+91 8255-266211
info@shreeodiyoor.org

ಕೆಸರುಗದ್ದೆ ಆಟೋಟಗಳ ಉದ್ಘಾಟನೆ

“ಯುವಕರು ದಾರಿ ತಪ್ಪಬಾರದು. ಸಮಾಜ ಕಟ್ಟುವಂತಾಗಬೇಕು. ಯುವಕರಲ್ಲಿ ಕೃಷಿ ಒಲವು ಹೆಚ್ಚಾಗಬೇಕು ಎಂಬ ಉದ್ದೇಶದಿಂದ ಇಂತಹ ವಿಶೇಷ ಕಾರ್ಯಕ್ರಮಗಳು ರೂಪುಗೊಳ್ಳುತ್ತವೆ. ಬಂಜರು ಭೂಮಿಯಲ್ಲಿ ಕೃಷಿ ಮಾಡುವ ಉದ್ದೇಶವಿದೆ. ಸಂಸ್ಕøತಿ ಉಳಿಸಲು ಅದು ಅವಶ್ಯಕ. ಇಂದು ಆಟೋಟಗಳು ನಡೆದ ಗದ್ದೆಯಲ್ಲಿ ಆಟ ಆಡಿದ ಶಾಲಾ ಮಕ್ಕಳು ನೇಜಿ ನಾಟಿ ಮಾಡುತ್ತಾರೆ. ಬೆಳೆಯುವ ಹಂತವನ್ನು ಗಮನಿಸುತ್ತಾರೆ. ಆ ಬಳಿಕ ಅವರೇ ಕೊಯ್ಲು ಮಾಡುತ್ತಾರೆ. ಅದನ್ನೇ ಉಣ್ಣುತ್ತಾರೆ. ಆಗ ಅದರ ಮೌಲ್ಯ ಅರಿವಾಗುತ್ತದೆ. ಕೃಷಿ ಸಂಸ್ಕøತಿಯ ಬಗ್ಗೆ ಪ್ರೀತಿ ಹುಟ್ಟಲು ಪೂರಕವಾಗುತ್ತದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಶ್ರೀ ಒಡಿಯೂರು ಗ್ರಾಮೋತ್ಸವ 2019 ಅಂಗವಾಗಿ ಶ್ರೀ ಸಂಸ್ಥಾನದ ಬನಾರಿಯ ಕೃಷಿಭೂಮಿಯಲ್ಲಿ ಹಮ್ಮಿಕೊಂಡ ಕೆಸರುಗದ್ದೆಯ ಆಟೋಟಗಳನ್ನು ಉದ್ಘಾಟಿಸಿ ಆಶೀರ್ವಚನಗೈದರು.

ವೇದಿಕೆಯಲ್ಲಿ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ದಿವ್ಯ ಸಾನ್ನಿಧ್ಯ ಕರುಣಿಸಿದ್ದರು. ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ “ಹಿಂದಿನ ಪರಂಪರೆ, ಭಾರತೀಯ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಅನಿವಾರ್ಯತೆ ಇದೆ. ಮಕ್ಕಳು ಗದ್ದೆಗೆ ಇಳಿದು ಮಣ್ಣಿನಲ್ಲಿ ಆಡಿ ಕೃಷಿ ಅನುಭವ ಪಡೆಯುವ ಕಾರ್ಯ ಉತ್ತಮ. ಗದ್ದೆಯಲ್ಲಿ ಬೆಳೆ ಬೆಳೆಯುವ ಸಂತೋಷ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ”

ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಸಮಿತಿಯ ಅಧ್ಯಕ್ಷ ಶ್ರೀ ಲೋಕನಾಥ ಜಿ. ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಅಶೋಕ್ ಕುಮಾರ್ ಬಿಜೈ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಲ| ಎಂ.ಜೆ.ಎಫ್.| ಎ. ಸುರೇಶ್ ರೈ, ನಿರ್ದೇಶಕರಾದ ಶ್ರೀ ಪಿ. ಲಿಂಗಪ್ಪ ಗೌಡ ಪನೆಯಡ್ಕ, ಶ್ರೀ ವೇಣುಗೋಪಾಲ ಮಾರ್ಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಉಗ್ಗಪ್ಪ ಶೆಟ್ಟಿ ಕೊಂಬಿಲ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಶ್ರೀ ಕಿರಣ್ ಉರ್ವ, ಕರೋಪಾಡಿ ಗ್ರಾಮ ಸಮಿತಿ ಅಧ್ಯಕ್ಷ ಶ್ರೀ ರಘುನಾಥ ಶೆಟ್ಟಿ ಪಟ್ಲಗುತ್ತು, ಕನ್ಯಾನ ಗ್ರಾಮ ಸಮಿತಿಯ ಅಧ್ಯಕ್ಷ ಶ್ರೀ ಕೆ.ಪಿ. ರಘುರಾಮ ಶೆಟ್ಟಿ, ಶ್ರೀ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು, ಶ್ರೀ ಶ್ರೀಧರ ಶೆಟ್ಟಿ ಗುಬ್ಯ ಮೇಗಿನಗುತ್ತು, ಶ್ರೀ ಶಶಿಧರ ಶೆಟ್ಟಿ ಜಮ್ಮದಮನೆ, ಶ್ರೀ ಯಶವಂತ ವಿಟ್ಲ, ಒಡಿಯೂರು ಶ್ರೀ ಸಂಸ್ಥಾನದ ಕಾರ್ಯನಿರ್ವಾಹಕ ಶ್ರೀ ಪದ್ಮನಾಭ ಒಡಿಯೂರು, ಮಂಗಳೂರು ಪೋರಾರ್ ಇಂಟರ್‍ನ್ಯಾಷನಲ್ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಚಂದ್ರಹಾಸ ಶೆಟ್ಟಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ, ಕ್ರೀಡಾ ಸಮಿತಿಯ ಸಂಚಾಲಕ ಶ್ರೀ ಸದಾಶಿವ ಶೆಟ್ಟಿ, ಸಹಸಂಚಾಲಕ ಶ್ರೀ ಸುದರ್ಶನ ಆಳ್ವ ಅನೆಯಾಲಗುತ್ತು ಉಪಸ್ಥಿತರಿದ್ದರು.

ಶ್ರೀ ಯಶವಂತ್ ವಿಟ್ಲ ಸ್ವಾಗತಿಸಿ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಬಂಟ್ವಾಳ ತಾಲೂಕು ವಿಸ್ತರಣಾಧಿಕಾರಿ ಶ್ರೀ ಸದಾಶಿವ ಅಳಿಕೆ ವಂದಿಸಿದರು. ಶ್ರೀ ಮನ್ಮಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಹರಿಣಾಕ್ಷಿ ಎಸ್. ಶೆಟ್ಟಿ, ಶ್ರೀಮತಿ ಲೀಲಾ, ಶ್ರೀಮತಿ ರೇಷ್ಮಾ ಪ್ರಾರ್ಥನಾಗೀತೆ ಹಾಡಿದರು.

ಮಡಿಕೆ ಒಡೆಯುವ ಸ್ಪರ್ಧೆ, ಕೆಸರುಗದ್ದೆ ಓಟ, ಒಂಟಿಕಾಲಿನ ಓಟ, ಕೆಸರುಗದ್ದೆ ಓಟ, ಹಾಳೆಯಲ್ಲಿ ಎಳೆಯುವುದು, ಮಡಿಕೆ ಒಡೆಯುವ ಸ್ಪರ್ಧೆ, ತಪ್ಪಂಗಾಯಿ, ಗೋಪುರ ರಚನೆ, ಮೂರು ಕಾಲಿನ ಓಟ, ಗೋಪುರ ರಚನೆ, ಮಡಿಕೆ ಒಡೆಯುವ ಸ್ಪರ್ಧೆ, ಹಗ್ಗಜಗ್ಗಾಟ, ಮೂರು ಕಾಲಿನ ಓಟ ಸ್ಪರ್ಧೆಗಳು ಜರಗಿದವು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top