+91 8255-266211
info@shreeodiyoor.org

2019-20ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ

2019-20ನೇ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶ್ರೀಗುರುದೇವ ಆಂಗ್ಲ ಮಾಧ್ಯಮ ಶಾಲೆಯು ಶೇಕಡಾ 100 ಫಲಿತಾಂಶವನ್ನು ದಾಖಲಿಸಿರುತ್ತದೆ ಮತ್ತು ಶ್ರೀ ಗುರುದೇವ ಕನ್ನಡ ಮಾಧ್ಯಮ ಶಾಲೆಯು ಶೇಕಡಾ 80 ರ ಫಲಿತಾಂಶವನ್ನು ಪಡೆದಿರುತ್ತದೆ. 4 ವಿದ್ಯಾರ್ಥಿಗಳು A+ ಗ್ರೇಡ್ ಹಾಗೂ 7ವಿದ್ಯಾರ್ಥಿಗಳು A ಗ್ರೇಡ್‍ಗಳನ್ನು ಪಡೆದಿರುತ್ತಾರೆ. ಆಂಗ್ಲಮಾದ್ಯಮದಲ್ಲಿ ಜಿತೇಶ್ ಪಿ ಶೆಟ್ಟಿ 602 ಅಂಕಗಳೂ ಅಕ್ಷಿತಾ ಎನ್ 579 ಹಾಗೂ ಅನನ್ಯಲಕ್ಷ್ಮಿ 578 ಅಂಕಗಳನ್ನು ಪಡೆದಿರುತ್ತಾರೆ. ಕನ್ನಡಮಾಧ್ಯಮದಲ್ಲಿ ಶ್ರವಣ್ ಕುಮಾರ್ 585 ಅಂಕಗಳನ್ನು […]

Read More

“ಬೇಕುಗಳನ್ನು ಕಡಿಮೆ ಮಾಡದೆ ಶಾಂತಿ ಲಭಿಸದು.” – ಒಡಿಯೂರು ಶ್ರೀ

  ಭಾರತೀಯತೆ ಅಂದರೆ ಸಂಸ್ಕೃತಿ. ಮಾತೃಹೃದಯ ಎಲ್ಲವನ್ನೂ ಅಪ್ಪಿಕೊಳ್ಳುತ್ತದೆ ಮತ್ತು ಒಪ್ಪಿಕೊಳ್ಳುತ್ತದೆ. ಮಕ್ಕಳ ಬಗ್ಗೆ ನಾವು ಕನಸನ್ನು ಕಾಣುವ. ಮಕ್ಕಳ ಜೊತೆ ಸಮಯ ಕಳೆಯಬೇಕು. ತಾಯಂದಿರು ಭಾಷೆಯ ಹಿಂದಿನ ಸಂಸ್ಕೃತಿಗೆ ಗಮನ ನೀಡಬೇಕು. ಬೇಕುಗಳನ್ನು ಕಡಿಮೆ ಮಾಡದೆ ಶಾಂತಿ ಲಭಿಸದು. ಜೀವನ ಮೌಲ್ಯ ತುಂಬುವ ಕೆಲಸ ತಾಯಿಯಿಂದ ಮನೆಯಲ್ಲೇ ಆಗಬೇಕು. ಆಗ ಮಾತ್ರ ಮಕ್ಕಳು ನಮ್ಮ ಜೊತಿಗಿರುತ್ತಾರೆ. ಭಾರತೀಯತೆಯನ್ನು ಅಳವಡಿಸಿಕೊಂಡರೆ ಮಾತ್ರ ನಿಜವಾದ ಬದುಕು ನಮ್ಮದಾಗುತ್ತದೆ. ಸಂಪತ್ತು – ಆಪತ್ತು ಎರಡಕ್ಕೂ ಕಾರಣ ನಮ್ಮ ನಾಲಿಗೆ. ಆದುದರಿಂದ […]

