+91 8255-266211
info@shreeodiyoor.org

“ಜೀವನ ರಥದ ಪಥವೇ ಧರ್ಮ” ಶ್ರೀಒಡಿಯೂರು ರಥೋತ್ಸವದ ಧರ್ಮಸಭೆಯಲ್ಲಿ-ಒಡಿಯೂರು ಶ್ರೀ

“ಕೃಷಿ ಸಂಸ್ಕøತಿ-ಋಷಿ ಸಂಸ್ಕøತಿ ಸಮಾನವಾಗಿ ಸಾಗಬೇಕು. ಆತ್ಮತತ್ತ್ವ ಮಾತ್ರವೇ ಸತ್ಯ. ಜೀವನ ರಥದ ಪಥವೇ ಧರ್ಮ. ಆಗ ಉದ್ದೇಶಿತ ಗುರಿ ತಲಪಲು ಸಾಧ್ಯ. ಆತ್ಮೋನ್ನತಿಯ ಕಡೆಗೆ ಜೀವನರಥವನ್ನು ಎಳೆಯಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜರಗಿದ ಶ್ರೀ ಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆಯ ಧರ್ಮಸಭೆಯನ್ನು ಉದ್ಘಾಟಿಸಿ ಆಶೀರ್ವಚನವಿತ್ತರು.

ವೇದಿಕೆಯಲ್ಲಿ ಪರಮಪೂಜ್ಯ ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿಯವರು ಆಶೀರ್ವಚನಗೈದು ಆತ್ಮಶಕ್ತಿ ಉದ್ದೀಪನದ ಉದ್ದೇಶವನ್ನಿರಿಸಿಕೊಂಡು ಶ್ರೀ ಸಂಸ್ಥಾನದಲ್ಲಿ ಪಂಚಪರ್ವಗಳನ್ನು ಶ್ರೀಗಳ ಮಾರ್ಗದರ್ಶನದಂತೆ ನಡೆಸಲಾಗುತ್ತಿದೆ” ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪುತ್ತೂರು ಶಾಸಕ ಶ್ರೀ ಸಂಜೀವ ಮಠಂದೂರು ಅವರು ಮಾತನಾಡಿ “ನಿಜ ಅರ್ಥದ ಗ್ರಾಮವಿಕಾಸ ಒಡಿಯೂರು ಸಂಸ್ಥಾನದ ಮೂಲಕ ನಡೆದಿದೆ. ತುಳುನಾಡಿನ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಒಡಿಯೂರು ಸಂಸ್ಥಾನ ವಿಶೇಷ ಮುತುವರ್ಜಿ ವಹಿಸಿದೆ. ತುಳುವಿನ ಪರಂಪರೆ ಉಳಿಸುವ ಕಾರ್ಯ ಇಂತಹ ತುಳುನಾಡ್ದ ಜಾತ್ರೆಯಿಂದ ಸಾಧ್ಯ” ಎಂದರು.

ಬಂಟ್ವಾಳ ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಇವರು ಮಾತನಾಡಿ “ದೇವರಿಗೆ ಭಯ ಪಡುವ ಅಗತ್ಯವಿಲ್ಲ. ಪ್ರೀತಿ ಭಕ್ತಿಯೊಂದಿದ್ದರೆ ಸಾಕು. ವಿದ್ಯಾವಂತ ಮಕ್ಕಳನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು” ಎಂದರು.
ಕ್ಯಾಂಪ್ಕೋ ಅಧ್ಯಕ್ಷ ಶ್ರಿ ಎಸ್.ಆರ್. ಸತೀಶ್ಚಂದ್ರ ಅವರು ಮಾತನಾಡಿ “ದೇವರು, ದೇಶ, ಧರ್ಮವನ್ನು ಜೀವನ ಪದ್ಧತಿಯನ್ನಾಗಿ ಸ್ವೀಕರಿಸಿದ ಜಗತ್ತಿನ ಏಕೈಕ ದೇಶ ಭಾರತ. ಸರಕಾರದಿಂದ ಆಗಬೇಕಾದಂತಹ ಕಾರ್ಯ ಒಂದು ಸಂತರಿಂದ ಆಗುತ್ತಿದೆ ಎಂದರೆ ಅದು ಉತ್ತಮ ಬೆಳವಣಿಗೆಯಾಗಿದೆ. ನಮ್ಮ ದೇಶ ಇಂದು ಸೂಪರ್ ಪವರ್ ದೇಶದ ಕಡೆಗೆ ಹೋಗುತ್ತಿದೆ” ಎಂದರು.

ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಶ್ರೀ ಅಜಿತ್‍ಕುಮಾರ್ ಹೆಗ್ಡೆ ಶಾನಾಡಿ, ಬರೋಡ ತುಳುಕೂಟದ ಅಧ್ಯಕ್ಷ ಶ್ರೀ ಶಶಿಧರ ಶೆಟ್ಟಿ, ಅಂಕಲೇಶ್ವರದ ಹೈಟೆಕ್ ಇಲೆಕ್ಟ್ರಿಫಿಕೇಶನ್ ಇಂಜಿನಿಯರಿಂಗ್ (ಪ್ರೈ) ಲಿ.ನ ಆಡಳಿತ ನಿರ್ದೇಶಕ ಶ್ರೀ ರವಿನಾಥ ವಿ. ಶೆಟ್ಟಿ, ಅಂಕಲೇಶ್ವರ ತುಳುಕೂಟದ ಅಧ್ಯಕ್ಷ ಶ್ರೀ ಶಂಕರ ಶೆಟ್ಟಿ, ಮುಂಬೈನ ಉದ್ಯಮಿ ಶ್ರೀ ವಾಮಯ್ಯ ಬಿ. ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಲ|ಎಂ.ಜೆ.ಎಫ್.| ಎ. ಸುರೇಶ್ ರೈ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಎ. ಅಶೋಕ್ ಕುಮಾರ್, ಮುಂಬೈ ಘಟಕದ ಅಧ್ಯಕ್ಷ ಶ್ರೀ ಕೃಷ್ಣ ಎಲ್. ಶೆಟ್ಟಿ, ದಾವಣಗೆರೆ ಘಟಕದ ಅಧ್ಯಕ್ಷ ಶ್ರೀ ಸಿದ್ದರಾಮಪ್ಪ, ತಿರುವನಂತಪುರ ಘಟಕದ ಶ್ರೀ ಅಜಿತ್ ಕುಮಾರ್ ಪಂದಳಮ್, ಹೂವಿನಹಡಗಲಿ ಘಟಕದ ಶ್ರೀ ನೀಲಕಂಠಪ್ಪ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ, ಮುಂಬೈ ಘಟಕದ ಅಧ್ಯಕ್ಷೆ ಶ್ರೀಮತಿ ರೇವತಿ ವಿ. ಶೆಟ್ಟಿ, ದಾವಣಗೆರೆ ಘಟಕದ ಶ್ರೀಮತಿ ಸುಮಾ ರಾಜಶೇಖರ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಅಂತರಾಷ್ಟ್ರೀಯ ಕ್ರಿಡಾಪಟು ಶ್ರೀ ಅನೀಶ್ ಶೆಟ್ಟಿ ಪಟ್ಲಗುತ್ತು ಇವರಿಗೆ ಶ್ರೀ ಗುರುದೇವಾನುಗ್ರಹ ಯು ಪುರಸ್ಕಾರ ನೀಡಿ ಗೌರವಿಸಲಾಯಿತು.

ಕು| ನಿತ್ಯಶ್ರೀ ಎಸ್.ರೈ ಆಶಯಗೀತೆ ಹಾಡಿದರು. ಹಿರಿಯ ಪತ್ರಕರ್ತ ಶ್ರೀ ಯಶವಂತ ಸ್ವಾಗತಿಸಿದರು. ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮುಂಬೈ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಪೇಟೆಮನೆ ಪ್ರಕಾಶ್ ಕೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ ವಂದಿಸಿದರು.

