+91 8255-266211
info@shreeodiyoor.org

‘ಶ್ರೀ ಗುರುಚರಿತಾಮೃತ ಪ್ರವಚನ’ಕ್ಕೆ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರಿಂದ ಚಾಲನೆ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹದ ಸಂದರ್ಭ ನಡೆದ ‘ಶ್ರೀ ಗುರುಚರಿತಾಮೃತ ಪ್ರವಚನ’ಕ್ಕೆ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರಿಂದ ಚಾಲನೆ. ಸಾಧ್ವಿ ಶ್ರೀ ಮಾತಾನಂದಮಯೀ, ಪೂಜ್ಯ ಶ್ರೀಗಳವರ ಮಾತೃಶ್ರೀ ಶ್ರೀಮತಿ ಅಂತಕ್ಕೆ, ಪ್ರವಚನಕಾರರಾದ ಪ್ರೊ. ಚಂದ್ರಪ್ರಭಾ ಆರ್. ಹೆಗ್ಡೆ, ಮುಂಬೈನ ಉದ್ಯಮಿ ವಾಮಯ್ಯ ಬಿ. ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಅಶೋಕ್‍ಕುಮಾರ್, ಒಡಿಯೂರು ಶ್ರೀ ವಿವಿಧೊದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎ. ಸುರೇಶ್ […]

Read More

ಆತ್ಮನಿಷ್ಠ ಸಂಸ್ಕೃ ತಿಯ ಸೊಬಗು ದತ್ತತತ್ತ್ವದಲ್ಲಿದೆ. – ಒಡಿಯೂರು ಶ್ರೀ

“ಆತ್ಮನಿಷ್ಠ ಸಂಸ್ಕೃತಿಯ ಸೊಬಗು ದತ್ತತತ್ತ್ವದಲ್ಲಿದೆ. ಅದೊಂದು ಸುಂದರವಾದ ಸಂಸ್ಕೃತಿ. ದತ್ತ ತತ್ತ್ವವೇ ಸಮರಸ ತತ್ತ್ವ. ಸಮರಸ ತತ್ತ್ವವೇ ಆತ್ಮ ತತ್ತ್ವ. ಆತ್ಮತತ್ತ್ವವನ್ನು ಅರಿತರೆ ಎಲ್ಲರಲ್ಲೂ ಭಗವಂತನಿದ್ದಾನೆ ಎಂಬ ಅರಿವು ನಮಗಾಗುತ್ತದೆ. ಆಗ ನಮ್ಮಿಂದ ಯಾವುದೇ ದುಷ್ಕರ್ಮಗಳು ಆಗುವುದಕ್ಕೆ ಸಾಧ್ಯವಿಲ್ಲ. ಅದೊಂದು ಅನುಭಾವದ ವಿಚಾರವಾಗಿದೆ” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸಂದೇಶ ನೀಡಿದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹದ ಎರಡನೆಯ ದಿನ ಜರಗಿದ ಶ್ರೀ […]

Read More

‘ಶಾಲೆಗಳ ಮೂಲಕ ರಾಷ್ಟ್ರ ಕಟ್ಟುವ ಕಾಯಕ ನಡೆಯಬೇಕು’ – ಒಡಿಯೂರು ಶ್ರೀ

  ‘ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ’ದ ವಾರ್ಷಿಕೋತ್ಸವವು ವಿಜೃಂಭಣೆಯಿಂದ ದಿನಾಂಕ 25.11.2019ನೇ ಸೋಮವಾರದಂದು ನಡೆಯಿತು. ಪೂಜ್ಯ ಸಾಧ್ವಿ ಶ್ರೀ ಮಾತಾನಂದಮಯಿಯವರು ದೀಪೋಜ್ವಲನೆಗೈದು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವದಿಸಿದರು. ಬಳಿಕ ಕ್ರಮವಾಗಿ ಶ್ರೀ ಗುರುದೇವ ಗುರುಕುಲದಿಂದ ತೊಡಗಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ವಿವಿಧ ಮನರಂಜನಾ ಕಾರ್ಯಕ್ರಮಗಳೊಂದಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. 11.00 ಗಂಟೆಯಿಂದ ಜರಗಿದ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ದಿವ್ಯ ಉಪಸ್ಥಿತಿಯನ್ನು ಕರುಣಿಸಿ, ‘ಶಾಲೆಗಳ ಮೂಲಕ ರಾಷ್ಟ್ರ […]

Read More

ದ. 5ರಿಂದ 11ರ ತನಕ ಶ್ರೀದತ್ತ ಜಯಂತ್ಯುತ್ಸವ – ಶ್ರೀ ದತ್ತ ಮಹಾಯಾಗ ಸಪ್ತಾಹ – ಯಕ್ಷಗಾನ ಬಯಲಾಟ ಸಪ್ತಾಹ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ತಾ.05-12-2019 ರಿಂದ ತಾ.11-12-2019ರ ತನಕ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಮಾರ್ಗದರ್ಶನ ಹಾಗೂ ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹವು ವಿವಿಧ ವೈದಿಕ – ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ಸಾ೦ಸ್ಕೃತಿಕ ಕಾರ್ಯಕ್ರಮದಂಗವಾಗಿ ಯಕ್ಷಗಾನ ಬಯಲಾಟ ಸಪ್ತಾಹವು ಜರಗಲಿರುವುದು. ಪ್ರತಿದಿನ ಶ್ರೀ ಗುರುಚರಿತ್ರೆ ಪಾರಾಯಣ, ವೇದ ಪಾರಾಯಣ, ಶ್ರೀ ಗುರುಚರಿತಾಮೃತ ಪ್ರವಚನ. ಪ್ರವಚನಕಾರರಾಗಿ ಪ್ರೊ. ಚಂದ್ರಪ್ರಭಾ ಹೆಗ್ಡೆ, ನಿವೃತ್ತ ಪ್ರಾಂಶುಪಾಲರು, […]

