+91 8255-266211
info@shreeodiyoor.org

ಒಡಿಯೂರು ಶ್ರೀಗಳ ಸಂತಾಪ

ಬಹು ಭಾಷಾ ಸ್ವರ ಸಾಮ್ರಾಟ, ಸಂಗೀತವನ್ನೇ ತನ್ನ ಉಸಿರಾಗಿಸಿಕೊಂಡ ಸಂಗೀತ ಸಾರ್ವಭೌಮ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ನಾದಲೀನರಾದುದು ಭಾರತದ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೂಲತಃ ತೆಲುಗಿನವರಾದರೂ ಕನ್ನಡ ಭಾಷೆಯ ಬಗ್ಗೆ ಅವರಿಗಿದ್ದ ಪ್ರೀತಿ, ಅಭಿಮಾನ ಅಸಾಧಾರಣವಾದುದು. ಬೌತಿಕವಾಗಿ ಅವರು ಕಣ್ಮರೆಯಾದರೂ ಅವರ ಗಾನಮಾಧುರ್ಯ ಸದಾ ಹಸಿರಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಆರಾಧ್ಯಮೂರ್ತಿ ಶ್ರೀ ದತ್ತಾಂಜನೇಯ ದೇವರು ಕರುಣಿಸಲಿ […]

Read More

ಡಾ. ಶಿಮಂತೂರು ನಾರಾಯಣ ಶೆಟ್ಟರು ನಿಧನ : ಒಡಿಯೂರು ಶ್ರೀಗಳ ಸಂತಾಪ

ಜೀವನದ ಬಹುಪಾಲನ್ನು ಯಕ್ಷಗಾನದ ಛಂದಸ್ಸಿಗೆ ಮುಡಿಪಾಗಿರಿಸಿದ ಯಕ್ಷಗಾನ ಛಂದೋಬ್ರಹ್ಮ ಅದ್ಭುತ ಕವಿ, ಸಂಶೋಧಕ, ಸರಳ ಸಜ್ಜನಿಕೆಯ ಡಾ. ಶಿಮಂತೂರು ನಾರಾಯಣ ಶೆಟ್ಟರು ಶ್ರೀ ಸಂಸ್ಥಾನದ ಮುಖ್ಯ ಅಭಿಮಾನಿಗಳಲ್ಲೋರ್ವರು. ಇವರ ನಿಧನವು ಯಕ್ಷಗಾನ ರಂಗಕ್ಕೆ ತುಂಬಲಾರದ ನಷ್ಟ. ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು, ಅವರ ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಆರಾಧ್ಯದೇವರು ಕರುಣಿಸಲೆಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಪ್ರಾರ್ಥಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ.

Read More

ಒಡಿಯೂರು ಶ್ರೀಗಳ ಸಂತಾಪ

ಮಡಿಯಾಳ ನಾರಾಯಣ ಭಟ್ಟರ ಬಳಿಕ ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಆದುನಿಕ ಶೈಕ್ಷಣಿಕ ಕ್ರಾಂತಿಯ ಹರಿಕಾರ, ಅನುಪಮ ತ್ಯಾಗಜೀವಿ ಶ್ರೀ ಯು. ಗಂಗಾಧರ ಭಟ್ ಅವರ ನಿಧನಕ್ಕೆ ವಿಷಾಧಿಸಿ, ಅಗಲಿದ ದಿವ್ಯಾತ್ಮಕ್ಕೆ ಆರಾಧ್ಯದೇವರು ಚಿರಶಾಂತಿಯನ್ನು ಕರುಣಿಸಲೆಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಪ್ರಾರ್ಥಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ.