ವೇ|ಮೂ| ಚಂದ್ರಶೇಖರ ಉಪಾಧ್ಯಾಯಯರ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ನಾಟ್ಯವಿದ್ಯಾನಿಲಯ (ರಿ.) ಕುಂಬಳೆ ಇದರ ವಿದುಷಿ ಶ್ರೀಮತಿ ವಿದ್ಯಾಲಕ್ಷ್ಮೀ ಕುಂಬಳೆ ಅವರ ಶಿಷ್ಯವೃಂದದವರಿಂದ ‘ನೃತ್ಯ ಸಂಭ್ರಮ’ ಪ್ರದರ್ಶನಗೊಂಡಿತು. ಬಳಿಕ ಶ್ರೀ ಪುತ್ತೂರು ಜಗದೀಶ್ ಆಚಾರ್ಯ ಬಳಗದವರಿಂದ ಭಕ್ತಿಗಾನ ವೈಭವ ನಡೆಯಿತು.

ರಾತ್ರಿ ರಂಗಪೂಜೆಯ ಬಳಿಕ ಶ್ರೀ ದತ್ತಂಜನೇಯ ದೇವರ ರಥೋತ್ಸವವು ಚೆಂಡೆಮೇಳ, ಚಿಂಗಾರಿಮೇಳ, ಕುಣಿತ ಭಜನೆ, ತಾಲೀಮು ಪ್ರದರ್ಶನ, ಕೀಲುಬೊಂಬೆ ಕುಣಿತ, ವಿವಿಧ ಜನಾಕರ್ಷಕ ಸ್ತಬ್ಧಚಿತ್ರಗಳು, ಭಜನೆ, ಸಿಡಿಮದ್ದಿನ ಪ್ರದರ್ಶನದೊಂದಿಗೆ ವೈಭವೋಪೇತವಾಗಿ ಸಂಪನ್ನಗೊಂಡಿತು.

ಕನ್ಯಾನದಲ್ಲಿ ಶ್ರೀ ಶ್ರೀಧರ ಶೆಟ್ಟಿ ಗುಬ್ಯಗುತ್ತು ಇವರ ಪ್ರಾಯೋಜಕತ್ವದಲ್ಲಿ ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ಇವರಿಂದ ಸಾಂಸ್ಕøತಿಕ ವೈವಿಧ್ಯ, ಕಮ್ಮಾಜೆಯಲ್ಲಿ ಅಮ್ಮಾ ಗ್ರೂಪ್ಸ್ ನೇತೃತ್ವದಲ್ಲಿ ರಸಮಂಜರಿ, ಹಾಗೂ ಮಿತ್ತನಡ್ಕದಲ್ಲಿ ಹಿಂದೂ ಸೇವಾ ಸಮಿತಿಯ ಸಂಯೋಜನೆಯಲ್ಲಿ ಸಿಂಚನ ಮ್ಯೂಸಿಕಲ್ಸ್ ಪೆರ್ಲ ಇವರಿಂದ ಭಕ್ತಿ ರಸಮಂಜರಿ ಹಾಗೂ ಪುಟಾಣಿಗಳಿಂದ ನೃತ್ಯವೈವಿಧ್ಯ ಕಾರ್ಯಕ್ರಮವು ನಡೆಯಿತು.

ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು ಘಟಕ ಮತ್ತು ಮುಂಬೈ ಘಟಕ ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಒಡಿಯೂರು ಘಟಕ ಹಾಗೂ ಮುಂಬೈ ಘಟಕ, ಒಡಿಯೂರು ಶ್ರೀವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಸಿಬ್ಬಂದಿಗಳು, ಶ್ರೀ ನಗ್ರಿಗುತ್ತು ರೋಹಿತ್ ಡಿ. ಶೆಟ್ಟಿ, ಪುಣೆ ಇವರುಗಳ ಪ್ರಾಯೋಜಕತ್ವದ ಸ್ತಬ್ಧಚಿತ್ರಗಳು ಕಣ್ಮನ ಸೆಳೆಯಿತು.

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top