+91 8255-266211
info@shreeodiyoor.org

ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಮಂಜೇಶ್ವರ ವಲಯ ಸಮಿತಿ ಸರಣಿ ಕಾರ್ಯಕ್ರಮಗಳಿಗೆ ಚಾಲನೆ


‘ಜನಸೇವೆಯೇ ಭಗವಂತನಿಗೆ ಪ್ರೀತ್ಯರ್ಥ’

ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಮಂಜೇಶ್ವರ ವಲಯ ಸಮಿತಿ ಸರಣಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಪೂಜ್ಯ ಒಡಿಯೂರು ಶ್ರೀ

ಮಂಜೇಶ್ವರ, ಫೆ. 7: “ಮನುಷ್ಯನ ಬದುಕು ನಿಂತ ನೀರಾಗದೆ ಸದಾ ಹರಿಯುತ್ತಿರುವ ನದಿಯಂತಿರಬೇಕು. ಜ್ಞಾನದ ಕೀಲಿಕೈ ಅನುಭವವಾಗಿದೆ. ಸಮಸ್ಯೆಗಳ ಅನುಭವಗಳಿಂದ ಜ್ಞಾನದ ವೃದ್ಧಿ ಸಾಧಿಸಬೇಕು. ಮನುಷ್ಯ ತನ್ನ ಹುಟ್ಟು ಮತ್ತು ಸಾವಿನ ಅರಿವಿನೊಂದಿಗೆ ಸನ್ಮಾರ್ಗದತ್ತ ಸಾಗುವ ಚಿಂತನೆಯನ್ನು ಮಾಡಬೇಕು. ಧರ್ಮವನ್ನು ವಿಕೃತಿಗೊಳಿಸಲು ಪ್ರಯತ್ನ ನಡೆದಾಗ ಮಸಿ ಬಳಿಯುವಂತ ಘಟನೆ ನಡೆಯಬೇಕು. ಧರ್ಮದ ಚೌಕಟ್ಟಿನೊಳಗೆ ಭಗವಂತನಿಗೆ ಮೆಚ್ಚುಗೆಯಾಗುವಂತಹ ಬಾಳ್ವೆ ನಡೆಸಬೇಕು. ಅದರಲ್ಲೂ ಜನರ ಸೇವೆ ದೇವರಿಗೆ ಅತ್ಯಂತ ಪ್ರೀತ್ಯರ್ಥವಾದುದು. ಸಮಾಜದ ಕಡೆಯ ವ್ಯಕ್ತಿಯೂ ಸುಂದರ ಬದುಕು ನಡೆಸುವಂತಾಗಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಮಂಜೇಶ್ವರ ಜಮ್ಮದಮನೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ಜರಗಿದ ಷಷ್ಠ್ಯಬ್ದ ಸಂಭ್ರಮ ಮಂಜೇಶ್ವರ ವಲಯ ಸಮಿತಿಯ ಸರಣಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಆಶೀರ್ವಚನಗೈದರು.

ಉಪಸ್ಥಿತರಿದ್ದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ “ಸಮಾಜದಲ್ಲಿ ಸಾಧು-ಸಂತರು ಲೈಟ್‍ಹೌಸ್‍ನಂತೆ ಬೆಳಕು ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ನೀರಿನಾಳದಲ್ಲಿ ಮೀನುಗಳು ಸಂಚರಿಸಿದಂತೆ ಸಂತರು ಸಮಾಜದ ಮೂಲೆ ಮೂಲೆಗಳಲ್ಲಿ ಸಂಚರಿಸಿ ಅಂಕು-ಡೊಂಕುಗಳ ತಿದ್ದುವಿಕೆಗೆ ಕಾರಣರಾಗುತ್ತಾರೆ. ಮಾರ್ಗದರ್ಶನದ ಕೊರತೆಯಿಂದ ಜನತೆ ಅಧರ್ಮದ ಹಾದಿ ಹಿಡಿಯುತ್ತಿದ್ದಾರೆ. ಒಡಿಯೂರು ಶ್ರೀಗಳ ಷಷ್ಠ್ಯಬ್ದ ಕಾರ್ಯಕ್ರಮಗಳು ಜನರ ಮನಸ್ಸಿನಲ್ಲಿ ಜ್ಞಾನವನ್ನು ಅರಳಿ, ಧರ್ಮದ ಕಡೆಗೆ ಮರಳುವಂತಹ ಪ್ರಭಾವವನ್ನು ಬೀರಲಿ” ಎಂದರು.

