+91 8255-266211
info@shreeodiyoor.org

ಒಡಿಯೂರು ಶ್ರೀ ಸಂಸ್ಥಾನಕ್ಕೆ ಶ್ರೀಮದ್ ಎಡನೀರು ಮಠದ ನೂತನ ಪೀಠಾಧಿಪತಿ ಭೇಟಿ

    ಜಗದ್ಗುರು ಶ್ರೀ ಶಂಕರಾಚಾರ್ಯ ತೋಟಕಾಚಾರ್ಯ ಪರಂಪರೆಯ ಶ್ರೀ ಮದ್ ಎಡನೀರು ಮಠದ ನೂತನ ಪೀಠಾಧಿಪತಿಗಳಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ (ಶ್ರೀ ಜಯರಾಮ ಮಂಜತ್ತಾಯ)ಯವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಕ್ಕೆ ಭೇಟಿ ನೀಡಿ ಶ್ರೀ ದತ್ತಾಂಜನೇಯ ದೇವರ ಹಾಗೂ ಶ್ರೀ ನಿತ್ಯಾನಂದ ಗುಹಾಲಯದಲ್ಲಿ ಶ್ರೀ ಪಂಚಮುಖಿ ಆಂಜನೇಯ ದೇವರ ದರ್ಶನ ಪಡೆದರು. ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಶಾಲು ಹೊದಿಸಿ ದೇವರ ಪ್ರಸಾದ ನೀಡಿ ಶುಭಹಾರೈಸಿದರು. ವೇ|ಬ್ರಹ್ಮಶ್ರೀ| ರವೀಶ ತಂತ್ರಿ ಕುಂಟಾರು, […]

Read More

ಒಡಿಯೂರು ಶ್ರೀಗಳವರ ಷಷ್ಠ್ಯಬ್ದಿ ಸಂಭ್ರಮ ಸಮಿತಿಯ ಅಧ್ಯಕ್ಷರಾಗಿ ಡಾ. ಎಂ. ಮೋಹನ ಆಳ್ವ ಆಯ್ಕೆ “ಕಾರ್ಯಕ್ರಮ ಸಮಾಜಮುಖಿ ಚಿಂತನೆಗಳಿಂದ ಕೂಡಿರಬೇಕು” – ಷಷ್ಟ್ಯಬ್ದಿ ಆಚರಣೆಯ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಒಡಿಯೂರು ಶ್ರೀ ಆಶೀರ್ವಚನ

ಸೆ.18: “ತ್ಯಾಗಪೂರ್ಣ ಸೇವೆಯಿಂದ ಅರ್ಥಪೂರ್ಣ ಕಾರ್ಯಕ್ರಮ ಮಾಡಲು ಸಾಧ್ಯ. ಕಳೆದು ಹೋದುದರ ಬಗ್ಗೆ ಚಿಂತಿಸದೆ ಇದ್ದುದರಲ್ಲೇ ತೃಪ್ತಿಪಡುವ ಮನಸ್ಸು ನಮ್ಮದಾಗಬೇಕು. ಯಾವುದೇ ಕಾರ್ಯಕ್ರಮವೂ ಸಹ ಅದು ಸಮಾಜಮುಖಿಯಾಗಿರಬೇಕು. ಮಾತ್ರವಲ್ಲದೆ ಅದೊಂದು ನೆನಪಿನ ಬುತ್ತಿಯಾಗಿರಬೇಕು. ಶಿಸ್ತುಬದ್ಧವಾಗಿ ನಡೆದ ಕಾರ್ಯಕ್ರಮಗಳು ಯಶಸ್ಸನ್ನು ಕಾಣುತ್ತದೆ. ಈ ಷಷ್ಠ್ಯಬ್ದಿ ಕಾರ್ಯಕ್ರಮ ಹಲವಾರು ಸಮಾಜಮುಖಿ ಚಿಂತನೆಗಳಿಂದ ಕೂಡಿದೆ. ಕೇಂದ್ರ ಸಮಿತಿಯ ರಚನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕುಗಳಲ್ಲಿ ಹಾಗೂ ಗ್ರಾಮ ಗ್ರಾಮಗಳಲ್ಲಿ ಸಮಿತಿಯನ್ನು ರಚನೆ ಮಾಡುವ ಯೋಜನೆ ಇದೆ. ಆದರ್ಶ ಹಾಗೂ ಅರ್ಥಪೂರ್ಣ ಕಾರ್ಯಕ್ರಮದ […]

