+91 8255-266211
info@shreeodiyoor.org

ಮಾತಾಪಿತರ ಸೇವೆ

‘ಮಾತೃ ದೇವೋ ಭವ ; ಪಿತೃ ದೇವೋ ಭವ’

ಎನ್ನುವ ಆರ್ಯೋಕ್ತಿಯನ್ನು ಅಕ್ಷರಶಃ ಪಾಲಿಸುತ್ತಿರುವವರು ಪೂಜ್ಯ ಶ್ರೀಗಳು. ನಿತ್ಯ ನೈಮಿತ್ತಿಕ, ದೇವತಾರಾಧನೆ, ಸಾರ್ವಜನಿಕ ಭೇಟಿಯ ಕಾರ್ಯ ಬಾಹುಳ್ಯ, ಅವಿರತ ಕಾರ್ಯಕ್ರಮಗಳು, ದೇವಳದ ಅಭಿವೃದ್ಧಿ ಕಾರ್ಯಕ್ರಮಗಳು, ನಡೆಯುತ್ತಲೇ ಇದ್ದರೂ ಪೂಜ್ಯ ಸ್ವಾಮೀಜಿ ದಿನದಲ್ಲಿ ಎರಡಾವರ್ತಿ ಗುರುನಿಲಯಕ್ಕೆ ಹೋಗುವುದನ್ನು ತಪ್ಪಿಸುವುದಿಲ್ಲ.

ಎಳೆಯ ಮಗುವಿನಂತೆ ಜನನಿ – ಜನಕರನ್ನು ನಕ್ಕು ನಗಿಸುತ್ತಾ, ಅವರ ಸೇವಾ – ಶುಶ್ರೂಷೆ, ಆರೋಗ್ಯದ ಕಡೆಗೆ ಗಮನ ಹರಿಸುತ್ತಾ ಇದು ನಿತ್ಯ ನೈಮಿತ್ತಿಕವೇ ಅನ್ನುತ್ತಾರೆ. “ನಾನು ನನ್ನ ತಾಯ್ತ0ದೆಯ ಸೇವೆ ಮಾಡದೆ ಕುಳಿತರೆ ಇತರರಿಗೆ ಅದನ್ನು ಹೇಳುವ ಹಕ್ಕು ನನಗಿಲ್ಲ.” ಎಂದು ಸ್ವ-ವಿಮರ್ಶೆ ಮಾಡುತ್ತಾರೆ. ಇತರರಿಗೆ ಸಂತೋಷ ನೀಡುವುದರಲ್ಲಿ ತಾನು ಆನಂದವನ್ನು ಅನುಭವಿಸುವ ಅಪೂರ್ವ ವ್ಯಕ್ತಿತ್ವ ಪೂಜ್ಯ ಶ್ರೀಗಳದು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top