+91 8255-266211
info@shreeodiyoor.org

ತುಳುನಾಡ್ದ ನುಡಿ-ನಡಕೆ ಕಾರ್ಯಕ್ರಮ

ತುಳು ಕರಿಪು-ಪರಿಪು-ಒರಿಪು ಉದ್ಘಾಟಿಸಿ ಒಡಿಯೂರು ಶ್ರೀ ತುಳು ಭಾಷೆ ಸೀಮಾತೀತವಾಗಿದೆ. ತುಳುವರು ಶೂರರು ಆಗಿದ್ದರೂ ದಾಕ್ಷಿಣ್ಯ ಸ್ವಭಾವದವರು. ಪ್ರೀತಿ, ವಿಶ್ವಾಸಕ್ಕೆ ಇನ್ನೊಂದು ಹೆಸರು ತುಳುನಾಡು. ಇಲ್ಲಿಯ ಮಣ್ಣಿಗೆ ಬಹಳಷ್ಟು ಶಕ್ತಿ ಇದೆ. ಮೃದುವಾಗಿಯೂ. ಇದೆ. ಮೃದುತ್ವ ಇದ್ದಲ್ಲಿ ಸಂಪತ್ತು ಇರುತ್ತದೆ. ತುಳುವಿಗೆ ಶಾಸ್ತ್ರೀಯ ಸ್ಥಾನಮಾನ ಸಿಗಲು ತುಳುವರಲ್ಲಿ ಹೋರಾಟ ಮನೋಭಾವ ಪ್ರಬಲವಾಗಬೇಕು. ಧರ್ಮ ಹಾಗೂ ತುಳು ಸಂಸ್ಕೃತಿಯ ಜಾಗೃತಿಗಾಗಿ ತುಳುನಾಡ್ದ ಜಾತ್ರೆಯನ್ನು ಏರ್ಪಡಿಸಲಾಗಿದೆ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಶ್ರೀ ಸಂಸ್ಥಾನದಲ್ಲಿ ಜರಗಿದ ತುಳುನಾಡ್ದ ನುಡಿ-ನಡಕೆ ಕಾರ್ಯಕ್ರಮವನ್ನು ದೀಪೋಜ್ವಲನಗೊಳಿಸಿ ಉದ್ಘಾಟಿಸಿ ಸಂದೇಶ ನೀಡಿದರು.

ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಈ ಸುಸಂದರ್ಭ ಉಪಸ್ಥಿತರಿದ್ದು ತುಳುನಾಡಿನ ಮೂಲಸಂಸ್ಕೃತಿಯನ್ನು ಉಳಿಸಿ ಬೆಳೆಸಿದಾಗ ಮಾತ್ರ ಪ್ರಗತಿ ಸಾಧ್ಯ. ತುಳುನಾಡ ಜಾತ್ರೆಯ ಮುಖೇನ ಸಂಸ್ಕಾರ-ಸಂಸ್ಕೃತಿಯ ಉಳಿವಿಗೆ ಶ್ರೀ ಸಂಸ್ಥಾನದಿಂದ ಪ್ರಯತ್ನ ನಿರಂತರ ನಡೆಯುತ್ತಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಆಶೀರ್ವಚನಗೈದರು.

ಸಮ್ಮೇಳನಾಧ್ಯಕ್ಷ ಡಾ| ಕನರಾಡಿ ವಾದಿರಾಜ ಭಟ್ ಅವರು ಮಾತನಾಡಿ ಇಂದು ಕರಾವಳಿಯಲ್ಲಿ ಶೇ. ೭೫ರಷ್ಟು ಭೂಮಿ ಪಾಳು ಬಿದ್ದಿದೆ. ಇದು ಅಧಃಪತನದ ಸೂಚನೆ. ಬದುಕಿನಲ್ಲಿ ಕೃತಕತೆ ಹೆಚ್ಚಾಗಿ ತಂತ್ರಜ್ಞಾನಗಳು ನಮ್ಮನ್ನು ಅತಂತ್ರಗೊಳಿಸುತ್ತಿವೆ. ಮಕ್ಕಳಿಗೆ ಕೃಷಿಯ ಬಗ್ಗೆ ಪ್ರೇರಣೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಎಚ್ಚರಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಶ್ರೀ ಎ.ಸಿ. ಭಂಡಾರಿಯವರು ಮಾತನಾಡಿ ತುಳುವರ ಅಸಡ್ಡೆಯಿಂದ ತುಳುವಿಗೆ ಸಿಗಬೇಕಾದ ಸ್ಥಾನಮಾನ ಸಿಗಲಿಲ್ಲ. ತಾಯಿ ಭಾಷೆಯನ್ನು ಕಲಿಯುವ, ಕಲಿಸುವ ಕಾರ್ಯ ಶಾಲೆಗಳಲ್ಲಿ ನಡೆಯುತ್ತಿದೆ. ಅದು ಇನ್ನಷ್ಟು ನಡೆಯಬೇಕಾಗಿದೆ. ಮುಂದಿನ ದಿನಗಳಲ್ಲಿ ಹೊರನಾಡಿನಲ್ಲೂ ತುಳು ಸಮ್ಮೇಳನಗಳನ್ನು ನಡೆಸಿ ಇನ್ನಷ್ಟು ಜಾಗೃತಗೊಳಿಸುವ ಕಾರ್ಯ ನಡೆಸಲಾಗುವುದು ಎಂದರು.

ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಶ್ರೀ ಧರ್ಮಪಾಲ ಯು. ದೇವಾಡಿಗ ಅವರು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಸಮ್ಮೇಳಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಧರ್ಮಚಾವಡಿಗೆ ಪೂಜ್ಯ ಶ್ರೀಗಳವರನ್ನು, ಸಾಧ್ವಿಯವರನ್ನು ಹಾಗೂ ಸಮ್ಮೇಳಾಧ್ಯಕ್ಷ ಡಾ| ಕನರಾಡಿ ವಾದಿರಾಜ ಭಟ್ಟರನ್ನು, ಗಣ್ಯರನ್ನು ಪೂರ್ಣಕುಂಭ, ಕೊಂಬು-ವಾದ್ಯಗಳೊಂದಿಗೆ ಮೆರವಣಿಗೆಯ ಮೂಲಕ ಶ್ರೀ ಸಂಸ್ಥಾನದಿಂದ ಕರೆತರಲಾಯಿತು.

ಒಡಿಯೂರ‍್ದ ತುಳುಕೂಟದ ಅಧ್ಯಕ್ಷ ಶ್ರೀ ಎಚ್.ಕೆ. ಪುರುಷೋತ್ತಮ ಸ್ವಾಗತಿಸಿದರು. ತುಳುನಾಡ್ದ ನುಡಿ-ನಡಕೆ ಲೇಸ್ ಸಂಚಾಲಕ ಡಾ| ವಸಂತಕುಮಾರ ಪೆರ್ಲ ಪ್ರಸ್ತಾವನೆಗೈದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಂಪನ್ಮೂಲ ವ್ಯಕ್ತಿ ಶ್ರೀ ವಿಶ್ವನಾಥ ಶೆಟ್ಟಿ ವಂದಿಸಿದರು. ರಾಜೇಶ್ವರೀ ಮತ್ತು ಬಳಗದವರು ಆಶಯಗೀತೆ ಹಾಡಿದರು. ಶ್ರೀ ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top