Read More

ಕರ್ತವ್ಯ ಪ್ರಜ್ಞೆ, ಪ್ರಾಮಾಣಿಕತೆ, ನಿಷ್ಠೆಗೆ ಮತ್ತೊಂದು ಹೆಸರು ಜನಾರ್ದನ ಮಾಸ್ಟರ್ – ಒಡಿಯೂರು ಶ್ರೀ

“ಸಂಪತ್ತು, ಮಿತ್ರರು, ಮನೆ–ಮಠ ಎಲ್ಲವೂ ಪುನರ್ ಲಭ್ಯವಾಗುವುದು. ಆದರೆ ಶರೀರವನ್ನು ನಾವು ಮತ್ತೆ ಪಡೆಯಲಾಗದು. ಭಗವಂತ ಕರುಣಿಸಿದ ಬುದ್ಧಿ, ವಿವೇಕ, ಜ್ಞಾನವನ್ನು ಸದುಪಯೋಗಪಡಿಸಿಕೊಂಡು ನಮ್ಮ ಜೀವನ ಪಯಣವನ್ನು ಸುಗಮವಾಗಿಸಿಕೊಳ್ಳಬೇಕು. ಅದನ್ನೇ ದಾಸರು ಹೇಳಿದಂತೆ ‘ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು ಸಾಧಾರಣವಲ್ಲ ಸಾಧು ಪ್ರಿಯನೇ…’ ಎನ್ನುವಂತೆ ನಮ್ಮ ಬದುಕು ಶ್ರೇಷ್ಠತೆಯನ್ನು ಪಡೆಯಬೇಕು. ಇದನ್ನೇ ತನ್ನ ಜೀವನದಲ್ಲಿ ಅಳವಡಿಸಿಕೊಂಡು ಓರ್ವ ಆದರ್ಶ ಶಿಕ್ಷಕರಾಗಿ, ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಂಡಿದ್ದವರು ಆತ್ಮೀಯ ಶ್ರೀ ಜನಾರ್ದನ ಶೆಟ್ಟಿಯವರು. ಶಿಸ್ತು, ಸರಳ ಸಜ್ಜನಿಕೆ, ಪ್ರಾಮಾಣಿಕತೆ, ನಿಷ್ಠೆ, […]

Read More

ಶ್ರೀ ಕೆ. ಜನಾರ್ದನ ಶೆಟ್ಟಿ ಬಂಡಿತ್ತಡ್ಕ ಅವರ ನಿಧನಕ್ಕೆ ಒಡಿಯೂರು ಶ್ರೀಗಳ ಸಂತಾಪ

ಗಾಂಧೀಜಿ ಪ್ರಣೀತ ಬುನಾದಿ ಶಿಕ್ಷಣ ತರಬೇತಿ ಪಡೆದು ಶಿಕ್ಷಣವನ್ನೇ ಜೀವನವಾಗಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಅನನ್ಯ ಶಿಕ್ಷಕ ಶ್ರೀ ಕೆ. ಜನಾರ್ದನ ಶೆಟ್ಟಿ ಬಂಡಿತ್ತಡ್ಕ ಅವರ ನಿಧನಕ್ಕೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂತಾಪ ವ್ಯಕ್ತಪಡಿಸಿದ್ದಾರೆ. ನಿವೃತ್ತಿಯ ಬಳಿಕ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು ಸ್ಮರಣೀಯ. ಅಧ್ಯಾತ್ಮದ ಒಲವುಳ್ಳವರಾಗಿದ್ದ ಅವರು ಪ್ರಾಮಾಣಿಕತೆ, ಶಿಸ್ತು ಮತ್ತು ಸಂಯಮವನ್ನು ಮೈಗೂಡಿಸಿಕೊಂಡಿದ್ದರು. ಇವರು ಸಾಧ್ವಿ ಶ್ರೀ […]

