+91 8255-266211
info@shreeodiyoor.org

ತ್ಯಾಗ ಮತ್ತು ಸೇವೆಯಿಂದ ಸಮಾಜಾಭಿವೃದ್ದಿ ಸಾಧ್ಯ

“ತ್ಯಾಗ ಮತ್ತು ಸೇವೆಯಿಂದ ಸಮಾಜಾಭಿವೃದ್ದಿ ಸಾಧ್ಯ” ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ, ಪುಣೆ ಘಟಕದ 20ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಪುಣೆ: “ಅಧ್ಯಾತ್ಮಿಕತೆಯೊಂದಿಗೆ ಬದುಕುವ ಕಲೆಯನ್ನು ರೂಢಿಸಿಕೊಳ್ಳಬೇಕು. ಜೀವನ ಮೌಲ್ಯಾದರ್ಶಗಳಿಂದ ಸಂಸ್ಕಾರಯುತವಾದ ಜೀವನ ಸಾಧ್ಯ. ಪೌರಾಣಿಕ ಹಿನ್ನಲೆಯ ಯಕ್ಷಗಾನದಿಂದ ಭಾಷಾ ಶುದ್ಧಿಯಾಗುವ ಜೊತೆಗೆ ಪುರಾಣ, ಚರಿತ್ರೆಗಳನ್ನು ತಿಳಿದಂತಾಗುತ್ತದೆ. ಭಕ್ತಿ ಮತ್ತು ಸಂಸ್ಕಾರ ಪಾಠವನ್ನು ಭಜನೆ ಕಲಿಸುತ್ತದೆ.  ಸುಜ್ಞಾನದಿಂದ  ಕೂಡಿದ ಉತ್ತಮ ವಿಚಾರಗಳೊಂದಿಗೆ ಮಕ್ಕಳಿಗೆ ಸಂಸ್ಕಾರ, […]

Read More

ಶ್ರೀ ದತ್ತ ಜಯಂತಿ ಮಹೋತ್ಸವ

ದಶಂಬರ 20ರಂದು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ದತ್ತ ಜಯಂತಿ ಮಹೋತ್ಸವ – ಶ್ರೀ ದತ್ತ ಮಹಾಯಾಗ ಸಪ್ತಾಹ ಆರಂಭ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ದಶಂಬರ 20ರಿಂದ 26ರ ತನಕ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಈ ಸುಸಂದರ್ಭ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಇವರಿಂದ ಶ್ರೀಮದ್ಭಾಗವತ ಪ್ರವಚನ ಸಪ್ತಾಹ ಹಾಗೂ ಪ್ರಸಿದ್ಧ […]

Read More

ಸಹಕಾರ ತತ್ತ್ವ ಅನುಷ್ಠಾನದಿಂದ ದೇಶ ಸುಭಿಕ್ಷ

“ಸಹಕಾರ ತತ್ತ್ವ ಅನುಷ್ಠಾನದಿಂದ ದೇಶ ಸುಭಿಕ್ಷ”  – ಸೌಹಾರ್ದ ಸಹಕಾರಿಗಳ 10ದಿನಗಳ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ “ಬದುಕು ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ. ಅಸಾಧ್ಯವಾದುದನ್ನು ಸಾಧ್ಯವಾಗಿಸುವುದಕ್ಕೆ ಇಂತಹ ಶಿಬಿರಗಳ ಅವಶ್ಯಕತೆ ಇದೆ.  ಭಾರತ ದೇಶದ ಜೀವಾಳವೇ ಅಧ್ಯಾತ್ಮ. ಜೇನಿನಂತೆ ಎಲ್ಲರೊಳಗೆ ಬೆಸೆಯುವವರು ನಾವಾಗಬೇಕು. ಸಹಕಾರದ ಮೂಲತತ್ತ್ವವೇ ಏಕತೆ. ಸಹಕಾರಿ ತತ್ತ್ವ ಅನುಷ್ಠಾನವಾದರೆ ದೇಶ ಸುಭಿಕ್ಷವಾಗಬಹುದು. ನಾವೆಲ್ಲರೂ ಪರೋಪಕಾರಿಗಳಾಬೇಕು. ಪ್ರಕೃತಿಯಲ್ಲಿ ಸಹಕಾರಿ ತತ್ತ್ವದ ಪಾಠ ಅಡಕವಾಗಿದೆ. ರಾಷ್ಟ್ರ ವಿಕಾಸಕ್ಕೆ ವ್ಯಕ್ತಿತ್ವ ವಿಕಸನ ಶಿಬಿರ ಪೂರಕವಾಗಿದೆ. ಸಮಾಜಮುಖಿಯಾಗಿ […]

