+91 8255-266211
info@shreeodiyoor.org

ಏಕರಾಷ್ಟ್ರ ಶ್ರೇಷ್ಠ ಭಾರತ

“ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ, ರಾಷ್ಟ್ರದ ಭವ್ಯ ಬುನಾದಿ ಕೃಷಿ. 73ನೇ ಸ್ವಾತಂತ್ರ್ಯೋತ್ಸವ ಖುಷಿ-ದುಃಖದ ಸಮ್ಮಿಳಿತವಾಗಿದೆ. ಒಂದು ಕಡೆ ಅತಿವೃಷ್ಠಿಯಾದರೆ, ಇನ್ನೊಂದೆಡೆ 372ನೇ ವಿಧಿ ರದ್ದಾಗಿ ಏಕರಾಷ್ಟ್ರ ಶ್ರೇಷ್ಠ ಭಾರತವಾಗಿ ಹೊರಹೊಮ್ಮಿರುವುದು ಹೊಸ ಸ್ವಾತಂತ್ರ್ಯದ ಸಂತಸ ನಮ್ಮದಾಗಿದೆ” ಎಂದು ಒಡಿಯೂರು ಶ್ರೀ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷರಾದ ಲ | ಎ. ಸುರೇಶ್ ರೈ ಹೇಳಿದರು. ಇವರು ಅಗೋಸ್ತು 15 ರಂದು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ನಡೆದ 73ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಧ್ವಜಾರೋಹಣಗೈದು ಶುಭಾಶಯನ್ನಿತ್ತರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಪ್ರತಿಭಾ ಪ್ರದರ್ಶನ ನಡೆಯಿತು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಸೇರಾಜೆ ಗಣಪತಿ ಭಟ್, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ರೇಣುಕಾ ಎಸ್ ರೈ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಜಯಪ್ರಕಾಶ್ ಶೆಟ್ಟಿ ಎ, ಶಾಲಾ ಮಾತೃಮಂಡಳಿ ಸಂಚಾಲಕಿ ಹರಿಣಾಕ್ಷಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಮೈತ್ರಿ ನಿರೂಪಿಸಿ, ಹರ್ಷಿತ್ ಸ್ವಾಗತಿಸಿ, ಶ್ರಾವ್ಯ ಧನ್ಯವಾದ ಸಮರ್ಪಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top