Read More

ಒಡಿಯೂರು ಶ್ರೀಗಳ ಸಂತಾಪ

ಬಹು ಭಾಷಾ ಸ್ವರ ಸಾಮ್ರಾಟ, ಸಂಗೀತವನ್ನೇ ತನ್ನ ಉಸಿರಾಗಿಸಿಕೊಂಡ ಸಂಗೀತ ಸಾರ್ವಭೌಮ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ನಾದಲೀನರಾದುದು ಭಾರತದ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೂಲತಃ ತೆಲುಗಿನವರಾದರೂ ಕನ್ನಡ ಭಾಷೆಯ ಬಗ್ಗೆ ಅವರಿಗಿದ್ದ ಪ್ರೀತಿ, ಅಭಿಮಾನ ಅಸಾಧಾರಣವಾದುದು. ಬೌತಿಕವಾಗಿ ಅವರು ಕಣ್ಮರೆಯಾದರೂ ಅವರ ಗಾನಮಾಧುರ್ಯ ಸದಾ ಹಸಿರಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಆರಾಧ್ಯಮೂರ್ತಿ ಶ್ರೀ ದತ್ತಾಂಜನೇಯ ದೇವರು ಕರುಣಿಸಲಿ […]

Read More

“ಶ್ರೀಕೃಷ್ಣ ಸಂಸ್ಕೃತಿಯ ದ್ಯೋತಕ”– ಒಡಿಯೂರು ಶ್ರೀ

  “ಶ್ರೀ ಕೃಷ್ಣ ಸಂಸ್ಕೃತಿಯ ದ್ಯೋತಕ. ಸಂಸ್ಕೃತಿಯ ಬೆಳಕು ರಾಮ-ಕೃಷ್ಣರು. ಮಕ್ಕಳನ್ನು ಸಂಸ್ಕೃತಿಯ ಉಳಿವಿನ ಹರಿಕಾರರನ್ನಾಗಿ ಬೆಳೆಸಬೇಕು. ಆ ಮೂಲಕ ಭವ್ಯ ಭಾರತ ನಿರ್ಮಾಣದ ಭವಿಷ್ಯ ಬರೆಯುವಂತಾಗಬೇಕು. ಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ತಮ್ಮ ತಮ್ಮ ಮನೆಯಲ್ಲೇ ಆಚರಿಸಿ ಸಂಭ್ರಮಿಸಿಬೇಕೆಂದು” ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಸಂದೇಶದಂತೆ ಒಂದು ನಿಮಿಷದ ಮುದ್ದುಕೃಷ್ಣ ವೇಷದ ವಿಡಿಯೋ ಕಳುಹಿಸುವ ಮೂಲಕ ನಾಲ್ಕು ವರ್ಷದೊಳಗಿನ ಪುಟ್ಟ ಮಕ್ಕಳಿಗೆ ಮುದ್ದು ಕೃಷ್ಣವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.   ಸುಮಾರು 150 ಪುಟಾಣಿಗಳು […]