Read More

ಇರವಿನ ಅರಿವೇ ದೀಪಾವಳಿ

‘ಇರವಿನ ಅರಿವೇ ದೀಪಾವಳಿ’ ತಮಗೆಲ್ಲ ದೀಪಾವಳಿಯ ಶುಭಾಶಯಗಳು. ದೀಪಾವಳಿ ಎಂದರೆ ದೀಪಗಳ ಮಾಲೆ. ಒಮ್ಮೆ ಸೂರ್ಯನು ಅಸ್ತಮಿಸುವ ಸಮಯದಲ್ಲಿ ಕೇಳುತ್ತಾನೆ – “ನಾನು ಅಸ್ತಮಿಸುತ್ತೇನೆ, ಮುಂದೆ ಬೆಳಕು ಕೊಡುವವರು ಯಾರು?” ಆಗ ಯಾರೂ ಮುಂದೆ ಬರಲಿಲ್ಲ. ಕೊನೆಗೆ ದೀಪ ಹೇಳುತ್ತದೆ – “ನಾನು ನನ್ನ ಸುತ್ತಮುತ್ತ ಬೆಳಕನ್ನು ಚೆಲ್ಲಬಲ್ಲೆ” ಎಂದಿತು. ಆದರೆ ದೀಪದಿಂದ ದೀಪ ಬೆಳಗಿದಾಗ ಒಂದಷ್ಟು ಬೆಳಕು ಎಲ್ಲೆಡೆ ಹಬ್ಬುತ್ತದೆ. ದೀಪ ಅಂದರೆ ಬೆಳಕು. ಬೆಳಕು ಅಂದರೆ ಜ್ಞಾನ. ಅಜ್ಞಾನದ ಅಂಧಕಾರ ನಿವಾರಿಸಿ ಜ್ಞಾನ ಎಂಬ […]

Read More

ರಾಕ್ಷಸೀ ಮನೋಭಾವ ದೂರವಾಗಿ ನಮ್ಮಲ್ಲಿ ಮಾನವೀಯ ಮೌಲ್ಯ ಬೆಳೆಯಲಿ

“ರಾಕ್ಷಸೀ ಮನೋಭಾವ ದೂರವಾಗಿ ನಮ್ಮಲ್ಲಿ ಮಾನವೀಯ ಮೌಲ್ಯ ಬೆಳೆಯಲಿ” ಶ್ರೀ ಸಂಸ್ಥಾನದಲ್ಲಿ ಜರಗಿದ ಶ್ರೀ ಲಲಿತಾ ಪಂಚಮಿ ಮಹೋತ್ಸವದ ಧರ್ಮಸಭೆಯಲ್ಲಿ ಸಾಧಕರಿಗೆ ಕಲಾಸಿರಿ ಪ್ರಶಸ್ತಿ ಪ್ರಧಾನ ಮಾಡಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ “ನವರಾತ್ರಿಯ ಪರ್ವಕಾಲದ ಸಂಭ್ರಮದಲ್ಲಿ ನಾವಿದ್ದೇವೆ. ನಾವೆಲ್ಲರೂ ವಿಜಯಿಗಳಾಗಬೇಕು. ಭಾರತ, ಭಾರತೀಯತೆ ನಾಶವಾಗದೆ ಇರುವಂತದ್ದು. ನವರಾತ್ರಿ ಸಂದರ್ಭದಲ್ಲಿ ನಮ್ಮ ಅಂತರಂಗದ ರಾಕ್ಷಸೀ ಪ್ರವೃತ್ತಿಯನ್ನು ದೂರೀಕರಿಸಿಕೊಳ್ಳಬೇಕು. ಕಲಾವಿದರನ್ನು ಗೌರವಿಸುವ ಕೆಲಸ ನಿರಂತರವಾಗಿ ಆಗುತ್ತಿದೆ. ನಮ್ಮಲ್ಲಿ ಮಾನವೀಯ ಮೌಲ್ಯ ಬೆಳೆಸುವ ಕೆಲಸವಾಗಬೇಕು. ಮಾನವೀಯತೆಯ ಪಾಠ ಮನೆಯಿಂದಲೇ ಆರಂಭವಾಗಬೇಕು. ಸ್ಪರ್ಧಾತ್ಮಕ […]