ಉಪಸ್ಥಿತರಿದ್ದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ “ಸಮಾಜದಲ್ಲಿ ಸಾಧು-ಸಂತರು ಲೈಟ್‍ಹೌಸ್‍ನಂತೆ ಬೆಳಕು ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ನೀರಿನಾಳದಲ್ಲಿ ಮೀನುಗಳು ಸಂಚರಿಸಿದಂತೆ ಸಂತರು ಸಮಾಜದ ಮೂಲೆ ಮೂಲೆಗಳಲ್ಲಿ ಸಂಚರಿಸಿ ಅಂಕು-ಡೊಂಕುಗಳ ತಿದ್ದುವಿಕೆಗೆ ಕಾರಣರಾಗುತ್ತಾರೆ. ಮಾರ್ಗದರ್ಶನದ ಕೊರತೆಯಿಂದ ಜನತೆ ಅಧರ್ಮದ ಹಾದಿ ಹಿಡಿಯುತ್ತಿದ್ದಾರೆ. ಒಡಿಯೂರು ಶ್ರೀಗಳ ಷಷ್ಠ್ಯಬ್ದ ಕಾರ್ಯಕ್ರಮಗಳು ಜನರ ಮನಸ್ಸಿನಲ್ಲಿ ಜ್ಞಾನವನ್ನು ಅರಳಿ, ಧರ್ಮದ ಕಡೆಗೆ ಮರಳುವಂತಹ ಪ್ರಭಾವವನ್ನು ಬೀರಲಿ” ಎಂದರು.

ಈ ಸಮಾರಂಭದಲ್ಲಿ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಅವರು ಹಾಡಿರುವ ಶ್ರೀ ಹನುಮಾನ್ ಚಾಲೀಸಾ ಧ್ವನಿಸುರುಳಿ ಹಾಗೂ ಪ್ರೊ. ವಿ.ಬಿ. ಅರ್ತಿಕಜೆಯವರು ಕನ್ನಡಕ್ಕೆ ಅನುವಾದಿಸಿದ ಶ್ರೀ ಹನುಮಾನ್ ಚಾಲೀಸಾ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಬಳಿಕ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಶ್ರೀರಾಮ ತಾರಕ ಮಂತ್ರ ಹಾಗೂ ಹನುಮಾನ್ ಚಾಲೀಸಾ ಪಠಣ ನೆರವೇರಿಸಿದರು. 

ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಮಂಜೇಶ್ವರ ವಲಯ ಘಟಕವನ್ನು ತೆಂಗಿನ ತೆನೆ ಅರಳಿಸುವ ಮೂಲಕ ಉದ್ಘಾಟಿಸಿದರು. ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ನವನೀತ ಶೆಟ್ಟಿ ಕದ್ರಿ, ಕೋಶಾಧಿಕಾರಿ ಶ್ರೀ ಎ. ಸುರೇಶ್ ರೈ, ಸಂಘಟನಾ ಕಾರ್ಯದರ್ಶಿ ಶ್ರೀ ಚಂದ್ರಹಾಸ ಶೆಟ್ಟಿ ರಂಗೋಲಿ ಉಪಸ್ಥಿತರಿದ್ದರು.

ಮಂಜೇಶ್ವರ ವಲಯದ ಪೈವಳಿಕೆ, ಮೀಂಜ, ಮಂಜೇಶ್ವರ, ಮಂಗಲ್ಪಾಡಿ ಹಾಗೂ ವರ್ಕಾಡಿ ಪಂಚಾಯತ್‍ಗಳ ಕಾರ್ಯಕ್ರಮಗಳ ರೂಪುರೇಷೆಗಳನ್ನು ವಿವರಿಸಲಾಯಿತು.

ಕಾರ್ಯಕ್ರಮದಂಗವಾಗಿ ವಿವಿಧ ಭಜನ ಮಂಡಳಿಗಳಿಂದ ಕುಣಿತ ಭಜನೆ ನಡೆಯಿತು. ಮಂಜೇಶ್ವರ ವಲಯ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀಮತಿ ಹರಿಣಾಕ್ಷಿ ಶಶಿಧರ ಶೆಟ್ಟಿ ಹಾಗೂ ಶ್ರೀಮತಿ ಸಾಯೀಶ್ವರೀ ಡಿ. ಶೆಟ್ಟಿ ಪ್ರಾರ್ಥನೆ ಹಾಡಿದರು. ಮಂಜೇಶ್ವರ ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಅರವಿಂದಾಕ್ಷ ಭಂಡಾರಿ ಸ್ವಾಗತಿಸಿ, ಶ್ರೀ ಗಂಗಾಧರ ಕೊಂಡೆವೂರು ವಂದಿಸಿದರು. ಶ್ರೀ ಹರೀಶ್ ಶೆಟ್ಟಿ ಮಾಡ ಕಾರ್ಯಕ್ರಮ ನಿರೂಪಿಸಿದರು.

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top