Read More

ಒಡಿಯೂರು ಶ್ರೀ ಪುಣೆಗೆ

ಒಡಿಯೂರು ಶ್ರೀಗಳವರು ನ.18ರಿಂದ 22ರ ತನಕ ಪುಣೆ ಹಾಗೂ ಅಹಮದ್‍ನಗರಕ್ಕೆ ಭೇಟಿ ನೀಡಲಿದ್ದಾರೆ. ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಪುಣೆ ಘಟಕವು ಪುಣೆ ಮಹಾನಗರದಲ್ಲಿ ಆಯೋಜಿಸಿರುವ ವಿವಿಧ ಗುರುವಂದನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ. ಸದ್ರಿ ದಿನಗಳಲ್ಲಿ ಒಡಿಯೂರು ಶ್ರೀ ಸಂಸ್ಥಾನದಲ್ಲಿ ಸಾರ್ವಜನಿಕ ಭೇಟಿಗೆ ಲಭ್ಯರಿರುವುದಿಲ್ಲ.

Read More

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠಕ್ಕೆ ಪುಸ್ತಕ ಕೊಡುಗೆ

ಒಡಿಯೂರು ಶ್ರೀ ಯುವ ಸೇವಾಬಳಗ, ಮುಂಬೈ ಘಟಕದ ವತಿಯಿಂದ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಗ್ರಂಥಾಲಯಕ್ಕೆ ಹಲವು ನೀತಿಕಥೆಗಳ, ಮೌಲಿಕ ಪುಸ್ತಕಗಳು, ವಿಜ್ಞಾನ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಯುವಸೇವಾ ಬಳಗದ ಅಧ್ಯಕ್ಷ ಡಾ. ಅದೀಪ್ ಶೆಟ್ಟಿಯವರು ಈ ಪುಸ್ತಕಗಳನ್ನು ಹಸ್ತಾಂತರಿಸಿದರು. ಶಾಲಾ ಸಂಚಾಲಕ ಗಣಪತಿ ಭಟ್ ಸೇರಾಜೆ, ಪ್ರೌಢಶಾಲಾ ಮುಖ್ಯ ಶಿಕ್ಷಕ ಜಯಪ್ರಕಾಶ್ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್. ರೈ, ಒಡಿಯೂರು ಶ್ರೀ ಸಂಸ್ಥಾನದ ಕಾರ್ಯನಿರ್ವಾಹಕ ಪದ್ಮನಾಭ ಒಡಿಯೂರು, ಹಿರಿಯ ಪತ್ರಕರ್ತ ಯಶವಂತ […]

Read More

ಸಹಿಷ್ಣುತೆಯನ್ನು ಮೆರೆದ ಸಂವಿಧಾನಪೀಠ – ಒಡಿಯೂರು ಶ್ರೀ

ಉತ್ಥಾನ ದ್ವಾದಶಿಯಂದು ಹೊರಬಿದ್ದ ಭಾರತದ ಸುಪ್ರೀಕೋರ್ಟ್‍ನ ಸಂವಿಧಾನಪೀಠದ ತೀರ್ಪು ರಾಷ್ಟ್ರೋತ್ಥಾನಕ್ಕೆ ಪೂರಕವಾದ ಐತಿಹಾಸಿಕ ತೀರ್ಪು. ಭಾರತೀಯ ಸ೦ಸ್ಕೃತಿಯ ಸಹಿಷ್ಣುತೆ ಮತ್ತು ಸಾಮರಸ್ಯದ ಸಂಕೇತವಾಗಿ ಈ ತೀರ್ಪು ಇತಿಹಾಸದ ಪುಟದಲ್ಲಿ ದಾಖಲಾಗಿದೆ. – ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್

Read More

ಕು.ದೀಪಶ್ರೀಗೆ ಶ್ಲೋಕ ಕಂಠಪಾಠದಲ್ಲಿ ದ್ವಿತೀಯ : ಕು.ವಿದ್ಯಾಲಕ್ಷ್ಮಿ ಭಾಷಣ ಸ್ಪರ್ಧೆಯಲ್ಲಿ ತೃತೀಯ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿನಿ ಕು.ದೀಪಶ್ರೀ ಪದ್ಯಾಣ 9ನೇ ತರಗತಿ ಶಾಂತಿವನ ಟ್ರಸ್ಟ್ ರಿ. ಧರ್ಮಸ್ಥಳ ಆಯೋಜಿಸಿದ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬದುಕಿಗೆ ಬೆಳಕು ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ. ಮತ್ತು ಹಿರಿಯ ಪ್ರಾಥಮಿಕ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಕು. ವಿದ್ಯಾಲಕ್ಷ್ಮಿ 6ನೇ ತರಗತಿ ತೃತೀಯ ಬಹುಮಾನವನ್ನು ಪಡೆದು ಕೊಂಡಿರುತ್ತಾಳೆ.

Read More

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top