+91 8255-266211
info@shreeodiyoor.org

ಹನುಮೋತ್ಸವ

ಆಮಂತ್ರಣ ಪತ್ರಿಕೆಯನ್ನು ವೀಕ್ಷಿಸಲು ಕೆಳಗಿನ ಚಿತ್ರವನ್ನು ಕ್ಲಿಕ್ ಮಾಡಿ

Read More

ಒಡಿಯೂರಿನಲ್ಲಿ ಶತರುದ್ರಾಭಿಷೇಕ

ಮಾ.04ರಂದು ರಾತ್ರಿ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಶತರುದ್ರಾಭಿಷೇಕ ನಡೆಯಲಿದೆ.

Read More

“ಉಗ್ರರ ಧಮನಕ್ಕೆ ಯೋಧರಿಗೆ ಭಗವಂತ ಭೀಮಬಲ ಕರುಣಿಸಲಿ” -ಒಡಿಯೂರು ಶ್ರೀ

“ಜೀವನ ರಥ ಸಾಗಲು ಧರ್ಮದ ಪಥ ಅಗತ್ಯ. ಕಷ್ಟಗಳನ್ನು ಸಮಸ್ಯೆಗಳನ್ನು ಮೆಟ್ಟಿಲುಗಳನ್ನಾಗಿಸಿ ಮುನ್ನಡೆಯಬೇಕು. ದೇಹ ಎನ್ನುವ ರಥವನ್ನು ಮನಸ್ಸೆಂಬ ಹಗ್ಗದಿಂದ ಕಟ್ಟಿ, ಬುದ್ಧಿ ಎಂಬ ಸಾರಥಿಯ ಕೈಗೆ ನೀಡಿದಾಗ ಬದುಕು ಸುಸೂತ್ರವಾಗುತ್ತದೆ. ಯೋಧರ ಹತ್ಯೆಯನ್ನು ನಾವು ಖಂಡಿಸುವುದರ ಜೊತೆಗೆ ಇದಕ್ಕೆ ಪ್ರತ್ಯುತ್ತರ ನೀಡುವ ಕಾರ್ಯವಾಗಬೇಕು. ಉಗ್ರರಿಗೆ ಯಾವತ್ತೂ ಭಗವಂತನ ಅನುಗ್ರಹವಿರುವುದಿಲ್ಲ. ಯೋಧರಿಗೆ ಸಾಂತ್ವನ ಹೇಳುವ ಕಾರ್ಯವನ್ನು ಸಮಾಜ ಮಾಡಬೇಕು. ಉಗ್ರರನ್ನು ಮುಗಿಸಲು ನಮ್ಮ ಸೇನೆಗೆ ಭೀಮಬಲ ಭಗವಂತ ನೀಡಲಿ ಎಂದು ಪ್ರಾರ್ಥಿಸೋಣ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದ ಆತ್ರೇಯ ಮಂಟಪದಲ್ಲಿ ನಡೆದ ಶ್ರೀ ಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆ 2019ರ ಧರ್ಮಸಭೆಯನ್ನು ಉದ್ಘಾಟಿಸಿ ಆಶೀರ್ವಚನವಿತ್ತರು.

Read More

‘ತುಳು ಬದ್ಕ್‍ದ ನಿಲೆ-ಬಿಲೆ’ – 19ನೇ ತುಳು ಸಾಹಿತ್ಯ ಸಮ್ಮೇಳನ

“ಸಮಾಜ ಕಟ್ಟುವ ಸಾಹಿತ್ಯ ನಿರ್ಮಾಣವಾಗಬೇಕು. ಧರ್ಮಗ್ರಂಥಗಳನ್ನು ಸುಡಬೇಕು ಎನ್ನುತ್ತಾ ಸಮಾಜವನ್ನು ವಿಘಡನೆ ಮಾಡುವ ಕೆಲವು ಸಾಹಿತಿಗಳ ನಡೆ ಸರಿಯಲ್ಲ. ತುಳುನಾಡಿನಲ್ಲಿ ತುಳು ಭಾಷೆಯನ್ನು ಹುಡುಕುವ ಪರಿಸ್ಥಿತಿ ಸೃಷ್ಟಿಯಾಗಬಾರದು. ತುಳು ಭಾಷೆಯಲ್ಲಿ ಎಂಎ. ಪರೀಕ್ಷೆ ಬರೆಯುತ್ತಿರುವುದು, ತುಳುವಿನಲ್ಲೇ ಸಂಶೋಧನೆ ನಡೆಸುತ್ತಿರುವುದು ಶ್ಲಾಘನೀಯ. ತುಳು ಭಾಷೆಯ ಸಂಪತ್ತನ್ನು ಅರ್ಥೈಸಿ ಉಳಿಸಿ-ಬೆಳೆಸುವ ಪ್ರಯತ್ನ ನಡೆಯಬೇಕು”

