+91 8255-266211
info@shreeodiyoor.org

‘ಆಧ್ಯಾತ್ಮದ ಉದ್ದೇಶ ಸಮಾಜದ ಉನ್ನತಿ’ – ಒಡಿಯೂರು ಶ್ರೀ

  ಪುತ್ತೂರು, ಮಾ.19: “ವಿಜ್ಞಾನದ ಹುಡುಕಾಟದಲ್ಲಿ ಸಿಗುವ ಫಲಿತಾಂಶಗಳೇ ಆಧ್ಯಾತ್ಮ. ವಿಜ್ಞಾನದಲ್ಲಿ ಆವಿಷ್ಕಾರವಿದ್ದರೆ ಆಧ್ಯಾತ್ಮದಲ್ಲಿ ಆವಿಷ್ಕಾರವೆಂದಿಲ್ಲ. ಆಧ್ಯಾತ್ಮ ಅದುವೇ ಕೊನೆ. ವಿಜ್ಞಾನ ಮತ್ತು ಆಧ್ಯಾತ್ಮ ಎಂಬ ಸಂಗತಿಗಳ ದೃಷ್ಟಿಕೋನಗಳೆರಡು ಒಂದೇ ಆಗಿದ್ದು ಇವೆರಡರ ಒಟ್ಟು ಉದ್ದೇಶ ಸಮಾಜದ ಉನ್ನತಿ. ದೇಹನಿಷ್ಠ ಸಂಸ್ಕøತಿಯು ನಮ್ಮ ಪಂಚೇಂದ್ರಿಯಗಳನ್ನು ತೃಪ್ತಿ ಪಡಿಸಲು ಪ್ರಯತ್ನಿಸುತ್ತದೆ. ಆದರೆ ಪಂಚೇಂದ್ರಿಯಗಳಿಗೆ ಸಂಪೂರ್ಣ ತೃಪ್ತಿ ಎಂಬುದು ಯಾವಾಗಲೂ ಪ್ರಾಪ್ತಿಯಾಗುವುದಿಲ್ಲ. ಇದಕ್ಕಿಂತ ಮೀರಿದ್ದು ಆತ್ಮನಿಷ್ಠ ಸಂಸ್ಕøತಿ. ಆತ್ಮೋನ್ನತಿ ಮತ್ತು ಆತ್ಮ ಸಂತೋಷಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಅದು ಶಾಶ್ವತ […]

Read More

ಸಜಿಪಮುನ್ನೂರುನಲ್ಲಿ ರಕ್ತದಾನ, ನೇತ್ರದಾನ ತಪಾಸಣಾ ಶಿಬಿರ

ಸಜಿಪಮುನ್ನೂರು, ಮಾ. 12: ಒಡಿಯೂರು ಶ್ರೀ ಷಷ್ಠ್ಯಬ್ದ ಸಂಭ್ರಮ ಪ್ರಯುಕ್ತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಕಲ್ಲಡ್ಕ ವಲಯ, ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಸಮಿತಿ ಸಜಿಪ ಮಾಗಣೆ, ವೆಲ್‍ಲಾಕ್ ಆಸ್ಪತ್ರೆ ಮಂಗಳೂರು ಮತ್ತು ಎಸ್ಸಿಲೋರ್ ಮಿಷನ್ ಫೌಂಡೇಶನ್ ಸಹಯೋಗದಲ್ಲಿ ರಕ್ತದಾನ ಶಿಬಿರ ಮತ್ತು ನೇತ್ರ ತಪಾಸಣಾ ಶಿಬಿರ ಸಜಿಪ ಮುನ್ನೂರು ಗ್ರಾಮ ಪಂಚಾಯತಿನಲ್ಲಿ ನಡೆಯಿತು. ಉದ್ಯಮಿ ಶ್ರೀ ಎಸ್. ಎಂ. ಗೋಪಾಲಕೃಷ್ಣ ಆಚಾರ್ಯ ಉದ್ಘಾಟಿದರು. ಸೀನಿಯರ್ ಟೆಕ್ನಿಶಿಯನ್ ಶ್ರೀ ಅನಿಲ್ ರಾವ್, ಬ್ಲಡ್ ಬ್ಯಾಂಕಿನ […]