Read More

‘ವಾಸ್ತವದ ಅನ್ವೇಷಣೆ ಸಾಧನೆಯ ಕೈಗನ್ನಡಿ’ – ಒಡಿಯೂರು ಶ್ರೀ

‘ಬೀಳ್ಕೊಡುಗೆ ಎನ್ನುವುದು ಭವಿಷ್ಯತ್ತಿನ ಕಡೆಗೆ ಹೋಗಲಿರುವ ಕೊಡುಗೆ. ವಿದ್ಯಾರ್ಥಿ ಬದುಕು ಭೋಗದ ಬದುಕಲ್ಲ, ಇದು ತ್ಯಾಗದ ಬದುಕು. ಕಲ್ಪನಾಲೋಕದ ಬದುಕಿಗಿಂತ ವಾಸ್ತವದ ಅನ್ವೇಷಣೆ ಸಾಧನೆಯ ಕೈಗನ್ನಡಿ. ಉತ್ತಮ ಮಿತ್ರರನ್ನು ಸಂಪಾದಿಸಿ ಗುಣಾತ್ಮಕ ಚಿಂತನೆಯನ್ನು ತಮ್ಮದಾಗಿಸಬೇಕು. ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ವಿಷಯದಲ್ಲಿ ಪೋಷಕರು ವಿದ್ಯಾಭ್ಯಾಸ ಮುಂದುವರಿಯಲು ಬಿಡಬೇಕು. ಮಾತೃ ಋಣ, ಶಿಕ್ಷಕರ ಋಣ, ದೇಶದ ಋಣ ಸದಾ ನೆನಪಿನಲ್ಲಿರಬೇಕು’ ಎಂದು ಒಡಿಯೂರು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ 10ನೇ ತರಗತಿಯ ಬೀಳ್ಕೊಡುಗೆ […]

Read More

ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಸಂಸ್ಕೃತ ಭಾಷಣದಲ್ಲಿ ದ್ವಿತೀಯ ಬಹುಮಾನ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿನಿ ಕು.ದೀಪಶ್ರೀ ಪದ್ಯಾಣ 9ನೇ ತರಗತಿ ಕೋಲಾರದಲ್ಲಿ ಜರಗಿದ ರಾಜ್ಯಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯ ಸಂಸ್ಕೃತ ಭಾಷಣದಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿರುತ್ತಾಳೆ. ಇವಳಿಗೆ ಶಾಲಾ ಸಂಸ್ಕøತ ಅಧ್ಯಾಪಕಿ ಶ್ರೀಮತಿ ನಿವೇದಿತಾ ರವರು ಮಾರ್ಗದರ್ಶನವನ್ನು ನೀಡಿರುತ್ತಾರೆ.

Read More

ಜಿಲ್ಲಾ ಮಟ್ಟದ ಶ್ಲೋಕ ಕಂಠಪಾಠ: ಕು.ದೀಪಶ್ರೀ ಪದ್ಯಾಣ ತೃತೀಯ ಬಹುಮಾನ

ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ನೈತಿಕ ಶಿಕ್ಷಣ ಯೋಜನೆಯನ್ವಯ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಜಿಲ್ಲಾ ಮಟ್ಟದ ಶ್ಲೋಕ ಕಂಠಪಾಠ ವಿಭಾಗದಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ 9ನೇ ತರಗತಿ ವಿದ್ಯಾರ್ಥಿನಿ ಕು.ದೀಪಶ್ರೀ ಪದ್ಯಾಣ ತೃತೀಯ ಬಹುಮಾನವನ್ನು ಪಡೆದುಕೊಂಡಿರುತ್ತಾಳೆ