Read More

ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಂಸ್ಕಾರ ಅವಶ್ಯ

“ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಂಸ್ಕಾರ ಅವಶ್ಯ”   ಶರದೃತು ಸಂಸ್ಕಾರ ಶಿಬಿರ ಸಮಾರೋಪ ಸಮಾರಂಭದಲ್ಲಿ – ಒಡಿಯೂರು ಶ್ರೀ ಆಶೀರ್ವಚನ ಅ.10: “ಮಾನವೀಯತೆಯ ಕೊಂಡಿ ಬಲವಾಗಿಸುವ ಕಾರ್ಯ ಸಂಸ್ಕಾರದಿಂದ ಸಾಧ್ಯ. ವ್ಯಕ್ತಿ ವ್ಯಕ್ತಿಯ ನಡುವೆ ಅಂತರವಿರದಂತೆ ಸಂಘಟಿತರಾಗಿರಲು ಮಾನವೀಯತೆ ಮೇಳೈಸಬೇಕು. ನಮ್ಮಲ್ಲಿ ಆತ್ಮೀಯ ಭಾವ ತುಂಬಿಕೊಳ್ಳಲು ಮನಸ್ಸಿನ ವಿಕಾಸ ಆಗಬೇಕು. ಮನಸ್ಸಿನಲ್ಲಿ ಏಕಾಗ್ರತೆ ಇದ್ದಾಗ ಆರೋಗ್ಯವು ಸ್ಥಿರವಾಗಿರುತ್ತದೆ. ಚಲಿಸುವ ದೇಹಕ್ಕೆ ಆರೋಗ್ಯ ಚೆನ್ನಾಗಿರಬೇಕಾದರೆ ಮನಸ್ಸಿಗೆ ದೃಢತೆ ಬೇಕು. ಸಂತೋಷ ಮತ್ತು ಆನಂದ ನಮ್ಮ ಎರಡು ಕಣ್ಣುಳಿದ್ದಂತೆ. ನೋಡುವುದು […]

Read More

ಸಂಸ್ಕಾರ ಶಿಬಿರಗಳಿಂದ ಪ್ರತಿಭೆಗಳ ಅನಾರವಣ

“ಸಂಸ್ಕಾರ ಶಿಬಿರಗಳಿಂದ ಪ್ರತಿಭೆಗಳ ಅನಾರವಣ” ಒಡಿಯೂರು ಶ್ರೀ ಸಂಸ್ಥಾನದಲ್ಲಿ ‘ಶರದೃತು ಸಂಸ್ಕಾರ ಶಿಬಿರ’ವನ್ನು ಉದ್ಘಾಟಿಸಿ  ಒಡಿಯೂರು ಶ್ರೀ ಆಶೀರ್ವಚನ “ಉತ್ಸಾಹ ಮತ್ತು ಉಲ್ಲಾಸ ಇವೆರಡೂ ಬದುಕಿನಲ್ಲಿ ಬೇಕು. ಆಗ ನಮ್ಮಲ್ಲಿ ಖಿನ್ನತೆಗೆ, ಚಿಂತೆಗೆ ಅವಕಾಶವಿರುವುದಿಲ್ಲ. ನಮ್ಮನ್ನು ನಾವು ಸದ್ವಿಚಾರಗಳಲ್ಲಿ ತೊಡಗಿಸುವ ಜೊತೆಗೆ ನಿತ್ಯ ಚಟುವಟಿಕೆಗಳಲ್ಲಿ ನಿರತರಾದಾಗ ಪ್ರಬುದ್ಧರಾಗುತ್ತೇವೆ. ಸಂಸ್ಕಾರದಿಂದ ಜೀವನರಥಕ್ಕೊಂದು ಪಥ ದೊರೆಯುತ್ತದೆ. ನಮ್ಮ ಮಾತು ಮನಸ್ಸು ಜೊತೆಯಾಗಿರಬೇಕು” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಆಶೀರ್ವಚನ ನೀಡಿದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ […]

Read More

ಅ.8ರಿಂದ 10ರ ತನಕ ರಂದು ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಶಾಲಾ ಮಕ್ಕಳಿಗೆ ಶರದೃತು ಸಂಸ್ಕಾರ ಶಿಬಿರ

ಅ.8ರಿಂದ 10ರ ತನಕ ರಂದು ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಶಾಲಾ ಮಕ್ಕಳಿಗೆ ಶರದೃತು ಸಂಸ್ಕಾರ ಶಿಬಿರ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವತಿಯಿಂದ ಅ.8ರಿಂದ 10ರ ತನಕ ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಶಾಲಾ ಮಕ್ಕಳಿಗೆ ಶರದೃತು ಸಂಸ್ಥಾರ ಶಿಬಿರವನ್ನು ಆಯೋಜಿಸಲಾಗಿದೆ. ಅ.8ರಂದು ಆದಿತ್ಯವಾರ ಬೆಳಿಗ್ಗೆ ಶಿಬಿರವನ್ನು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಉದ್ಘಾಟಿಸಲಿದ್ದಾರೆ. ಜಿಲ್ಲೆಯ ಬೇರೆ ಬೇರೆ ಸಂಪನ್ಮೂಲ ವ್ಯಕ್ತಿಗಳು ಯೋಗ, ರಂಗಕಲೆ, ಚಿತ್ರಕಲೆ, ಕರಕುಶಲ(ಪೇಪರ್ ಕ್ರಾಫ್ಟ್) ಮುಂತಾದ ತರಬೇತಿಗಳನ್ನು ನೀಡಲಿರುವರು.

Read More

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top