+91 8255-266211
info@shreeodiyoor.org

“ನಾಗಾರಾಧನೆ ಪ್ರಕೃತಿಯ ಆರಾಧನೆ” ನಾಗರ ಪಂಚಮಿ ಮಹೋತ್ಸವದಲ್ಲಿ ಒಡಿಯೂರು ಶ್ರೀ ದಿವ್ಯ ಸಂದೇಶ

“ನಾಗಾರಾಧನೆಯಲ್ಲಿ ಪ್ರಕೃತಿಯ ಆರಾಧನೆಯ ತತ್ತ್ವವಿದೆ. ಸಂಪತ್ತುಗಳ ಅಧಿಪತಿ ನಾಗರಾಜ. ನಾಗಾರಾಧನೆಯ ಹಿಂದೆ ಮೂಲ ಸಂಸ್ಕøತಿಯ ಅಂಶವಿದೆ. ಆಸ್ತಿಕ ಭಾವಕ್ಕೆ ಹೆಚ್ಚು ಗೌರವವಿದೆ. ಪುರಾಣಗಳ ಪ್ರಕಾರ 16000 ಸರ್ಪಸಂಕುಲಗಳಿವೆ. ನಾಗಾರಾಧನೆಯ ಹೆಸರಿನಲ್ಲಿ ಪ್ರಕೃತಿಯ ಉಳಿವಿದೆ. ಪ್ರಕೃತಿಯ ಆರಾಧನೆಯಿಂದ ಆರೋಗ್ಯದ ಹಿತವಿದೆ. ಪ್ರಕೃತಿಯಲ್ಲಿ ಪರಮಾತ್ಮನ ಅಸ್ತಿತ್ವವನ್ನು ಕಾಣಬಹುದು. ಸಹೋದರತ್ವವನ್ನು ಪ್ರತಿನಿಧಿಸುವ ನಾಗರಪಂಚಮಿ ಹಬ್ಬ ನಾಡಿಗೆ ವಿಶೇಷ ಹಬ್ಬವಾಗಿದೆ” ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಾಗರಪಂಚಮಿಯ ಪ್ರಯುಕ್ತ ಸಂಪನ್ನಗೊಂಡ ಸಾಮೂಹಿಕ ಆಶ್ಲೇಷ ಬಲಿಪೂಜೆಯ ಸಂದರ್ಭ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ […]

Read More

‘ಭಗವಂತ ನೀಡಿದ ಆಯುಷ್ಯವನ್ನು ಸನ್ನಡತೆ-ಸತ್ಕರ್ಮದಲ್ಲಿ ಕಳೆಯೋಣ’- ಪೂಜ್ಯ ಶ್ರೀಗಳವರ ಜನ್ಮದಿನೋತ್ಸವದ ಪ್ರಯುಕ್ತ ಗುರುವಂದನಾ ಸಮಾರಂಭದಲ್ಲಿ – ಒಡಿಯೂರು ಶ್ರೀ ಆಶೀರ್ವಚನ

“ತ್ಯಾಗದ ಬದುಕಿನಲ್ಲಿ ನಿಜವಾದ ಸುಖವಿದೆ. ಬದುಕು ಬದುಕಾಗಲು ಅಧ್ಯಾತ್ಮ ಅಗತ್ಯ. ಧರ್ಮದ ಚೌಕಟ್ಟಿನಲ್ಲಿ ಶ್ರೇಯಸ್ಸಿನ ಮಾರ್ಗದಲ್ಲಿ ನಡೆದಾಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಭಗವಂತ ನೀಡಿದ ಆಯುಷ್ಯವನ್ನು ಸನ್ನಡತೆ, ಸತ್ಕರ್ಮದಲ್ಲಿ ಕಳೆಯಬೇಕು. ಆತ್ಮೋನ್ನತಿಯ ಜೊತೆಗೆ ಸಮಾಜೋನ್ನತಿಯೂ ಆಗಬೇಕು. ಆತ್ಮನಿಷ್ಠ ಸಂಸ್ಕøತಿಯಿಂದ ಯಾವುದೇ ಅಪಾಯ ಆಗದು. ಇಂದು ಆಟಿ ಅಮಾವಾಸ್ಯೆಯ ದಿನ. ಸಪ್ತವರ್ಣ(ಹಾಲೆ) ಮರದ ರಸದಲ್ಲಿ ಔಷಧೀಯ ಅಂಶವಿದೆ. ಬದುಕಿಗೆ ಭೀಮ ಬಲ ಬರಲು ಇಂತಹ ಆಚರಣೆಗಳ ಅಗತ್ಯವೂ ಇದೆ. ಕೊರೋನಾದ ಬಗ್ಗೆ ನಿರ್ಲಕ್ಷ್ಯ ಬೇಡ. ಭಯವೂ […]

