಶ ಸಮಾಜದ ಉನ್ನತಿ. ದೇಹನಿಷ್ಠ ಸಂಸ್ಕøತಿಯು ನಮ್ಮ ಪಂಚೇಂದ್ರಿಯಗಳನ್ನು ತೃಪ್ತಿ ಪಡಿಸಲು ಪ್ರಯತ್ನಿಸುತ್ತದೆ. ಆದರೆ ಪಂಚೇಂದ್ರಿಯಗಳಿಗೆ ಸಂಪೂರ್ಣ ತೃಪ್ತಿ ಎಂಬುದು ಯಾವಾಗಲೂ ಪ್ರಾಪ್ತಿಯಾಗುವುದಿಲ್ಲ. ಇದಕ್ಕಿಂತ ಮೀರಿದ್ದು ಆತ್ಮನಿಷ್ಠ ಸಂಸ್ಕøತಿ. ಆತ್ಮೋನ್ನತಿ ಮತ್ತು ಆತ್ಮ ಸಂತೋಷಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಅದು ಶಾಶ್ವತ ಸುಖ ನೀಡಬಲ್ಲುದು. ಧರ್ಮ ಮಾರ್ಗದಲ್ಲಿ ನಡೆಯಲು ಅವಕಾಶ ಇದ್ದರೆ ಅದು ಭಾರತದಲ್ಲಿ ಮಾತ್ರ. ಇದು ಅರ್ಥಪೂರ್ಣ ಬದುಕಿಗೆ ಬೆಳಕು ಚೆಲ್ಲುವ ನಾಡು” ಎಂದು ತೆಂಕಿಲ ಯಾದವಶ್ರೀ ಸಭಾಂಗಣದಲಿ,್ಲ ಪೂಜ್ಯ ಶ್ರೀಗಳವರ ಜನ್ಮಷಷ್ಠ್ಯಬ್ದ ಸಂಭ್ರಮ ಸಮಿತಿ ಮತ್ತು ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ಸಹಯೋಗದಲ್ಲಿ ಮಾ.19 ರಂದು ಜರಗಿದ ಹನುಮಾನ್ ಚಾಲೀಸ್ ಪಠಣ ಅಭಿಯಾನ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಆಶೀರ್ವಚನ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಹನುಮಾನ್ ಚಾಲೀಸಾ ಪಠಣ ಮಾಡಿಸಿದರು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಶಿವಪ್ರಕಾಶ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಶ್ರೀ ಸುರೇಂದ್ರ ಕಿಣಿ, ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ ಸಮಿತಿ ಪುತ್ತೂರು ಕಾರ್ಯದರ್ಶಿ ಶ್ರೀಮತಿ ಹರಿಣಾಕ್ಷಿ ಜೆ ಶೆಟ್ಟಿ, ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಗೀತಾ ಡಿ ರೈ, ಪ್ರಮುಖರಾದ ಶ್ರೀಮತಿ ಸುನೀತಾ ರವೀಂದ್ರ ಉಪಸ್ಥಿತರಿದ್ದರು. ಶಾಲೆಯ ಆಡಳಿತ ಮಂಡಳಿ ಸಂಚಾಲಕ ಶ್ರೀ ಮುರಳೀಧರ್ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಶ್ರೀ ಸತೀಶ್ ರೈ ವಂದಿಸಿದರು. ಪ್ರಜ್ಞಾ ಪಂಚಾಂಗ ವಾಚನ ಮಾಡಿದರು. ಕು. ಮನಸ್ವಿ ಸುಭಾಷಿತ ವಾಚಿಸಿದರು.
ಇದೇ ಸಂದರ್ಭದಲ್ಲಿ ಆಂಜನೇಯ ಚಿತ್ರವನ್ನು ಒಡಿಯೂರು ಶ್ರೀಗಳು ಅನಾವರಣ ಮಾಡಿದರು ಮತ್ತು ಎ.2 ರಂದು ನಡೆಯಲಿರುವ ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನದ ಲಾಂಛನವನ್ನು ಬಿಡುಗಡೆ ಮಾಡಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top