Read More

ಒಡಿಯೂರು ಶ್ರೀಗಳ ಸಂತಾಪ

ವಿಟ್ಲ ಅರಸರೆಂದೇ ಪ್ರಖ್ಯಾತರಾದ, ಒಡಿಯೂರು ಶ್ರೀ ಸಂಸ್ಥಾನದ ಮುಖ್ಯ ಅಭಿಮಾನಿಗಳೂ ಆದ ಶ್ರೀಯುತ ಜನಾರ್ದನ ವರ್ಮ ಅರಸರು ದೈವಾಧೀನರಾಗಿರುವುದು ಬೇಸರದ ಸಂಗತಿ. ಇವರ ಕಾಲಾವಧಿಯಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆದಿರುವುದು ಅಲ್ಲದೆ ವಿಟ್ಲ ಸೀಮೆಯಲ್ಲಿ ಹಲವಾರು ದೇವಸ್ಥಾನಗಳು ಜೀರ್ಣೋದ್ಧಾರಗೊಂಡಿರುವುದು ಸ್ಮರಣೀಯ. ಸರಳ ವ್ಯಕ್ತಿತ್ವದ, ಮೃಧು ನಡೆ-ನುಡಿಯ, ಅರಸೊತ್ತಿಗೆಯನ್ನು ಕರ್ತವ್ಯವೆಂದು ಪಾಲಿಸಿಕೊಂಡು ಬಂದಿರುವುದು ಇವರ ವಿಶೇಷತೆ. ಅಗಲಿದ ಇವರ ಆತ್ಮಕ್ಕೆ ಚಿರಶಾಂತಿಯನ್ನು ಹಾಗೂ ಕುಟುಂಬಿಕರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಆರಾಧ್ಯದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.

Read More

ಒಡಿಯೂರು ಶ್ರೀ ಸಂಸ್ಥಾನದಿಂದ ದಿನ ಬಳಕೆ ಸಾಮಾಗ್ರಿಗಳ ವಿತರಣೆ:

ಕರೋನಾ(ಕೋವಿಡ್-19)ದ ಪರಿಣಾಮ ಲಾಕ್‍ಡೌನ್‍ನಿಂದಾಗಿ ತೊಂದರೆಗೀಡಾದ ಜನತೆಗೆ ಸ್ಪಂದಿಸಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಿಂದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಕನ್ಯಾನ ಗ್ರಾಮದ ಆಯ್ದ ಮನೆಗಳಿಗೆ ಅಕ್ಕಿ, ಸಕ್ಕರೆ, ಚಾಹುಡಿ, ಸಾಂಬಾರುಹುಡಿ ಇತ್ಯಾದಿ ದಿನ ಬಳಕೆಯ ವಸ್ತುಗಳನ್ನು ವಿತರಿಸಿದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕ ಶ್ರೀ ಪಿ. ಲಿಂಗಪ್ಪ ಗೌಡ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಕನ್ಯಾನ ಗ್ರಾಮ ಸಮಿತಿಯ ಅಧ್ಯಕ್ಷ ಶ್ರೀ ಕೆ.ಪಿ. ರಘುರಾಮ ಶೆಟ್ಟಿ, ಶ್ರೀ ಸಂಸ್ಥಾನದ ಕಾರ್ಯನಿರ್ವಾಹಕ ಶ್ರೀ ಪದ್ಮನಾಭ […]

Read More

ಒಡಿಯೂರು ಶ್ರೀ ಸಂಸ್ಥಾನದಿಂದ ದಿನ ಬಳಕೆ ಸಾಮಾಗ್ರಿ ವಿತರಣೆ:

ಕರೋನಾ (ಕೋವಿಡ್-19)ದ ಪರಿಣಾಮ ಲಾಕ್‍ಡೌನ್‍ನಿಂದಾಗಿ ತೊಂದರೆಗೀಡಾದ ಜನತೆಗೆ ಸ್ಪಂದಿಸಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಿಂದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಕರೋಪಾಡಿ ಗ್ರಾಮದ ಸಾವಿರಕ್ಕೂ ಮಿಕ್ಕಿ ಮನೆಗಳಿಗೆ ಅಕ್ಕಿ, ಸಕ್ಕರೆ, ಚಾಹುಡಿ, ಸಾಂಬಾರುಹುಡಿ ಇತ್ಯಾದಿ ದಿನ ಬಳಕೆಯ ವಸ್ತುಗಳನ್ನು ವಿತರಿಸಿದರು. ಸಕಾಲದಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ನಿರ್ದೇಶಕರಾದ ಶ್ರೀ ಕಿರಣ್ ಉರ್ವ, ಕರೋಪಾಡಿ ಗ್ರಾಮ ಸಮಿತಿಯ ಅಧ್ಯಕ್ಷ ಶ್ರೀ ರಘುರಾಮ ಶೆಟ್ಟಿ ಪಟ್ಲಗುತ್ತು, ಬಂಟ್ವಾಳ ತಾಲೂಕು ವಿಸ್ತರಣಾಧಿಕಾರಿ ಶ್ರೀ ಸದಾಶಿವ ಅಳಿಕೆ, ಶ್ರೀ ಸುಬ್ರಾಯ […]

Read More

ತಮಸೋಮಾ ಜ್ಯೋತಿರ್ಗಮಯ – ಒಡಿಯೂರು ಶ್ರೀ

ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಕರೋನಾ ವೈರಸ್(ಕೋವಿಡ್-19) ಸೋಂಕಿನಿಂದ ಹಲವರು ಬಳಲುತ್ತಿದ್ದು, ಕೆಲವರು ಮೃತಪಟ್ಟಿರುವುದು ವಿಷಾಧನೀಯ. ಇದೀಗ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೈಗೊಂಡಿರುವ ಅತ್ಯಮೂಲ್ಯವಾದ ದೀಪ ಉರಿಸುವ ಕಾರ್ಯಕ್ರಮ ಪ್ರಶಂಸನೀಯ. ತ್ರೇತಾ, ದ್ವಾಪರ ಯುಗದಲ್ಲಿಯೂ ರಾಕ್ಷಸರ ತಾಮಸಗುಣವು ಹೆಚ್ಚಾದಾಗ ಅದರ ನಿವಾರಣೆಗೆ ಬೆಳಕನ್ನು ಹುಡುಕಿರುವುದು ಸಹಜ. ಇದಕ್ಕೆ ಪೂರಕವಾಗಿ ಕೋಟಿ ಕೋಟಿ ಜನರು ದೀಪ ಉರಿಸುವ ಮೂಲಕ ಭಗವದ್ ಪ್ರಾರ್ಥನೆಯೊಂದಿಗೆ ಬಲತುಂಬಿ ಅಂಧಕಾರವು ತೊಲಗಲಿ. ಸೂಚಿಸಿದ ಕೆಲವೊಂದು ವಿಚಾರಗಳಿಗೆ ಸ್ಪಂದಿಸಿ, ಜನರೆಲ್ಲಾ ಮನೆಗಳಲ್ಲಿಯೇ ಉಳಿದು, ಅಂತರವನ್ನು […]

Read More

ಜನತಾ ಕಫ್ರ್ಯೂ ಬೆಂಬಲಕ್ಕೆ ಒಡಿಯೂರು ಶ್ರೀ ಕರೆ:

ವಿಶ್ವವನ್ನೇ ಗಂಭೀರವಾಗಿ ಅಲ್ಲೋಲಕಲ್ಲೋಲಗೊಳಿಸಿರುವ ಕರೋನಾ(ಕೋವಿಡ್-19) ವೈರಸ್‍ನ ವಿರುದ್ಧ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀಯವರು ಕರೆ ನೀಡಿದ ಪ್ರಾಥಮಿಕ ಹಂತದ ಜನತಾ ಕಫ್ರ್ಯೂಗೆ ಭಾರತೀಯರು ಬೆಂಬಲಿಸಬೇಕು. ಆರೋಗ್ಯ ಮತ್ತು ಸ್ವಚ್ಛತೆಯನ್ನು ಕಾಪಿಡುವುದು ಎಲ್ಲರ ಕರ್ತವ್ಯವಾಗಿದೆ. ಎಲ್ಲರೂ ಪ್ರಾಮಾಣಿಕವಾದ ಸಹಕಾರದಿಂದ ಈ ಮಹಾಪಿಡುಗನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಸ್ವಯಂಪ್ರೇರಿತರಾಗಿ ಬದ್ಧತೆಯನ್ನು ಕಾಪಾಡಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಜನತೆಯಲ್ಲಿ ವಿನಂತಿಸಿದ್ದಾರೆ.

