+91 8255-266211
info@shreeodiyoor.org

ಸಂಸ್ಕಾರದಿಂದ ಆದರ್ಶ ಪ್ರಜೆಗಳಾಗಲು ಸಾಧ್ಯ –ಒಡಿಯೂರು ಶ್ರೀ

“ದತ್ತ ಸಂಪ್ರದಾಯದಲ್ಲಿ ಶ್ರೀ ಗುರುಪಾದುಕಾರಾಧನೆಗೆ ವಿಶೇಷವಾದ ಮಹತ್ವವಿದೆ. ಅಜ್ಞಾನ ಎಂಬ ಕತ್ತಲೆಯಿಂದ ಬೆಳಕಿನ ಕಡೆಗೆ ಕೊಂಡೊಯ್ಯುವವನೇ ಗುರು. ಗುರುವಿನ ಅನುಗ್ರಹದಿಂದ ಬದುಕು ಹಸನಾಗಲು ಸಾಧ್ಯ. ಬದುಕನ್ನು ಆರೋಗ್ಯವಾಗಿಡುವುದು ಹೇಗೆ ಸಾಧ್ಯ ಎಂಬುದನ್ನು ಆಯುರ್ವೇದವು ತಿಳಿಸಿದೆ. ಪರೋಪಕಾರದ ಬದುಕು ಶ್ರೇಷ್ಠವಾಗಿದ್ದು, ಸುಖ-ದುಃಖಗಳಿಂದ ಕೂಡಿರುವುದು ನಿಜವಾದ ಬದುಕು. ಸುಖ-ದುಃಖಗಳನ್ನು ಸೋಪಾನವಾಗಿಸಿದಾಗ ಗುರಿ ತಲುಪಲು ಸಾಧ್ಯ. ಭಾರತೀಯ ಪರಂಪರೆ, ಸಂಸ್ಕೃತಿಯ ಜಾಗೃತಿಗೆ ಪರಿಸ್ಥಿತಿ ಸಕಾಲವಾಗಿದೆ. ಭಾಷೆ, ಸಂಸ್ಕೃತಿಗೆ ಹೆಚ್ಚಿನ ಮಹತ್ವ ನೀಡಬೇಕು. ಧನಾತ್ಮಕ ಅಂಶಗಳನ್ನು ಮೈಗೂಡಿಸಿ, ಋಣಾತ್ಮಕ ಅಂಶಗಳನ್ನು ದೂರಾಗಿಸಬೇಕು. ಭಗವಂತನು ನೀಡಿದ ವಿವೇಕವನ್ನು ಜಾಗೃತಗೊಳಿಸಬೇಕು. ಆಹಾರ ಪದ್ಧತಿ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಸಮಿತಿಯು ಆಯೋಜಿಸಿದ್ದ ಜನ್ಮದೀನೋತ್ಸವ-ಗ್ರಾಮೋತ್ಸವ-2020 ಶ್ರೀ ಗುರುಪಾದುಕಾರಾಧನೆ ಗುರುವಂದನೆಯ ಸರಳ ಕಾರ್ಯಕ್ರಮದಲ್ಲಿ ಜನ್ಮದಿನದ ಸಂದೇಶ ನೀಡಿದರು.

ಸಾಧ್ವಿ ಶ್ರೀ ಮಾತಾನಂದಮಯೀಯವರು ಶ್ರೀ ಗುರುಪಾದುಕಾರಾಧನೆ ನೆರವೇರಿಸಿದರು. ಒಡಿಯೂರು ಶ್ರೀ ಚ್ಯಾರಿಟೇಬಲ್ ಟ್ರಸ್ಟ್ (ರಿ.), ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಒಡಿಯುರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರಗಳ ಪದಾಧಿಕಾರಿಗಳು ಹಾಗೂ ಗುರುಬಂಧುಗಳು ಭಾಗವಹಿಸಿದ್ದರು. ಶ್ರೀ ಸಂತೋಷ್ ಭಂಡಾರಿ ಸ್ವಾಗತಿಸಿ ಕಾರ್ಯಕ್ರಮ ನೀರೂಪಿಸಿದರು.