Read More

“ಆತ್ಮಜ್ಞಾನ ತತ್ತ್ವದಡಿ ಬದುಕು ಸಾಗಿಸಿ” – ಒಡಿಯೂರು ಶ್ರೀ

ಉಡುಪಿ: ಮಾರ್ಚ್.9: ಆತ್ಮಜ್ಞಾನ ತತ್ತ್ವದಡಿ ಬದುಕು ಸಾಗಿಸಿದಾಗ ನಾವು ಬೆಳೆಯುವುದರ ಜತೆಗೆ ಸಮಾಜವು ಅಭಿವೃದ್ಧಿಗೊಳ್ಳಲು ಸಾಧ್ಯ. ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ, ಶರೀರ, ಬುದ್ಧಿ, ಮನಸ್ಸು ಸರಿಯಾಗಿ ಉಪಯೋಗಿಸಿದಾಗ ಎಷ್ಟೇ ಕಷ್ಟದ ಗುರಿಯನ್ನು ಸಹ ಸುಲಭವಾಗಿ ಮುಟ್ಟಲು ಸಾಧ್ಯ. ಮನುಷ್ಯನ ದೇಹ ಕ್ಷೀಣಗೊಳ್ಳುವುದರ ಒಳಗಾಗಿ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಬೇಕು. ಆಗ ಮಾತ್ರ ಬದುಕಿನ ಸಾರ್ಥಕತೆ ಕಾಣಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಷಷ್ಟ್ಯಬ್ದ ಸಂಭ್ರಮ ‘ಜ್ಞಾನವಾಹಿನಿ’ ಉಡುಪಿ […]

Read More

“ಭ್ರಷ್ಟಾಚಾರ ಮುಕ್ತ ಸಮಾಜ ಗುರಿಯಾಗಲಿ” – ಒಡಿಯೂರು ಶ್ರೀ

  ಕನ್ಯಾನ, ಮಾ. 7: “ಭ್ರಷ್ಟಾಚಾರಮುಕ್ತ ಸಮಾಜ ನಿರ್ಮಾಣವಾಗಲು ಜನಸೇವಾ ಕೇಂದ್ರವು ಜನಪರವಾಗಿ ಕಾರ್ಯ ನಿರ್ವಹಿಸಬೇಕು. ಸಮಾಜದ ಉನ್ನತಿಗೆ ಪೂರಕವಾಗಿರಬೇಕು. ಪ್ರತಿಯೊಬ್ಬರು ರಾಷ್ಟ್ರ ಪ್ರೇಮ ಬೆಳೆಸಿ, ದುಶ್ಚಟಮುಕ್ತ ಸಮಾಜ ನಿರ್ಮಾಣವಾಗಬೇಕು, ಬದುಕು ಕೌಶಲಯುತವಾಗಿರಬೇಕು” ಎಂದು ಕನ್ಯಾನದ ಕೆಳಗಿನ ಪೇಟೆಯಲ್ಲಿರುವ ಒಡಿಯೂರು ಶ್ರೀ ಗುರುದೇವ ಐ.ಟಿ.ಐ.ಯಲ್ಲಿ ಶ್ರೀ ಒಡಿಯೂರು ಜನಸೇವಾ ಕೇಂದ್ರವನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಉದ್ಘಾಟಿಸಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ, ಪುತ್ತೂರು ಮೇದಿನಿ ಜನಸೇವಾ ಕೇಂದ್ರದ […]

Read More

“ಶಾರೀರಿಕ ಬದುಕಿಗೆ ಕೃಷಿ ಬಲ” – ಒಡಿಯೂರು ಶ್ರೀ

ಕಡಮಜಲು, ಮಾ. 6: “ಕೃಷಿ ಮತ್ತು ಋಷಿ ಭಾರತೀಯ ಸಂಸ್ಕøತಿಯ ಎರಡು ಕಣ್ಣುಗಳಿದ್ದಂತೆ, ಋಷಿಯಲ್ಲಿ ಆಧ್ಯಾತ್ಮದ ಅನುಭವ ಸಿಕ್ಕರೆ, ಕೃಷಿ ಶಾರೀರಿಕ ಬದುಕಿಗೆ ಬಲ ತುಂಬುತ್ತದೆ. ಈ ನಿಟ್ಟಿನಲ್ಲಿ ಯುವ ಸಮುದಾಯ ಕೃಷಿ ಸಂಸ್ಕøತಿಯ ಉಳಿವಿಗಾಗಿ ಮನಸ್ಸು ಮಾಡಬೇಕು” ಎಂದು ಕಡಮಜಲಿನಲ್ಲಿ ಕಡಮಜಲು ಸುಭಾಷ್ ರೈ 70ರ ಸಂಭ್ರಮ ವರ್ಷಾಚರಣೆಯ ಪ್ರಥಮ ತಿಂಗಳ ಕಾರ್ಯಕ್ರಮ ‘ಸಮಗ್ರ ಕೃಷಿ ದರ್ಶನ’ ಕಾರ್ಯಕ್ರಮದ ಸಮಾರೋಪ, ಶೃಂಗಾರ ಕೃಷಿ ಸನ್ಮಾನ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮಿಗಳವರು ಆಶೀರ್ವಚನ ನೀಡಿದರು. “ಮನುಷ್ಯನ […]