Read More

ಕೋವಿಡ್ ನಿಯಮ ಅನುಸರಿಸಿ ಜನ್ಮದಿನೋತ್ಸವ (ಗ್ರಾಮೋತ್ಸವ) ಆಚರಣೆ- ಒಡಿಯೂರು ಶ್ರೀ

“ಗುರುಭಕ್ತರು ತಮ್ಮ ತಮ್ಮ ಮನೆಯಲ್ಲೇ ಇದ್ದು ಹನುಮಾನ್ ಚಾಲೀಸಾ ಪಠಣದ ಮೂಲಕ ಜನ್ಮದಿನವನ್ನು ಆಚರಿಸಬಹುದು. ಎಲ್ಲರ ಒಳಿತಿಗಾಗಿ ಸನ್ನಿಧಿಯಲ್ಲಿ ನಾವು ಪ್ರಾರ್ಥಿಸುತ್ತೇವೆ. ಶ್ರೀ ಸಂಸ್ಥಾನದಲ್ಲಿ ಸರಳ ರೀತಿಯಲ್ಲಿ ಶ್ರೀ ಗುರುಪಾದುಕಾರಾಧನೆ ನಡೆಯುತ್ತದೆ. ಯಾವುದೇ ಲೋಪ ಬಾರದಂತೆ ಸರಕಾರದ ಕೋವಿಡ್ ನಿಯಮಗಳನ್ನು ಪಾಲಿಸೋಣ. ಕಾಯಿಲೆಯ ಬಗ್ಗೆ ಜಾಗೃತಿ ಇರಲಿ. ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡೋಣ. ಷಷ್ಠ್ಯಬ್ದ ಸಂಭ್ರಮದ ಕಾರ್ಯಕ್ರಮಗಳನ್ನು ಕೋವಿಡ್ ನಿಯಮಗಳು ಸಡಿಲಗೊಂಡಾಗ ಪೂರ್ಣಗೊಳಿಸೋಣ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು […]

Read More

‘ಶ್ರೀಗಂಧ ಬೆಳೆಯೋಣ’ ಯೋಜನೆಗೆ ಚಾಲನೆ ನೀಡಿ ಒಡಿಯೂರು ಶ್ರೀ ಆಶೀರ್ವಚನ

“ಪ್ರಕೃತಿ ಉಳಿದರೆ ನಮ್ಮ ಉಳಿವು” ಷಷ್ಠ್ಯಬ್ದ ಸಂಭ್ರಮದ ಪ್ರಯುಕ್ತ ‘ಮನೆಗೊಂದು ಶ್ರೀಗಂಧದ ಸಸಿ – ಶ್ರೀಗಂಧ ಬೆಳೆಯೋಣ’ ಯೋಜನೆಗೆ ಚಾಲನೆ ನೀಡಿ ಒಡಿಯೂರು ಶ್ರೀ ಆಶೀರ್ವಚನ “ಆರೋಗ್ಯಕ್ಕೆ ಹಾನಿಕಾರಕವಾದ ಅಕೇಶಿಯಾದಂತಹ ಗಿಡದ ಬದಲು ಗಿಡಮೂಲಿಕೆ, ಹಣ್ಣುಗಳ ಗಿಡಗಳನ್ನು ಬೆಳೆಸಬೇಕು. ಪ್ರಕೃತಿಯ ಉಳಿವು ನಮ್ಮಿಂದಲೇ ಅಗಬೇಕು. ಪ್ರತಿಯೊಬ್ಬರೂ ತಮ್ಮ ಹುಟ್ಟುಹಬ್ಬವನ್ನು ಆಚರಿಸುವಾಗ ಒಂದೊಂದು ಗಿಡಗಳನ್ನು ನೆಟ್ಟು ಪೋಷಿಸಿದಾಗ ಆದರ್ಶ ಆಚರಣೆಯಾಗುತ್ತದೆ. ಮಕ್ಕಳ ಕೈಯಲ್ಲೇ ಗಿಡಗಳನ್ನು ನೆಟ್ಟು, ಮರ ಬೆಳೆಸಿ, ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ಅದರಲ್ಲಿ […]

Read More

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಆ.1ರಂದು ‘ಆಟಿದ ಆಯನೊ’