Read More

ವಿಶ್ವವು ಕರೋನಾ ಖಾಯಿಲೆಯಿಂದ ಮುಕ್ತವಾಗಲಿ – ಒಡಿಯೂರು ಶ್ರೀ

ಅಪರೂಪವಾಗಿ ಇಂತಹ ಹಲವಾರು ಸೋಂಕಿನ ಖಾಯಿಲೆಗಳು ಈ ಹಿಂದೆಯೂ ಕಾಡಿದೆ, ಈಗಲೂ ಕಾಡುತ್ತಿದೆ. ಮುನ್ನೆಚ್ಚರಿಕೆ ಅವಶ್ಯ. ಈ ಸಂದರ್ಭದಲ್ಲಿ ನಮ್ಮ ಭಾರತೀಯ ಪದ್ಧತಿಯ ಆಹಾರಗಳು, ಪ್ರಾಣಾಯಾಮದಂತಹ ಯೋಗಾಭ್ಯಾಸಗಳು, ಆಯುರ್ವೇದ ಹಾಗೂ ಇನ್ನಿತ್ಯಾದಿ ಅನುಕೂಲಕರವಾದಂತಹ ಔಷಧಿಗಳನ್ನು ಉಪಯೋಗ ಮಾಡುವುದರಿಂದ ನಿಯಂತ್ರಣ ಸಾಧ್ಯವಾಗಬಹುದು. ಕೆಲವೇ ದಿನಗಳಲ್ಲಿ ಈ ರೋಗವು ನಿಯಂತ್ರಣಕ್ಕೆ ಬc ರಲಿ ಎಂದು ಆರಾಧ್ಯದೇವರನ್ನು ಪ್ರಾರ್ಥಿಸುತ್ತೇವೆ.  

Read More

ಒಡಿಯೂರಿನಲ್ಲಿ 2ದಿನಗಳ ತುಳು ಕಾವ್ಯ ರಚನಾ ಕಮ್ಮಟ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಒಡಿಯೂರ್ದ ತುಳುಕೂಟದ ಸಹಕಾರದೊಂದಿಗೆ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ಎಪ್ರಿಲ್ 11 ಮತ್ತು 12ರ ಶನಿವಾರ ಮತ್ತು ಆದಿತ್ಯವಾರ ಎರಡು ದಿನಗಳ ತುಳು ಕಾವ್ಯ ರಚನಾ ಕಮ್ಮಟ(ತುಳು ಕಬಿತೆ ಕಟ್ಟುನ ಕಜ್ಜಕೊಟ್ಯ)ವನ್ನು ಏರ್ಪಡಿಸಲಾಗಿದೆ. ಹಿರಿಯ ಕವಿ-ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರು ಶಿಬಿರದ ನಿರ್ದೇಶಕರಾಗಿದ್ದು, ತಜ್ಞರು ವಿಷಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿರುವರು. ಕಾವ್ಯ ರಚನೆಯಲ್ಲಿ ಆಸಕ್ತರಾಗಿರುವ ಯುವಕ-ಯುವತಿಯರು ತಮ್ಮ ಪೂರ್ಣ ಅಂಚೆ ವಿಳಾಸ, ದೂರವಾಣಿ ಸಂಖ್ಯೆ, ಕೃತಿ ರಚನೆಯ […]

Read More

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top