Read More

‘ಶಾಲೆಗಳ ಮೂಲಕ ರಾಷ್ಟ್ರ ಕಟ್ಟುವ ಕಾಯಕ ನಡೆಯಬೇಕು’ – ಒಡಿಯೂರು ಶ್ರೀ

  ‘ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ’ದ ವಾರ್ಷಿಕೋತ್ಸವವು ವಿಜೃಂಭಣೆಯಿಂದ ದಿನಾಂಕ 25.11.2019ನೇ ಸೋಮವಾರದಂದು ನಡೆಯಿತು. ಪೂಜ್ಯ ಸಾಧ್ವಿ ಶ್ರೀ ಮಾತಾನಂದಮಯಿಯವರು ದೀಪೋಜ್ವಲನೆಗೈದು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವದಿಸಿದರು. ಬಳಿಕ ಕ್ರಮವಾಗಿ ಶ್ರೀ ಗುರುದೇವ ಗುರುಕುಲದಿಂದ ತೊಡಗಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ವಿವಿಧ ಮನರಂಜನಾ ಕಾರ್ಯಕ್ರಮಗಳೊಂದಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. 11.00 ಗಂಟೆಯಿಂದ ಜರಗಿದ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ದಿವ್ಯ ಉಪಸ್ಥಿತಿಯನ್ನು ಕರುಣಿಸಿ, ‘ಶಾಲೆಗಳ ಮೂಲಕ ರಾಷ್ಟ್ರ […]

Read More

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠಕ್ಕೆ ಪುಸ್ತಕ ಕೊಡುಗೆ

ಒಡಿಯೂರು ಶ್ರೀ ಯುವ ಸೇವಾಬಳಗ, ಮುಂಬೈ ಘಟಕದ ವತಿಯಿಂದ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಗ್ರಂಥಾಲಯಕ್ಕೆ ಹಲವು ನೀತಿಕಥೆಗಳ, ಮೌಲಿಕ ಪುಸ್ತಕಗಳು, ವಿಜ್ಞಾನ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಯುವಸೇವಾ ಬಳಗದ ಅಧ್ಯಕ್ಷ ಡಾ. ಅದೀಪ್ ಶೆಟ್ಟಿಯವರು ಈ ಪುಸ್ತಕಗಳನ್ನು ಹಸ್ತಾಂತರಿಸಿದರು. ಶಾಲಾ ಸಂಚಾಲಕ ಗಣಪತಿ ಭಟ್ ಸೇರಾಜೆ, ಪ್ರೌಢಶಾಲಾ ಮುಖ್ಯ ಶಿಕ್ಷಕ ಜಯಪ್ರಕಾಶ್ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್. ರೈ, ಒಡಿಯೂರು ಶ್ರೀ ಸಂಸ್ಥಾನದ ಕಾರ್ಯನಿರ್ವಾಹಕ ಪದ್ಮನಾಭ ಒಡಿಯೂರು, ಹಿರಿಯ ಪತ್ರಕರ್ತ ಯಶವಂತ […]

Read More

ಕು.ದೀಪಶ್ರೀಗೆ ಶ್ಲೋಕ ಕಂಠಪಾಠದಲ್ಲಿ ದ್ವಿತೀಯ : ಕು.ವಿದ್ಯಾಲಕ್ಷ್ಮಿ ಭಾಷಣ ಸ್ಪರ್ಧೆಯಲ್ಲಿ ತೃತೀಯ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿನಿ ಕು.ದೀಪಶ್ರೀ ಪದ್ಯಾಣ 9ನೇ ತರಗತಿ ಶಾಂತಿವನ ಟ್ರಸ್ಟ್ ರಿ. ಧರ್ಮಸ್ಥಳ ಆಯೋಜಿಸಿದ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬದುಕಿಗೆ ಬೆಳಕು ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ. ಮತ್ತು ಹಿರಿಯ ಪ್ರಾಥಮಿಕ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಕು. ವಿದ್ಯಾಲಕ್ಷ್ಮಿ 6ನೇ ತರಗತಿ ತೃತೀಯ ಬಹುಮಾನವನ್ನು ಪಡೆದು ಕೊಂಡಿರುತ್ತಾಳೆ.

Read More

Deepashree is selected for state level in speech competition

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿನಿ ಕು.ದೀಪಶ್ರೀ ಪದ್ಯಾಣ 9ನೇ ತರಗತಿ ದ.ಕ ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯ ಸಂಸ್ಕೃತ ಭಾಷಣದಲ್ಲಿ ಪ್ರಥಮ ಬಹುಮಾನ ಪಡೆದು ಕರ್ನಾಟಕ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ.

Read More

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top