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಆಗಸ್ಟ್ 1ರಂದು (ಆಟಿ ತಿಂಗೊಲು 16 ಪೋಪಿನಾನಿ) ಆದಿತ್ಯವಾರ ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ ಸಮಿತಿ ಮತ್ತು ಒಡಿಯೂರ್ದ ತುಳುಕೂಟದ ಜಂಟಿ ಆಶ್ರಯದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ‘ಆಟಿದ ಆಯನೊ’ ತುಳು ನಡಕೆದ ಲೇಸ್ ಜರಗಲಿರುವುದು. ಆಟಿದ ಉಲಮರ್ಗಿಲ್ ಎಂಬ ವಿಚಾರದ ಬಗ್ಗೆ ಶ್ರೀಮತಿ ರಾಜಶ್ರೀ ಟಿ. ರೈ ಪೆರ್ಲ ಮಾತನಾಡಲಿದ್ದಾರೆ. ಬೆಳಿಗ್ಗೆ 10.00. ಗಂಟೆಗೆ ಆರಂಭವಾಗುವ ಈ ಕಾರ್ಯಕ್ರಮದ ಪ್ರಯುಕ್ತ ಆಟಿ ಕಲೆಂಜ ನಲಿಕೆ, […]

Read More

ಒಡಿಯೂರು ಶ್ರೀ ಸಂಸ್ಥಾನದಲ್ಲಿ ‘ಶ್ರೀಗಂಧ ಬೆಳೆಯೋಣ’ ಯೋಜನೆಗೆ ಚಾಲನೆ

ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮದ ಪ್ರಯುಕ್ತ ಒಡಿಯೂರು ಶ್ರೀ ಷಷ್ಠ್ಯಬ್ದ ಸಂಭ್ರಮ ಸಮಿತಿಯ ವತಿಯಿಂದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ತಾ.08-07-2021ನೇ ಗುರುವಾರ ಪೂರ್ವಾಹ್ಣ ಘಂಟೆ 10.00ಕ್ಕೆ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಹಾಗೂ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರ ದಿವ್ಯ ಉಪಸ್ಥಿತಿಯಲ್ಲಿ ‘ಮನೆಗೊಂದು ಶ್ರೀ ಗಂಧದ ಗಿಡ-ಶ್ರೀಗಂಧ ಬೆಳೆಯೋಣ’ ಯೋಜನೆಯ ಆರಂಭೋತ್ಸವವು ನಡೆಯಲಿರುವುದು. ಬಂಟ್ವಾಳ ಶಾಸಕ ಶ್ರೀ ಯು. ರಾಜೇಶ್ ನಾೈಕ್, ಪುತ್ತೂರು ಶಾಸಕ ಶ್ರೀ ಸಂಜೀವ ಮಠಂದೂರು, ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ […]

Read More

ಹುಟ್ಟುಹಬ್ಬಕ್ಕೊಂದು ಗಿಡ ನೆಡೋಣ… ಸಂರಕ್ಷಿಸೋಣ…

ಪರಿಸರ ಸ್ನೇಹಿಗಳಾಗೋಣ..ಪರಿಸರ ಸ್ನೇಹಿಗಳಾಗೋಣ.. ಪರಿಸರ ಎನ್ನುವ ಶಬ್ದಕ್ಕೆ ಅರ್ಥ ಸುತ್ತುಮುತ್ತಲು ಎನ್ನುವುದಿದೆ. ಮನೆಯಿಂದ ಹೊರಹೊರಟಾಗ ಪ್ರಕೃತಿಯ ಸೌಂದರ್ಯ ಸೆಳೆಯುತ್ತವೆ. ಹರಿಯುವ ನದಿಗಳು, ಗುಡ್ಡಕಾಡುಗಳು, ಹಾರಾಡುವ ಪಕ್ಷಿಗಳು, ಓಡಾಡುವ ಪ್ರಾಣಿಗಳು, ಸರೀಸೃಪಗಳು ಎಲ್ಲವೂ ಎದುರು ಕಾಣುತ್ತದೆ.  ಪರಿಸರಸ್ನೇಹಿ ಎನ್ನುವುದು ನಮ್ಮೆಲ್ಲರಿಗೂ ಅನ್ವಯಿಸುತ್ತದೆ. ಇಲ್ಲೊಂದು ಮುಖ್ಯವಾದ ವಿಚಾರವನ್ನು ಗಮನಿಸಬೇಕು. ಬೆಳೆದು ನಿಂತ ಮರಗಳು ನೆರಳನ್ನು, ಹಣ್ಣುಗಳನ್ನು ಕೊಟ್ಟು ಉಪಕೃತವಾಗುತ್ತವೆ. ಹರಿಯುವ ನದಿಯು ತಾನೇ ನೀರನ್ನೇ ಕುಡಿಯದೆ ಪರರಿಗೆ ಅನುಕೂಲವಾಗಿಸುತ್ತದೆ. ನಾವು ಹೇಗಿರಬೇಕೆನ್ನುವ ಪುಟಗಳು ತೆರೆದುಕೊಳ್ಳುತ್ತವೆ. ಅರ್ಥಾತ್ ಬದುಕಿಗೊಂದು ಪಾಠವಿದೆ. ಪ್ರಕೃತಿಯು […]