 

ಸೇವಾಕಾರ್ಯಗಳು:
ಒಡಿಯೂರು ಶ್ರೀ ಚ್ಯಾರಿಟೇಬಲ್ ಟ್ರಸ್ಟ್ (ರಿ.) ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ವತಿಯಿಂದ ದ.ಕ. ಜಿಲ್ಲೆಯಲ್ಲಿ ಉಚಿತ ಹೊಲಿಗೆ ತರಬೇತಿ, 2 ಭಾಗಗಳಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಸಲಾಗಿದೆ. ಕೋವಿಡ್-19ರ ಸಂದರ್ಭದಲ್ಲಿ 2000ಕ್ಕೂ ಮಿಕ್ಕಿ ಮನೆಗಳಿಗೆ ದಿನಬಳಕೆ ಸಾಮಾಗ್ರಿಗಳನ್ನು ವಿತರಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 5 ಭಾಗಗಳಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ, ಕಾರ್ಕಳ-ಬೆಳ್ವಾಯಿ ಗ್ರಾಮದ ಘಟಸಮಿತಿ ವತಿಯಿಂದ 2 ಶಾಲೆಯ 600 ಮಕ್ಕಳಿಗೆ ಉಚಿತ ಸಮವಸ್ತ್ರ ನೀಡಲಾಗಿದೆ.

ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಅನಾರೋಗ್ಯ ಚಿಕಿತ್ಸೆಗಾಗಿ, ಆಕಸ್ಮಿಕ ಘಟನೆ, ಪ್ರಕೃತಿ ವಿಕೋಪ ಸಂಘ-ಸಂಸ್ಥೆಗಳಿಗೆ, ಧಾರ್ಮಿಕ ಶ್ರದ್ಧಾಕೇಂದ್ರಗಳಿಗೆ, ಶೈಕ್ಷಣಿಕ ಚಟುವಟಿಕೆಗಳಿಗೆ, ಸ್ವ-ಉದ್ಯೋಗ, ಶಾಲಾಭಿವೃದ್ಧಿಗೆ ಈ ಮೊದಲಾದ ಸಹಾಯ ಅಪೇಕ್ಷೆಗಳಿಗೆ ಸ್ಪಂದಿಸಲಾಗಿದೆ.

ಒಡಿಯೂರು ಶ್ರೀ ಚ್ಯಾರಿಟೇಬಲ್ ಟ್ರಸ್ಟ್ (ರಿ.) ಮತ್ತು ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಇವರ ಮೂಲಕ ಗ್ರಾಮವಿಕಾಸ ಯೋಜನೆಯ 171 ಸಿಬ್ಬಂದಿಗಳಿಗೆ ಕ್ಷೇತ್ರದಿಂದ ಕೋವಿಡ್-19ರ ಸಂದರ್ಭ ಕೋವಿಡ್ ಸಹಾಯಧನ ರೂ.8,55,000/- ನೀಡಲಾಗಿದೆ.

 

ಮಾಹಿತಿ ಕಾರ್ಯಕ್ರಮಗಳು: ಕೃಷಿ, ಕಾನೂನು, ಮಹಿಳಾ ಸಬಲಿಕರಣ, ನೈತಿಕ ಶಿಕ್ಷಣ, ಆರೋಗ್ಯದ ಅರಿವು, ವನಮಹೋತ್ಸವ, ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಗ್ರಾಮಗಳಲ್ಲಿ ಮಾಹಿತಿ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ. ವಿಕಾಸವಾಹಿನಿ ಸದಸ್ಯರ ಪ್ರಗತಿಗಾಗಿ ಅಧ್ಯಯನ ಪ್ರವಾಸ, ಧಾರ್ಮಿಕ ಪ್ರವಾಸಗಳನ್ನು ಹಮ್ಮಿಕೊಳ್ಳಲಾಗಿದೆ.

5143 ಒಡಿಯೂರು ಶ್ರೀ ವಿಕಾಸವಾಹಿನಿ ಸ್ವ-ಸಹಾಯ ಸಂಘಗಳು ಕಾರ್ಯಾಚರಿಸುತ್ತಿದ್ದು, 163 ಘಟಸಮಿತಿಗಳಿವೆ. 10 ಬಾಲವಿಕಾಸ ಕೇಂದ್ರಗಳು ನಿರಂತರವಾಗಿ ನಡೆಯುತ್ತಿದೆ. ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಘಟಕಗಳು ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಸುಮಾರು 30ಕ್ಕಿಂತಲೂ ಮಿಕ್ಕಿ ಘಟಕಗಳು ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದೆ.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top