Read More

ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ 60 ಸರಣಿ ಕಾರ್ಯಕ್ರಮಗಳ ಉದ್ಘಾಟನೆ

ನವಿಮುಂಬಯಿ, ಮಾ.4 : ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕ ವತಿಯಿಂದ ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಪ್ರಯುಕ್ತ ಮುಂಬಯಿಯಲ್ಲಿ 60 ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಿದ್ದು, ಇದರ ಉದ್ಘಾಟನಾ ಸಮಾರಂಭವು ನೆರೂಲ್‍ನ ಶ್ರೀ ಶನೀಶ್ವರ ಮಂದಿರದ ಸಭಾಂಗಣದಲ್ಲಿ ನಡೆಯಿತು.ನೆರೂಲ್ ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ, ಧರ್ಮದರ್ಶಿ ಶ್ರೀ ರಮೇಶ್ ಎಂ ಪೂಜಾರಿ ಅವರು ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಶನೀಶ್ವರ ಮಂದಿರದ ಪ್ರಧಾನ ಅರ್ಚಕ ಶ್ರೀ ಸೂರಜ್ ಭಟ್, ಗೌರವ ಅತಿಥಿಯಾದ […]

Read More

ಕಡಬ: ಒಡಿಯೂರು ಶ್ರೀಗಳ ಷಷ್ಠ್ಯಬ್ದ ಪ್ರಯುಕ್ತ ರಕ್ತದಾನ ಶಿಬಿರ

ಕಡಬ, ಫೆ.28: ಒಡಿಯೂರು ಶ್ರೀಗಳ ಷಷ್ಠ್ಯಬ್ದ ಕಾರ್ಯಕ್ರಮದ ಪ್ರಯುಕ್ತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಕಡಬ ವಲಯ, ಕಡಬ ತಾಲೂಕು ಒಡಿಯೂರು ಶ್ರೀ ಷಷ್ಠ್ಯಬ್ದ ಆಚರಣಾ ಸಮಿತಿ, ಒಡಿಯೂರು ಶ್ರೀ ಸೇವಾ ಬಳಗ ಕಡಬ, ಕಡಬ ಸಮುದಾಯ ಆರೋಗ್ಯ ಕೇಂದ್ರ, ಮಂಗಳೂರಿನ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಜರಗಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಕಡಬ ತಾ.ಪಂ. ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಕನ್ಯಾಮಂಗಲ ಅವರು ಉದ್ಘಾಟಿಸಿದರು. ಒಡಿಯೂರು ಶ್ರೀ ಷಷ್ಠ್ಯಬ್ದ ಆಚರಣಾ ಕೇಂದ್ರ ಸಮಿತಿಯ […]

Read More

“ಮಹಿಳೆಯಿಂದ ಸಮಾಜಕ್ಕೆ ಸಂಸ್ಕಾರ”-ಸಾಧ್ವಿ ಶ್ರೀ ಮಾತಾನಂದಮಯೀ

ಬದಿಯಡ್ಕ ಫೆ.14: “ಮಹಿಳೆಯಿಂದಲೇ ಸಮಾಜಕ್ಕೆ ಸಂಸ್ಕಾರ ಲಭಿಸುತ್ತದೆ. ಸಂಸ್ಕಾರಯುತ ಸಮಾಜದಿಂದ ರಾಷ್ಟ್ರೋತ್ಥಾನವಾಗಿ ವಿಶ್ವಮಾನವ ಧರ್ಮದ ಸಾಕ್ಷಾತ್ಕಾರವಾಗುತ್ತದೆ” ಎಂದು ಒಡಿಯೂರು ಸಾಧ್ವಿ ಶ್ರೀ ಮಾತಾನಂದಮಯೀ ಹೇಳಿದರು. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಷಷ್ಠ್ಯಬ್ದ ಸಂಭ್ರಮ ಅಂಗವಾಗಿ ಕಾಸರಗೋಡು ವಲಯ ಸಮಿತಿ ಮತ್ತು ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ನೇತೃತ್ವದಲ್ಲಿ ಪಾರೆಕಟ್ಟೆ ಕನ್ನಡ ಗ್ರಾಮದಲ್ಲಿ ಮಹಿಳಾ ಕ್ರೀಡೋತ್ಸವ, ಆಹಾರೋತ್ಸವ, ಸಂಕೀರ್ತನೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಾಸರಗೋಡು ನಗರಸಭಾ ಸದಸ್ಯೆ ಶ್ರೀಮತಿ ಸವಿತಾ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಷಷ್ಠ್ಯಬ್ದ ಸಮಿತಿ ಪ್ರಧಾನ ಕಾರ್ಯದರ್ಶಿ […]