Read More

“ಜಾತ್ರೆ – ಉತ್ಸವಗಳ ಮೂಲಕ ಮಾನವ ಧರ್ಮ ಬಲಗೊಳ್ಳುತ್ತದೆ”

ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ನಾಲ್ಕು ಚಕ್ರಗಳು ಅಥವಾ ಕಂಬಗಳು. ಒಂದು ಕಂಬ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. ಧರ್ಮವೆಂಬ ಕಂಬ ಸಮರ್ಪಕವಾಗಿದ್ದಾಗ ಉಳಿದ ಕಂಬಗಳೆಲ್ಲವೂ ಸಮರ್ಪಕವಾಗಿರುತ್ತವೆ. ಅದು ಬದುಕಿನ ಯಶಸ್ಸು. ಆದುದರಿಂದ ಧರ್ಮದ ಆಧಾರದಲ್ಲಿ ಬದುಕಿನ ರಥ ಸಾಗಬೇಕು. ಜಾತ್ರೆ, ಉತ್ಸವಗಳ ಮೂಲಕ ಮಾನವಧರ್ಮ ಗಟ್ಟಿಯಾಗುತ್ತದೆ.

Read More

ಒಡಿಯೂರಿನಲ್ಲಿ ಶ್ರೀ ದತ್ತ ಮಾಲಾಧಾರಣೆಗೈದು ಒಡಿಯೂರು ಶ್ರೀ ಆಶೀರ್ವಚನ

‘ಗುರು’ ಎಂದರೆ ಜ್ಯೇಷ್ಠ, ದೊಡ್ಡದು ಎಂಬ ಅರ್ಥಗಳಿವೆ. ಗುರು ಯಾವತ್ತೂ ಲಘುವಾಗುವುದಿಲ್ಲ. ‘ಗು’ ಎಂದರೆ ಅಂಧಾಕಾರ, ‘ರು’ ಎಂದರೆ ಬೆಳಕು. ಅಂಧಾಕಾರವನ್ನು ನಿವಾರಿಸಿ ಸುಜ್ಞಾನದ ಬೆಳಕನ್ನು ನೀಡುವವನೇ ಗುರು. ವಿಷ್ಣುವಿನ 6ನೇ ಅವತಾರವೇ ಗುರುದತ್ತಾತ್ರೇಯರು. ಅತ್ರಿಯ ಮಗನಾದುದರಿಂದ ಆತ್ರೇಯನಾದ. ದೇವನೇ ಗುರುವಾಗಿ ಧರೆಯಲ್ಲಿ ಅವತರಿಸಿದ.

Read More

“ಕೌಶಲ್ಯದ ಬದುಕು ಶ್ರೇಷ್ಠ ಬದುಕು” – ದಾವಣಗೆರೆಯಲ್ಲಿ ಒಡಿಯೂರು ಶ್ರೀ

“ಸಮಾಜದಲ್ಲಿ ಎರಡು ತರದ ಜನರಿರುತ್ತಾರೆ. ಕೆಲವರು ರೇಷ್ಮೆಹುಳು ತರ, ಇನ್ನು ಕೆಲವರು ಜೇಡನ ತರ. ರೇಷ್ಮೆ ಹುಳು ತಾನೇ ಕಟ್ಟಿದ ಗೂಡಿನೊಳಗೆ ನಾಶವಾಗುತ್ತದೆ. ಜೇಡ ತಾನೇ ಕಟ್ಟಿದ ಬಲೆಯಲ್ಲಿ ಜೀವನ ನಡೆಸುತ್ತದೆ. ಯಾವತ್ತೂ ಜೇಡ ತಾನೇ ಕಟ್ಟಿದ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ.

Read More

ಗೋಪೂಜೆ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಬಲಿಪಾಡ್ಯದಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಗೋಪೂಜೆ ನೆರವೇರಿತು.

Read More

ಶ್ರೀ ಧನ್ವಂತರೀ ಹವನ

ನ.5ರಂದು ಶ್ರೀ ಧನ್ವಂತರಿ ಜಯಂತಿಯ ಪ್ರಯುಕ್ತ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಶ್ರೀ ಧನ್ವಂತರೀ ಹವನವು ಬೆಳಿಗ್ಗೆ ಜರಗಲಿದೆ. ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಅಪೇಕ್ಷೆ.

Read More

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top