+91 8255-266211
info@shreeodiyoor.org

‘ಶಾಲೆಗಳ ಮೂಲಕ ರಾಷ್ಟ್ರ ಕಟ್ಟುವ ಕಾಯಕ ನಡೆಯಬೇಕು’ – ಒಡಿಯೂರು ಶ್ರೀ

 

‘ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ’ದ ವಾರ್ಷಿಕೋತ್ಸವವು ವಿಜೃಂಭಣೆಯಿಂದ ದಿನಾಂಕ 25.11.2019ನೇ ಸೋಮವಾರದಂದು ನಡೆಯಿತು.

ಪೂಜ್ಯ ಸಾಧ್ವಿ ಶ್ರೀ ಮಾತಾನಂದಮಯಿಯವರು ದೀಪೋಜ್ವಲನೆಗೈದು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವದಿಸಿದರು. ಬಳಿಕ ಕ್ರಮವಾಗಿ ಶ್ರೀ ಗುರುದೇವ ಗುರುಕುಲದಿಂದ ತೊಡಗಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ವಿವಿಧ ಮನರಂಜನಾ ಕಾರ್ಯಕ್ರಮಗಳೊಂದಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.

11.00 ಗಂಟೆಯಿಂದ ಜರಗಿದ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ದಿವ್ಯ ಉಪಸ್ಥಿತಿಯನ್ನು ಕರುಣಿಸಿ, ‘ಶಾಲೆಗಳ ಮೂಲಕ ರಾಷ್ಟ್ರ ಕಟ್ಟುವ ಕಾಯಕ ನಡೆಯಬೇಕು. ಭಾರತೀಯ ಸ೦ಸ್ಕೃತಿಯನ್ನು ಉಳಿಸಿ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಮಕ್ಕಳನ್ನು ಬೆಳೆಸುವಲ್ಲಿ ನಾವು ಎಡವದೆ ಜಾಗರೂಕರಾಗಿರಬೇಕು. ಭಾಷೆಯ ಬಗ್ಗೆ ಅಭಿಮಾನ ಮೂಡಿಸುವುದರೊಂದಿಗೆ ಭಾರತೀಯ ಸ೦ಸ್ಕೃತಿಯ ಬಗ್ಗೆ ಅರಿವನ್ನು ಮೂಡಿಸುವ ಕೆಲಸವನ್ನು ನಾವು ಮಾಡಬೇಕು. ಹೆತ್ತವರು ಕ್ರೀಯಾಶೀಲರಾಗಿದ್ದರೆ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬಿ ಸತ್ಪ್ರಜೆಗಳನ್ನಾಗಿಸುವಲ್ಲಿ ಸಹಕಾರಿಯಾಗುತ್ತದೆ’ ಎಂದು ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅ.ಖ.ಕ. ಚಂದ್ರಶೇಖರ್, ನ್ಯಾಯವಾದಿ ಖಣಟಿ. ಜಯರಾಮ ರೈ, ಹಿರಿಯ ಪತ್ರಕರ್ತರಾದ ಯಶವಂತ ವಿಟ್ಲ, ಕ್ಷೇತ್ರದ ಕಾರ್ಯನಿರ್ವಾಹಕರಾದ ಪದ್ಮನಾಭ ಒಡಿಯೂರು, ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯ ಯೋಜನಾ ನಿರ್ದೇಶಕರಾದ ಕಿರಣ್ ರೈ, ಒಡಿಯೂರು ಶ್ರೀ ಸಹಕಾರಿ ಸೌಹಾರ್ದ ನಿಯಮಿತ ನಿರ್ದೇಶಕರಾದ ತಾರನಾಥ ಶೆಟ್ಟಿ ಒಡಿಯೂರು, ಒಡಿಯೂರು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ ಶೆಟ್ಟಿ, ಮಾತೃಮಂಡಳಿಯ ಸಂಚಾಲಕಿ ಶ್ರೀಮತಿ ಹರಿಣಾಕ್ಷಿ ಪಿ. ಪಕಳ, ಉಪಸಂಚಾಲಕಿ ಶ್ರೀಮತಿ ಲತಾದೇವಿ ಉಪಸ್ಥಿತರಿದ್ದರು. ಶಾಲಾ ಸಂಚಾಕರಾದ ಸೇರಾಜೆ ಗಣಪತಿ ಭಟ್ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀಯುತ ಜಯಪ್ರಕಾಶ ಶೆಟ್ಟಿ ಯವರು ವರದಿ ವಾಚಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಸಂಚಿಕೆ ‘ಗುರುದೇವ ಚಿಣ್ಣರ ಚಿಲುಮೆ’ಯ ಅನಾವರಣವನ್ನು ಪೂಜ್ಯ ಶ್ರೀಗಳವರು ನೆರವೇರಿಸಿದರು. ಸಂಚಿಕೆಯ ಬಗ್ಗೆ ಸಂಪಾದಕಾರಾದ ನಾರಾಯಣ ಮಣಿಯಾಣಿಯವರು ಒಂದೆರಡು ಮಾತುಗಳನ್ನಾಡಿದರು.

ಕಾರ್ಯಕ್ರಮವನ್ನು ಸಂಸ್ಕೃತ ಶಿಕ್ಷಕಿ ನಿವೇದಿತಾ ನಿರೂಪಿಸಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೇಣುಕಾ ಯಸ್. ರೈ ಧನ್ಯವಾದವಿತ್ತರು. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರ ಹೆಸರುಗಳನ್ನು ಅನಿತಾ, ನವಿತಾ, ಜ್ಯೋತಿ ವಾಚಿಸಿದರು. ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರ ಹೆಸರುಗಳನ್ನು ಉದಯ ಕುಮಾರ್ ರೈ, ವೇದಾವತಿ, ಗೀತಾ ವಾಚಿಸಿದರು.

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top