Read More

“ಯೋಗವು ಆತ್ಮನಿಷ್ಠ ಸಂಸ್ಕೃತಿಯ ಬೆಳಕು” – ಒಡಿಯೂರು ಶ್ರೀ

ಭಾರತ ದೇಶವು ವಿಶ್ವಕ್ಕೆ ಅತ್ಯಮೂಲ್ಯವಾದ ‘ಯೋಗ’ ಮಾರ್ಗವನ್ನು ಕರುಣಿಸಿ ಜಗದ್ಗುರುವಾಗಿದೆ. ಯೋಗವು ಆತ್ಮನಿಷ್ಠ ಸಂಸ್ಕೃತಿಗೊಂದು ಪಠ್ಯವಿದ್ದಂತೆ. ಭಗವಾನ್ ದತ್ತಾತ್ರೇಯರು ಅಲರ್ಕ ಮಹಾರಾಜನಿಗೆ ಯೋಗದ ರಹಸ್ಯವನ್ನು ತಿಳಿಸಿಕೊಡುತ್ತಾರೆ. ಯಮ-ನಿಯಮಗಳು ಅಷ್ಟಾಂಗ ಯೋಗದ ಮುಖ್ಯ ವಿಚಾರ. ಇವೆರಡನ್ನು ಪಾಲಿಸಿಕೊಂಡಾಗ ಮುಂದಿನ ಆರು ವಿಚಾರಗಳು ನಿರಂತರವಾಗುವುದು. ಯೋಗಿಯ ಬದುಕು ಅತ್ಯಮೂಲ್ಯವಾದುದು. ಯೋಗಾಭ್ಯಾಸವು ಅವನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ; ಆರೋಗ್ಯಪೂರ್ಣವಾಗಿಸುತ್ತದೆ. ಜಗತ್ತಿನಾದ್ಯಂತ ‘ವಿಶ್ವ ಯೋಗ ದಿನಾಚರಣೆ’ಯನ್ನು ಆಚರಿಸುವುದು ಸಂತಸದ ವಿಚಾರ. ಕರೋನಾದ ಕಾಟದಿಂದ ಮನೆಯಲ್ಲಿಯೇ ಯೋಗ ನಡೆಸುವುದು ಉತ್ತಮ. ಯೋಗಾಭ್ಯಾಸವು ಬರೇ ಪ್ರದರ್ಶನಕ್ಕಾಗದೆ ನಿದರ್ಶನವಾಗಬೇಕು. ಯೋಗಾಭ್ಯಾಸದ […]

Read More

ಶ್ರೀ ಕೆ. ಜನಾರ್ದನ ಶೆಟ್ಟಿ ಬಂಡಿತ್ತಡ್ಕ ಅವರ ನಿಧನಕ್ಕೆ ಒಡಿಯೂರು ಶ್ರೀಗಳ ಸಂತಾಪ

ಗಾಂಧೀಜಿ ಪ್ರಣೀತ ಬುನಾದಿ ಶಿಕ್ಷಣ ತರಬೇತಿ ಪಡೆದು ಶಿಕ್ಷಣವನ್ನೇ ಜೀವನವಾಗಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಅನನ್ಯ ಶಿಕ್ಷಕ ಶ್ರೀ ಕೆ. ಜನಾರ್ದನ ಶೆಟ್ಟಿ ಬಂಡಿತ್ತಡ್ಕ ಅವರ ನಿಧನಕ್ಕೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂತಾಪ ವ್ಯಕ್ತಪಡಿಸಿದ್ದಾರೆ. ನಿವೃತ್ತಿಯ ಬಳಿಕ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು ಸ್ಮರಣೀಯ. ಅಧ್ಯಾತ್ಮದ ಒಲವುಳ್ಳವರಾಗಿದ್ದ ಅವರು ಪ್ರಾಮಾಣಿಕತೆ, ಶಿಸ್ತು ಮತ್ತು ಸಂಯಮವನ್ನು ಮೈಗೂಡಿಸಿಕೊಂಡಿದ್ದರು. ಇವರು ಸಾಧ್ವಿ ಶ್ರೀ […]

Read More

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top