Read More

ಡಾ. ಶಿಮಂತೂರು ನಾರಾಯಣ ಶೆಟ್ಟರು ನಿಧನ : ಒಡಿಯೂರು ಶ್ರೀಗಳ ಸಂತಾಪ

ಜೀವನದ ಬಹುಪಾಲನ್ನು ಯಕ್ಷಗಾನದ ಛಂದಸ್ಸಿಗೆ ಮುಡಿಪಾಗಿರಿಸಿದ ಯಕ್ಷಗಾನ ಛಂದೋಬ್ರಹ್ಮ ಅದ್ಭುತ ಕವಿ, ಸಂಶೋಧಕ, ಸರಳ ಸಜ್ಜನಿಕೆಯ ಡಾ. ಶಿಮಂತೂರು ನಾರಾಯಣ ಶೆಟ್ಟರು ಶ್ರೀ ಸಂಸ್ಥಾನದ ಮುಖ್ಯ ಅಭಿಮಾನಿಗಳಲ್ಲೋರ್ವರು. ಇವರ ನಿಧನವು ಯಕ್ಷಗಾನ ರಂಗಕ್ಕೆ ತುಂಬಲಾರದ ನಷ್ಟ. ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು, ಅವರ ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಆರಾಧ್ಯದೇವರು ಕರುಣಿಸಲೆಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಪ್ರಾರ್ಥಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ.

Read More

ಒಡಿಯೂರು ಶ್ರೀಗಳ ಸಂತಾಪ

ಮಡಿಯಾಳ ನಾರಾಯಣ ಭಟ್ಟರ ಬಳಿಕ ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಆದುನಿಕ ಶೈಕ್ಷಣಿಕ ಕ್ರಾಂತಿಯ ಹರಿಕಾರ, ಅನುಪಮ ತ್ಯಾಗಜೀವಿ ಶ್ರೀ ಯು. ಗಂಗಾಧರ ಭಟ್ ಅವರ ನಿಧನಕ್ಕೆ ವಿಷಾಧಿಸಿ, ಅಗಲಿದ ದಿವ್ಯಾತ್ಮಕ್ಕೆ ಆರಾಧ್ಯದೇವರು ಚಿರಶಾಂತಿಯನ್ನು ಕರುಣಿಸಲೆಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಪ್ರಾರ್ಥಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ.

Read More

ಒಡಿಯೂರು ಸಂಸ್ಥಾನದಲ್ಲಿ ಶ್ರೀ ಗಣಪತಿ ಅಥರ್ವಶೀರ್ಷ ಹವನ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ವೇ| ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ಗಣಪತಿ ಅಥರ್ವಶೀರ್ಷ ಹವನ ನಡೆಯಿತು. ಸಾಧ್ವಿ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. 

Read More

“ಸ್ವಾತಂತ್ರ್ಯವೆಂದರೆ ಸ್ವೇಚ್ಛೆಯಲ್ಲ , ಸ್ವೇಚ್ಛೆ ಸ್ವಾತಂತ್ರ್ಯವೂ ಅಲ್ಲ”-ಒಡಿಯೂರುಶ್ರೀ

ಸ್ವಾತಂತ್ರ್ಯ ವೆಂದರೆ ಸ್ವೇಚ್ಛೆಯಲ್ಲ , ಸ್ವೇಚ್ಛೆ ಸ್ವಾತಂತ್ರ್ಯ ವೂ ಅಲ್ಲ, ಸುವ್ಯವಸ್ಥಿತ ವಾದ ಆಡಳಿತಕ್ಕೆ ಪ್ರಜ್ಞಾವಂತ ಪ್ರಜೆಗಳಿಂದ ಸಾಧ್ಯ. ದೇಶದ ಉನ್ನತಿಯು ದೇಶದ ಕೌಶಲ್ಯಯುತ ಜನರಿಂದ ಅವಲಂಬಿಸಿದೆ,ದೇಶದ ಬಲಿಷ್ಠ ತೆಗೆ ಬೇಕಾದ ರೂಪುರೇಷೆ ಗಳ ತಯಾರಿ ಹಾಗೂ ದೇಶದ ಸಂರಕ್ಷಣೆ ಪ್ರತಿಯೊಬ್ಬರ ಪ್ರಜೆಯ ಕರ್ತವ್ಯ. ಬದುಕು ಶಿಕ್ಷಣದ ಅಗತ್ಯಕ್ಕಾಗಿ ಒಂದರಿಂದ ಐದನೆಯ ತರಗತಿಯವರೆಗೆ ಮಾತೃ ಶಿಕ್ಷಣ ಅಗತ್ಯವೆಂದು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ 74 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರು […]

Read More

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top