+91 8255-266211
info@shreeodiyoor.org

“ದೇಶದ ಸಂಸ್ಕೃತಿಯನ್ನು ಯುವಪೀಳಿಗೆಗೆ ಹಸ್ತಾಂತರಿಸುವ ಕಾರ್ಯವಾಗಲಿ” ಸ್ವಾತಂತ್ರ್ಯ ದಿನಾಚರಣೆ – ಧ್ವಜಾರೋಹಣಗೈದು – ಒಡಿಯೂರು ಶ್ರೀ ಸಂದೇಶ

“ಭಾರತ ಎನ್ನುವ ಹೆಸರಿನಲ್ಲಿಯೇ ಅದರ ಸಂಸ್ಕøತಿ ಅಡಗಿದೆ. ನಾವೆಲ್ಲ ಅಮೃತಪುತ್ರರು. ನಮಗೆಲ್ಲ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುವ ಯೋಗ ಸಿಕ್ಕಿದೆ. ಈ ಸಂದರ್ಭ ದೇಶಕ್ಕಾಗಿ ಬಲಿದಾನಗೈದ ಸೈನಿಕರನ್ನು ಸ್ಮರಿಸುವುದೂ ನಮ್ಮ ಕರ್ತವ್ಯ. ಭಾರತ ದೇಶದ ಮೌಲ್ಯಗಳನ್ನು ಉಳಿಸಲು ದೇಶದ ಸಂಸ್ಕøತಿಯನ್ನು ಯುವಪೀಳಿಗೆಗೆ ಹಸ್ತಾಂತರಿಸುವ ಕಾರ್ಯವಾಗಬೇಕು. ಯುವಕರಲ್ಲಿ ರಾಷ್ಟ್ರಪ್ರೇಮದ ಬೀಜ ಬಿತ್ತಬೇಕು. ದುಶ್ಚಟಮುಕ್ತ ಸಮಾಜವಾಗಬೇಕಾದರೆ ಯುವಕರು ಜಾಗೃತರಾಗಬೇಕು. ವ್ಯಕ್ತಿ ವ್ಯಕ್ತಿತ್ವಪೂರ್ಣವಾಗಿದ್ದಾಗ ಆದರ್ಶ ರಾಷ್ಟ್ರ ನಿರ್ಮಾಣ ಸಾಧ್ಯ. ರಾಮ ಎಂದರೆ ರಾಷ್ಟ್ರ. ರಾಷ್ಟ್ರ ಎಂದರೆ ರಾಮ. ರಾಮ ಪ್ರೇಮದ ಜೊತೆಗೆ ರಾಷ್ಟ್ರ ಪ್ರೇಮವೂ ಬೇಕು. ರಾಷ್ಟ್ರ – ರಾಷ್ಟ್ರದ ಸಂವಿಧಾನಕ್ಕೆ ಗೌರವ ಕೊಡುವ ಜೊತೆಗೆ ಮಕ್ಕಳನ್ನು ಸಿದ್ಧಗೊಳಿಸಬೇಕು. ಸತ್ಪ್ರಜೆಗಳಿಗೆ ಶಕ್ತಿ ನೀಡುವ ಕಾರ್ಯವಾಗಬೇಕು ” ಎಂದು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಮತ್ತು ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಅಂಗವಾಗಿ ಶ್ರೀ ಸಂಸ್ಥಾನದಲ್ಲಿ ಧ್ವಜಾರೋಹಣಗೈದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿದರು.

ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಉಪಸ್ಥಿತರಿದ್ದರು. ಈ ಸುಸಂದರ್ಭ ಕರೋಪಾಡಿ ಗ್ರಾಮ ಪಂಚಾಯತ್‍ನ ಸದಸ್ಯರುಗಳಾದ ಶ್ರೀ ರಘುನಾಥ ಶೆಟ್ಟಿ ಪಟ್ಲ, ಶ್ರೀ ಜಯರಾಮ ನಾಯಕ್ ಮಿತ್ತನಡ್ಕ, ಶ್ರೀ ಶಶಾಂಕ್ ಭಟ್ ಪದ್ಯಾಣ, ಒಡಿಯೂರುದ ತುಳುಕೂಟದ ಅಧ್ಯಕ್ಷ ಶ್ರೀ ಯಶವಂತ ವಿಟ್ಲ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಂಯೋಜಕಿ ಶ್ರೀಮತಿ ಲೀಲಾ, ಕಛೇರಿ ಸಿಬ್ಬಂದಿ ಕು| ಪವಿತ್ರಾ, ಸೇವಾದೀಕ್ಷಿತರಾದ ಶ್ರೀ ಬಾಲಕೃಷ್ಣ ಮೇಲಂಟ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ, ಶ್ರೀ ಸಂಸ್ಥಾನದ ಕಾರ್ಯನಿರ್ವಾಹಕ ಶ್ರೀ ಪದ್ಮನಾಭ ಒಡಿಯೂರು ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ಶ್ರೀ ಜಯಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ದೈಹಿಕ ಶಿಕ್ಷಕ ಶ್ರೀ ಉದಯಕುಮಾರ್ ರೈ ಧ್ವಜವಂದನೆ ಮಾಡಿಸಿದರು. ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಎಲ್ಲಾ ಅಧ್ಯಾಪಕ ವೃಂದದವರು ಭಾಗವಹಿಸಿದ್ದರು.

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top