Read More

ತ್ಯಾಗ – ಸೇವೆಗಳೇ ಆತ್ಮೋನ್ನತಿಗೆ ಸೋಪಾನಗಳು – ಒಡಿಯೂರು ಶ್ರೀ

 “ಭೋಗದ ಬದುಕು ಬದುಕಲ್ಲ, ತ್ಯಾಗದ ಬದುಕೇ ನಿಜ ಬದುಕು. ತ್ಯಾಗ ಮತ್ತು ಸೇವೆಗಳೇ ಆತ್ಮೋನ್ನತಿಗೆ ಸೋಪಾನಗಳು. ಶ್ರೀಮದ್ರಾಮಾಯಣ, ಶ್ರೀಮನ್ಮಹಾಭಾರತ ಇವೆರಡು ಮಹಾಕಾವ್ಯಗಳು ಭಾರತೀಯ ಸಂಸ್ಕøತಿಯನ್ನು ಪ್ರತಿನಿಧಿಸುತ್ತದೆ. ಬದುಕನ್ನು ರೂಪಿಸುವ ಪಠ್ಯಗಳು ಈ ಕಾವ್ಯಗಳಾಗಿವೆ. ಇದೀಗ ಶ್ರೀ ರಾಮನವಮಿ ಹಾಗೂ ಹನುಮಜ್ಜಯಂತಿಯನ್ನು ಆಚರಿಸುವ ಪರ್ವಕಾಲ. ವಸಂತ ಋತು, ಚೈತ್ರ ಮಾಸದಲ್ಲಿ ಬರುವಂತಹ ಈ ದಿನಗಳು ಆರಾಧನಾ ಯೋಗ್ಯವಾಗಿರುವುದು. ರಾಮಾಯಣ, ಮನುಷ್ಯನ ಭೂತ, ವರ್ತಮಾನ, ಭವಿಷ್ಯತ್ತುಗಳನ್ನು ತಿಳಿಸಿಕೊಡುತ್ತದೆ. ಅಂದರೆ ಕಳೆದ, ನಡೆಯುತ್ತಿರುವ ಹಾಗೂ ಭವಿಷ್ಯತ್ತಿನ ವಿಚಾರಗಳು ಗೋಚರಕ್ಕೆ ಬರುತ್ತವೆ. ಉಳಿದುದು […]

Read More

ಪ್ರಕಟಣೆ

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಈಗಾಗಲೇ ಎಪ್ರಿಲ್ 23 ಮತ್ತು 24ರಂದು ನಿಗದಿಯಾಗಿದ್ದ ‘ರಾಜಾಂಗಣ ಲೋಕಾರ್ಪಣೆ’ ಮತ್ತು ‘ಸಹಕಾರ ಸಂಭ್ರಮ’ ಕಾರ್ಯಕ್ರಮವನ್ನು ರಾಜ್ಯ ಸರಕಾರ ಕೋವಿಡ್ ನಿಯಂತ್ರಣ ಅಧಿಸೂಚನೆಯ ಅನ್ವಯ ಮುಂದೂಡಲಾಗಿದೆ. ಶ್ರೀ ಸಂಸ್ಥಾನದ ಭಕ್ತಾದಿಗಳು ಹಾಗೂ ಸಹಕಾರಿ ಬಂಧುಗಳು ಸಹಕರಿಸಬೇಕಾಗಿ ವಿನಂತಿ. ಕಾರ್ಯನಿರ್ವಾಹಕರು, ಒಡಿಯೂರು ಶ್ರೀ ಸಂಸ್ಥಾನಮ್, ಅಧ್ಯಕ್ಷರು, ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಸಮಿತಿ

Read More

ಮಹಾಶಿವರಾತ್ರಿಯ ಪ್ರಯುಕ್ತ ಶತರುದ್ರಾಭಿಷೇಕ ಜರಗಿತು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಉಪಸ್ಥಿತಿಯಲ್ಲಿ ಶತರುದ್ರಾಭಿಷೇಕ ಜರಗಿತು.

Read More

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top